Advertisement

ರಾಜ್ಯದಲ್ಲಿ ಎರಡು ವರ್ಷ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ : ಗೋವಿಂದ ಕಾರಜೋಳ

05:59 PM Jul 04, 2021 | Team Udayavani |

ಕುಷ್ಟಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೇಯೇ  ಇಲ್ಲ. ಮುಂದಿನ ಎರಡು ವರ್ಷಗಳವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು ಆಗಿರುತ್ತಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರವು ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಕುಷ್ಟಗಿ ತಾಲೂಕಿನ ಮಾಜಿ ದೇವದಾಸಿಯರಿಗೆ  ಜಮೀನಿನ ಖರೀದಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ಇಲ್ಲ. ಬದಲಾವಣೆಯ ನಂತರ ಬಂದು ಕೇಳಿದರೆ ಹೇಳುವೆ. ಬಿಜೆಪಿಯಲ್ಲಿ ದಲಿತ ಸಿಎಂ ಬಗ್ಗೆ ಸುದ್ದಿಗಾರರ ಪ್ರಶ್ನೆ ಇಂತಹ ಪ್ರಶ್ನೆ ಬೇಡ ಎಂದರು.

ರಾಜ್ಯ ಕಾಂಗ್ರೆಸ್ನಲ್ಲಿ ಈಗಲೇ ಮುಂದಿನ ಸಿಎಂ ವಿಚಾರ ಹಾಗೂ ದಲಿತ ಸಿಎಂ ಪ್ರಸ್ತಾಪ ಕುರಿತು ಕಾಂಗ್ರೆಸ್ ದಲಿತರನ್ನು, ಅಲ್ಪ ಸಂಖ್ಯಾತರನ್ನು, ಹಿಂದುಳಿದವರನ್ನು ಓಟ್ ಬ್ಯಾಂಕ್ ರಾಜಕಾರ ಮಾಡಿಕೊಂಡು 60 ವರ್ಷ ಆಡಳಿತ ಮಾಡಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿದ್ಯಾವಂತರಾಗಿ ತಿಳುವಳಿಕೆ ಬಂದಾಗ ಕಾಂಗ್ರೆಸ್ನಿಂದ ದೂರ ಸರಿದಿದ್ದು ಇದೀಗ ಕಾಂಗ್ರೆಸ್ ಅನಾಥವಾಗಿದೆ. ಯಾವ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ತರುವ ಪ್ರಯತ್ನ ಆಗಲಿಲ್ಲ. ಕಳೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ, ಮಹಾತ್ಮ ಗಾಂಧೀಜೀಯವರು ಹೇಳಿದಂತೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಲ್ಲ ಸ್ವಾತಂತ್ರ್ಯ ಹೋರಾಟಕ್ಕಾಗಿ ಕಟ್ಟಿಕೊಂಡ ಸಂಘಟನೆಯಾಗಿದ್ದು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಲು ಹೇಳಿದ್ದರು. ಮಹಾತ್ಮ ಗಾಂಧೀಜಿಯವರು ಹೇಳಿದ ಮಾತು ಆಗ ಆಗಲಿಲ್ಲ ಈಗ ಆಗುತ್ತಿದೆ.

ಇದನ್ನೂ ಓದಿ: ಬೆಳಗಾವಿ : ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ: ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

ರಾಯಚೂರಿನಲ್ಲಿ ಭೂ ಒಡೆತನ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಾನೇ ಸ್ವತಃ ರಾಯಚೂರಿಗೆ ಹೋಗಿ, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಿ, ತನಿಖೆ ಕೈಕೊಳ್ಳಲಾಗಿತ್ತು ನಂತರ ಸಮಾಜ ಕಲ್ಯಾಣ ಖಾತೆ ಬದಲಾದಾಗ ಇನ್ನೊಬ್ಬರು ಮಂತ್ರಿಗಳಾಗಿದ್ದರಿಂದ ಸದರಿ ಪ್ರಕರಣ ಪುನರಾವಲೋಕನ ಮಾಡಲು ಸಾಧ್ಯವಾಗಲಿಲ್ಲ ಎಂದರು.

Advertisement

ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಡಿಸಿಎಂ ಎಲ್ಲಿಯವರೆಗೂ ಸಾಮಾಜಿಕ ಕಳಕಳಿ, ಕಾಳಜಿ ಎಲ್ಲಿಯವರೆಗೂ ಆಗುವುದಿಲ್ಲವೋ ಅಲ್ಲಿಯವರೆಗೂ ದೌರ್ಜನ್ಯ ಪ್ರಕರಣ ನಡೆಯುತ್ತಿದ್ದು ಅದಕ್ಕಾಗಿ ಸರ್ಕಾರ ಪ್ರತಿಬಂಧಕ ಕಾನೂನು ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಿದೆ ಎಂದರು, ಯಾರು ನೊಂದಿರುತ್ತಾರೆ ಅಂತಹ ಕುಟುಂಬಗಳಿಗೆ ಪರಿಹಾರ ಸಹ ನೀಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next