Advertisement

ಅರ್ಕಿಟೆಕ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ನೀಡಲು ಒಡಂಬಡಿಕೆ : ಸಚಿವ ಗೋವಿಂದ ಕಾರಜೋಳ

09:59 PM Feb 11, 2021 | Team Udayavani |

ಬೆಂಗಳೂರು: ಲೋಕೋಪಯೋಗಿ ಇಲಾಖೆಯು ಯಲಹಂಕದಲ್ಲಿರುವ BMS ಸ್ಕೂಲ್ ಆಫ್ ಅರ್ಕಿಟೆಕ್ಚರ್ ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 6 ತಿಂಗಳ ಅವಧಿಯ ತರಬೇತಿ ( ಇಂಟರ್ನ್ ಶಿಪ್)  ನೀಡಲು  ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Advertisement

ಇಂದು (ಫೆ.11 ಗುರುವಾರ) ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಒಂಡಬಂಡಿಕೆ ಪತ್ರವನ್ನು ಉಪಮುಖ್ಯಂತ್ರಿಯವರು  ಕಾಲೇಜಿನ  ಮುಖ್ಯಸ್ಥರಾದ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ :ಗಂಡು ಮಕ್ಕಳಿಲ್ಲದ ಕೊರಗು : ತನ್ನ 4 ಹೆಣ್ಣು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೃಷ್ಣರೆಡ್ಡಿ,ಕೆಶಿಫ್ ನ ಮುಖ್ಯಯೋಜನಾಧಿಕಾರಿ ಬಿ.ಗುರುಪ್ರಸಾದ್, ಕಾಲೇಜಿನ ನಿರ್ದೇಶಕ ಡಾ.ಶೈಲ ಬಂಟನೂರು, ಸಹ ಪ್ರಾಧ್ಯಾಪಕ ಹರೀಶ್ ರಾಮ್, ಸಹಾಯಕ ಪ್ರಾಧ್ಯಾಪಕ ವಿನುತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next