Advertisement

“ಸತ್ತ ವ್ಯಕ್ತಿ’ಬದುಕಿ ಬಂದ ! ; ಶೋಕದ ಮಡುವಿನಲ್ಲಿದ್ದವರಿಗೆ ದೀಪಾವಳಿ

09:24 AM Nov 07, 2018 | Team Udayavani |

ಜೈಪುರ: ಪ್ರಜ್ಞೆ ಕಳೆದುಕೊಂಡಿದ್ದ ಹಿರಿಯ ವ್ಯಕ್ತಿಯೋರ್ವರನ್ನು ಖಾಸಗಿ ವೈದ್ಯರು ಸತ್ತಿರುವುದಾಗಿ ಘೋಷಿಸಿ, ಮನೆ ಮಂದಿ ಅಂತಿಮ ವಿಧಿಯ ಕೆಲಸಗಳನ್ನು ನಡೆಸುತ್ತಿದ್ದಾಗ ಆ ವ್ಯಕ್ತಿ ಎದ್ದು ಕುಳಿತ ಘಟನೆ ಜುನ್‌ಜುಹುನು ಜಿಲ್ಲೆಯ ಖೇತ್ರಿ ತೆಹ್ಸಿಲ್‌ನಲ್ಲಿ ಸಂಭವಿ ಸಿದೆ. ಶೋಕದ ಮಡುವಿಗೆ ಜಾರಿದ್ದ ಕುಟುಂಬದಲ್ಲಿ ಈಗ ದೀಪಾವಳಿ ಸಂಭ್ರಮ ಮನೆ ಮಾಡಿದೆ.

Advertisement

ಗುಜ್ಜರ್‌ ಕುಟುಂಬದ 95ರ ಹರೆಯದ ಬುದ್ಧರಾಮ ಗುಜ್ಜಾರ್‌ ಅವರು ಪ್ರಜ್ಞೆ ಕಳೆದುಕೊಂಡು ನಿಶ್ಚಲರಾದಾಗ ಮನೆ ಮನೆ ಖಾಸಗಿ ವೈದ್ಯರನ್ನು ಕರೆಸಿದ್ದರು. ಪರೀಕ್ಷಿಸಿದ ವೈದ್ಯರು ಅಜ್ಜ ಸತ್ತಿರುವುದಾಗಿ ಘೋಷಿಸಿದರು. ಅನಂತರ ಅಂತಿಮ ವಿಧಿಗಾಗಿ ಸಿದ್ಧತೆ ನಡೆಸ ಲಾಯಿತು. ಅಲ್ಲಿನ ಸಂಪ್ರದಾಯದಂತೆ ಕುಟುಂಬದ ಪುರುಷರ ತಲೆ ಕೂದಲನ್ನು ಕೂಡ ಪೂರ್ತಿ ಕತ್ತರಿಸಿ ಅನಂತರ ಮೃತ ದೇಹದ ಸ್ನಾನಕ್ಕೆ ವ್ಯವಸ್ಥೆ ಮಾಡಲಾಯಿತು.

ಸ್ನಾನ ಪ್ರಕ್ರಿಯೆಯಲ್ಲಿ ಕುಟುಂಬಿಕರು ಮೈಮೇಲೆ ನೀರು ಹಾಕಿದಾಗ ದೇಹದಲ್ಲಿ ನಡುಕ ಕಾಣಿಸಿತು. ಕೂಡಲೇ ಬೇರೆ ಮಂಚದ ಮೇಲೆ ಮಲಗಿಸಲಾಯಿತು. ಅಷ್ಟರಲ್ಲಿ ಉಸಿರಾಡಲು ಆರಂಭಿಸಿ, ಸ್ವತಃ ಅವರೇ ಎದ್ದು ಕುಳಿತರು. ಏನಾಯಿತು ಎಂದು ಸುತ್ತಲಿದ್ದವರು ಕೇಳಿದಾಗ, “ಎದೆ ನೋವು ಕಾಣಿಸಿಕೊಂಡು ಉಸಿರಾಟ ಕಷ್ಟವಾಯಿತು. ಅನಂತರ ಏನಾಯಿತೋ ಗೊತ್ತಿಲ್ಲ’ ಎಂದು ಬುದ್ಧರಾಮ ತಿಳಿಸಿದರು.

ಅಂತಿಮ ವಿಧಿ ನಡೆಸುತ್ತಿದ್ದ  ಸಂದರ್ಭ ಎದ್ದು ಕುಳಿತ ಅಜ್ಜ

ಸಂಭ್ರಮದ ದೀಪಾವಳಿ
“ನಮಗೆ ಇದೊಂದು ಅತ್ಯಂತ ಸಂಭ್ರಮದ ದೀಪಾವಳಿ. ತಂದೆಯ ಸಾವು ಸಂಭವಿಸುತ್ತಿದ್ದರೆ ನಮ್ಮಲ್ಲಿನ ಯಾವುದೇ ಮನೆ ಯಲ್ಲಿಯೂ ದೀಪಾವಳಿ ಆಚರಿಸುವಂತೆ ಇರಲಿಲ್ಲ. ಆದರೆ ಈ ಬಾರಿ ನಮಗೆ ಎಂದೆಂದೂ ಮರೆಯಲಾರದ ಅತ್ಯಂತ ಸಡಗರದ ಹಬ್ಬವಾಗಿದೆ’ ಎಂದು ಬುದ್ಧರಾಮ ಅವರ ಕಿರಿಯ ಪುತ್ರ ರಂಜಿತ್‌ ಅವರು ತಿಳಿಸಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next