Advertisement

ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಡಿಸಿಎಂ ಗೋವಿಂದ ಕಾರಜೋಳ

09:11 PM Apr 17, 2020 | keerthan |

ಬೆಂಗಳೂರು: ಲಾಕ್ ಡೌನ್ ನಿಂದ ಕಷ್ಟದಲ್ಲಿರುವವರಿಗೆ ಆಶ್ರಯ ತಾಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಯಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಭೇಟಿ ನೀಡಿ, ಆಶ್ರಯದಲ್ಲಿರುವವರೊಂದಿಗೆ  ಸಮಾಲೋಚನೆ ನಡೆಸಿದರು.

Advertisement

ಮಿಜೋರಾಂ, ಈಶಾನ್ಯ ರಾಜ್ಯಗಳು, ಅಂತರ್ ರಾಜ್ಯಗಳಿಂದ ಆಗಮಿಸಿ ಲಾಕ್ ಡೌನ್ ನಿಂದ ಬಾಧಿತರಾಗಿರುವವರಿಗೆ ಆಶ್ರಯ ನೀಡಲಾಗಿರುವ ಜಯನಗರದ ಮಾರೇನಹಳ್ಳಿಯಲ್ಲಿರುವ ವಿದ್ಯಾರ್ಥಿನಿಲಯ ಹಾಗೂ ಎಂ.ಜಿ. ರಸ್ತೆಯಲ್ಲಿರುವ ವಸತಿ ನಿಯಯಕ್ಕೆ ಇಂದು ಭೇಟಿ ನೀಡಿದರು. ಅವರೊಂದಿಗೆ ಸಮಾಲೋಚನೆ ನಡೆಸಿ, ಇಲಾಖೆಯಿಂದ ನೀಡುತ್ತಿರುವ ಸೌಲಭ್ಯಗಳು, ಊಟೋಪಚಾರ, ಆರೈಕೆ, ಆರೋಗ್ಯ ತಪಾಸಣೆ, ಸ್ವಚ್ಚತೆ, ಸಿಬ್ಬಂದಿವರ್ಗದ ನಡವಳಿಕೆಯ ಬಗ್ಗೆ ವಿಚಾಸಿದರು. ಮಾಸ್ಕ್, ಪೇಸ್ಟ್, ಸಾಬೂನು, ಕರವಸ್ತ್ರ, ಟವೆಲ್, ಉಡುಪು, ಔಷಧೋಪಚಾರಗಳ ಗುಣಮಟ್ಟವನ್ನು ಪರಿಶೀಲಿಸಿ, ವಿತರಿಸಿದರು.

ಈ ನಿರಾಶ್ರಿತರಿಗೆ ನೀಡಿರುವ ವಸತಿ ಕೊಠಡಿಗೆ ಭೇಟಿ ನೀಡಿ, ಬೆಡ್, ಬೆಡ್ ಶೀಟ್, ಉಡುಪು, ಸ್ವಚ್ಚತೆಯನ್ನು ಪರಿಶೀಲಿಸಿದರು. ನಂತರ ಅಡುಗೆ ಮನೆಗೆ ಭೇಟಿ, ಸಾಮಗ್ರಿಗಳನ್ನು ಪರಿಶೀಲಿಸಿದರು. ಅಡುಗೆ ತಯಾರಕರೊಂದಿಗೂ ಚರ್ಚಿಸಿ, ಶುದ್ದ ಮತ್ತು ಗುಣಮಟ್ಟದ ಊಟವನ್ನು ನೀಡುವಂತೆ ಸೂಚಿಸಿದರು. ಈ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಮಾಡಿಸಿ, ಔಷಧೋಪಚಾರ ಮಾಡಿಸಿದರು. ಬೋಜನಾಲಯದಲ್ಲಿ ತಾವೇ ತಮ್ಮ ಕೈಯಿಂದಲೇ ಊಟ ಬಡಿಸಿ, ಯಾರೂ ಆತಂಕಕ್ಕೊಳಗಾಗಬಾರದು. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಲಾಕ್ ಡೌನ್ ಅವಧಿ ಮುಗಿಯುವವರೆಗೂ ವಿದ್ಯಾರ್ಥಿ ನಿಲಯಗಳಲ್ಲೇ ವಾಸವಿರಬೇಕು. ಸಾಮಾಜಿಕ ಅಂತರ ಪಾಲಿಸಬೇಕು ಎಂದು ತಿಳಿಸಿದರು.

ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕುಮಾರ ನಾಯಕ್, ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಸಲಹೆಗಾರರಾದ ಶ್ರೀ ಇ. ವೆಂಕಟಯ್ಯ, ಆಯುಕ್ತ ಶ್ರೀ ಪೆದ್ದಪ್ಪಯ್ಯ,  ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next