Advertisement

ಅನ್ನದಾತನ ಮನೆ ಬಾಗಿಲಿಗೇ ತೆರಳಿದ ಡಿಸಿಎಂ

01:14 PM Dec 24, 2020 | Suhan S |

ಮಾಗಡಿ: ಅನ್ನದಾತನ ಮನೆ ಬಾಗಿಲಿಗೇ ತೆರಳಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ರೈತ ದಿನದ ಶುಭಾಶಯ ಕೋರಿ ಅಭಿವಂದನೆ ಸಲ್ಲಿಸಿದರು. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿದ್ದ ಅನುಮಾನಗಳನ್ನು ನಿವಾರಿಸಿದರು.

Advertisement

ಮಾಗಡಿ ತಾಲೂಕಿನ ಉಕ್ಕಡ-ಗುಡ್ಡಹಳ್ಳಿಗ್ರಾಮಕ್ಕೆ ಬಂದ ಡಿಸಿಎಂ, ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಬಳಿ ತೆರಳಿ ಶುಭಾಶಯ ಕೋರಿ ಶಿರಬಾಗಿ ನಮಿಸಿ ಅಭಿವಂದನೆ ಸಲ್ಲಿಸಿದರು. ರೈತರಾದ ನಾರಾಯಣಪ್ಪ, ನಾಗರಾಜ ಮತ್ತುನರಸಿಂಹಯ್ಯ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.

ಡಿಸಿಎಂ ಸರಳತೆಗೆ ಮೆಚ್ಚುಗೆ: ಯಾವ ಮುನ್ಸೂಚನೆಯೂ ಇಲ್ಲದೆ ಸ್ವತಃ ಉಪ ಮುಖ್ಯಮಂತ್ರಿಗಳೇ ರಸ್ತೆಯಲ್ಲಿ ಕಾರು ನಿಲ್ಲಿಸಿ, ತಾವಿದ್ದ ಜಾಗಕ್ಕೇ ಬಂದು ಹೂ ಮಾಲೆ ಹಾಕಿ ಶುಭಕೋರಿದ್ದನ್ನು ಕಂಡು ರೈತರು, ಆ ಊರಿನ ಜನರೆಲ್ಲರೂ ಆಶ್ಚರ್ಯದಿಂದ ನೋಡಿದರು. ಕ್ಷಣ ಮಾತ್ರದಲ್ಲಿ ಇಡೀ ಊರಿನ ಜನರು, ಹಿರಿಯರು, ಮಹಿಳೆಯರು, ಯುವಕರು ಅಲ್ಲಿ ಸೇರಿಕೊಂಡರಲ್ಲದೆ, ಡಿಸಿಎಂ ಸರಳತೆ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು.

ರೈತರೊಂದಿಗೆ ಸಂವಾದ: ರೈತರ ಜತೆ ಸಂವಾದನಡೆಸಿದ ಡಿಸಿಎಂ, ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವಕೃಷಿ ಕಾಯ್ದೆಗಳಬಗ್ಗೆ ಜನರಲ್ಲಿದ್ದ ಅನುಮಾನ -ಗೊಂದಲಗಳನ್ನುತಿಳಿಗೊಳಿಸಿದರು. ಅನೇಕ ವರ್ಷದಿಂದ ರೈತರ ಪಾಲಿಗೆ ಮರಣ ಶಾಸನವಾಗಿದ್ದ ಕೃಷಿ ಉತ್ಪನ್ನಮಾರುಕಟ್ಟೆ (ಎಪಿಎಂಸಿ) ಕಾಯ್ದೆಗೆ ಕ್ರಾಂತಿಕಾರಕತಿದ್ದುಪಡಿ ತರಲಾಗಿದೆ. ಇಷ್ಟು ನೀವು ಬೆಳೆದ ಬೆಳೆಯನ್ನು ನೀವೇ ಕಟಾವು ಮಾಡಿಕೊಂಡುಮಾರುಕಟ್ಟೆಯಲ್ಲಿ ಮಾರಬೇಕಾಗಿತ್ತು. ಮಧ್ಯವರ್ತಿಗಳ ಹಾವಳಿಯಿಂದ ಸರಿ ಬೆಲೆಗೆ ಮಾರಾಟವಾಗುತ್ತಿರಲಿಲ್ಲ. ಅನೇಕ ವೇಳೆ ರಾತ್ರಿಹೊತ್ತು ಮಾರುಕಟ್ಟೆಯಲ್ಲಿ ಮಲಗಬೇಕಾದ ಸ್ಥಿತಿ ಇತ್ತು. ಕಾಯ್ದೆ ಬದಲಾವಣೆ ಪರಿಣಾಮ ನೀವೆಲ್ಲರೂ ಮಾರುಕಟ್ಟೆಗೆ ಹೋಗ ಬೇಕಾದ ಅಗತ್ಯವಿಲ್ಲ. ಖರೀದಿದಾರನೇ ನಿಮ್ಮಲ್ಲಿಗೇ ಬಂದು ಬೆಳೆ ಖರೀದಿ ಮಾಡುತ್ತಾನೆ ಎಂದು ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌, ಮಾಗಡಿತಾಲೂಕಿನ ಬಿಜೆಪಿ ಅಧ್ಯಕ್ಷ ಧನಂಜಯ, ಬಿಜೆಪಿಮುಖಂಡ ಎಚ್‌.ಎಂ.ಕೃಷ್ಣಮೂರ್ತಿ, ರಾಜೇಶ್‌ಎಂ.ಆರ್‌.ರಾಘವೇಂದ್ರ, ಶ್ರೀನಿವಾಸಯ್ಯ,ಶಶಿಧರ್‌, ಆನಂದ, ಗೌಡರಪಾಳ್ಯದ ಗಂಗಾಧರ್‌, ದೊಡ್ಡಿಗೋಪಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next