Advertisement
ಹಾಸನ ಮೂಲದ ಸದ್ಯ ಮೂಡಲಪಾಳ್ಯದಲ್ಲಿ ವಾಸವಿದ್ದ ಮುರುಳೀಧರ ಎಂಬಾತನನ್ನು ಏ.4ರಂದು ರಾತ್ರಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಸದ್ಯ ಕಗ್ಗಲೀಪುರದಲ್ಲಿ ವಾಸವಾಗಿರುವ ರಸೂಲ್‌ನನ್ನು ಬಂಧಿಸಲಾಗಿದೆ. ಬಂಧಿತ ರಸೂಲ್ ನಗರದ ಹಲವು ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಪಿಕ್ ಪ್ಯಾಕೆಟ್, ಡಾಕಾಯಿತಿ ಪ್ರಕರಣಗಳಲ್ಲಿ ಪೋಲಿಸರ ವಾಟೆಂಡ್ ಲಿಸ್ಟ್‌ನಲ್ಲಿದ್ದ. ಅಲ್ಲದೆ, ಜೈಲು ಸೇರಿ ಬಿಡುಗಡೆಯಾಗಿ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
Related Articles
Advertisement
ಕುಡಿದ ಮತ್ತಲ್ಲಿ ರಹಸ್ಯ ಬಹಿರಂಗಗೊಳಿಸಿದ್ದ ಹಂತಕಕಲಾಸಿಪಾಳ್ಯ, ಮಾರುಕಟ್ಟೆ ವ್ಯಾಪ್ತಿಯಲ್ಲಿ ಪಿಕ್ ಪ್ಯಾಕೇಟ್, ದರೋಡೆ, ಡಕಾಯಿತಿ ಕೃತ್ಯದಲ್ಲಿ ತೊಡಗಿದ್ದ ಯುವಕರು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಇತ್ತೀಚೆಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಆ ಗ್ರೂಪ್‌ನಲ್ಲಿದ್ದ 40-50 ಮಂದಿಯನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಮುರಳೀಧರನ ಹಂತಕನ ಬಗ್ಗೆ ಸಣ್ಣ ಸುಳಿವು ಸಿಕ್ಕಿತ್ತು. ಜತೆಗೆ ಆರೋಪಿ ಕೊಲೆ ಮಾಡಿದ ನಂತರ ರಸೂಲ್ ಕಲಾಸಿಪಾಳ್ಯದ ಸ್ಥಳವೊಂದರಲ್ಲಿ ಮದ್ಯ, -ಗಾಂಜಾ ಸೇವಿಸುತ್ತ ಕೊಲೆ ರಹಸ್ಯವನ್ನು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ. ಈ ಮಾಹಿತಿ ಬಾತ್ಮೀದಾರರ ಮೂಲಕ ಪೊಲೀಸರಿಗೆ ಸಿಕ್ಕಿತ್ತು. ಅದರಂತೆ ಪತ್ತೆಕಾರ್ಯ ನಡೆಸಿದಾಗ ಕೊತ್ತಂಬರಿ ಮಂಡಿ ಬಳಿ ಅನುಮಾನಸ್ಪದವಾಗಿ ರಸುಲ್ ಓಡಾಡುತ್ತಿದ್ದುದು ಗೊತ್ತಾಯಿತು. ಅದರಂತೆ ಆತನನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹತ್ಯೆ ಮಾಡುವ 5 ದಿನಗಳ ಹಿಂದೆ ನಡೆದಿತ್ತು ವಿವಾಹ
ಆರೋಪಿ ರಸೂಲ್ ಈ ಮೊದಲು ಕೆ.ಆರ್.ಮಾರುಕಟ್ಟೆಯ ಕೊತ್ತಂಬರಿ ಸೊಪ್ಪಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಜೈಲಿನಿಂದ ಹೊರಬಂದ ನಂತರ ಮಂಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ ಕನಕಪುರ ಮೂಲದ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಅದೂ ಹತ್ಯೆ ನಡೆಯುವ ಕೇವಲ ಐದು ದಿನಗಳ ಹಿಂದಷ್ಟೇ. ಅಲ್ಲದೆ, ಆಕೆಯನ್ನು ಕರೆತಂದು ಕಗ್ಗಲೀಪುರದ ಬಾಡಿಗೆ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದ. ಘಟನೆ ನಡೆದ ನಂತರ ಇಲ್ಲಿಂದ ಮನೆ ಬದಲಿಸುವ ಇಚ್ಚೆ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಸಾಕ್ಷ್ಯಾಧಾರಗಳ ನಾಶ
ಹತ್ಯೆ ನಡೆದ ಬಳಿಕ ರಸೂಲ್ ಅಲ್ಲೇ ಇದ್ದ ಕೊಳಾಯಿಯಲ್ಲಿ ಚಾಕುವನ್ನು ತೊಳೆದು ಎಸೆದು ಓಡಿಹೋಗಿದ್ದ. ಅಲ್ಲದೆ, ಹತ್ಯೆಯಾದ ಮಾರನೇ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಕಲಾಸಿಪಾಳ್ಯದ ಲೇಟೆಸ್ಟ್ ಬಾತ್ ರೂಂಗೆ ಬಂದು ರಕ್ತದ ಕಲೆ ಅಂಟಿಕೊಂಟ್ಟಿದ್ದ ಬಟ್ಟೆಗಳನ್ನು ಸೌದೆ ಒಲೆಯಲ್ಲಿ ಹಾಕಿ ಸುಟ್ಟು ಸಾಕ್ಷ್ಯಾಧಾರ ನಾಶ ಪಡಿಸಿದ್ದ. ಘಟನೆ ನಡೆದ ಬಳಿಕ 15 ದಿನ ನಾಪತ್ತೆಯಾಗಿದ್ದ ಆರೋಪಿ, ಬಳಿಕ ಘಟನಾ ಸ್ಥಳಕ್ಕೆ ಬಂದು ಆಗುತ್ತಿರುವ ಬೆಳವಣಿಗೆಗಳ ಮಾಹಿತಿ ಪಡೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.