Advertisement

ಚಾಲಕರ ಮಾಹಿತಿ ಸಂಗ‹ಹಿಸಲುಡಿಸಿಎಂ ಪರಮೇಶ್ವರ್‌ ಸೂಚನೆ

03:28 PM Jul 01, 2018 | |

ಬೆಂಗಳೂರು: ಇತ್ತೀಚೆಗೆ ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ ಸಂಚರಿಸುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಓಲಾ, ಊಬರ್‌ ಸೇರಿ ಆ್ಯಪ್‌ ಆಧಾರಿತ ಸಂಸ್ಥೆಗಳ ಚಾಲಕರ ಸಂಪೂರ್ಣ ಮಾಹಿತಿ
ಸಂಗ್ರಹಿಸುವಂತೆ ಉಪಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ರಾಜ್ಯ ಪೊಲೀಸ್‌
ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರಿಗೆ ಸೂಚಿಸಿದ್ದಾರೆ.

Advertisement

ಶನಿವಾರ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಚಾಲಕರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಾಪರ ಮಾಹಿತಿ ಸಂಗ್ರಹಿಸಬೇಕು. ಪೊಲೀಸರಿಂದ ಚಾಲಕನ ದಾಖಲಾತಿ ಪರಿಶೀಲಿಸಬೇಕು. ಈ ಮೂಲಕ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ರಾತ್ರಿ ವೇಳೆ ಮಹಿಳೆಯರೇ ಚಾಲಕರಾಗಿದ್ದರೆ ಮಹಿಳಾ ಪ್ರಯಾಣಿಕರು ನಿರ್ಭಯವಾಗಿ ಸಂಚರಿಸಬಹುದು ಎಂದು ಹೇಳಿದರು.

ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ನೀಡಬೇಕಿದೆ. ಟ್ಯಾಕ್ಸಿ ಚಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ
ರಾತ್ರಿ ವೇಳೆ ಮಹಿಳೆ ಕ್ಯಾಬ್‌ ಬಳಸಿಕೊಂಡರೆ ಆ ಕ್ಯಾಬ… ಹಾಗೂ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಆ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೂ ಮಾಹಿತಿ ನೀಡಬೇಕು ಎಂದು ಮಾಲೀಕರಿಗೆ ಸೂಚಿಸಿದರು. 

ಸಭೆಯಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹಿತೇಂದ್ರ, ಸೀಮಂತ್‌ ಕುಮಾರ್‌ಸಿಂಗ್‌, ಓಲಾ, ಊಬರ್‌ ಸೇರಿದಂತೆ ಇತರೆ ಕ್ಯಾಬ್‌ ಸಂಸ್ಥೆಯ ಮಾಲೀಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next