ಚಿಕ್ಕೋಡಿ: ರಾಜ್ಯದಲ್ಲಿ ಕೋವಿಡ್ ಹೆಚ್ಚಾದರೂ ಲಾಕಡೌನ್ ಮಾಡುವ ಪ್ರಸ್ತಾಪ ಸರಕಾರದ ಮುಂದಿಲ್ಲ. ಕೋವಿಡ್ ಹೊಡೆದೊಡಿಸಲು ದೇಶದ ಜನರಿಗೆ ಭಗವಂತ ದೊಡ್ಡ ಶಕ್ತಿ ಕೊಟ್ಟಿದ್ದಾನೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಚಿಕ್ಕೋಡಿ ನಗರದ ಮರಡಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಎರಡು ತಿಂಗಳು ಲಾಕಡೌನ್ ಮಾಡಲಾಗಿತ್ತು. ಇದರಿಂದ ದೇಶ ಹಾಗೂ ರಾಜ್ಯದ ಜನರಿಗೆ ತೊಂದರೆಯಾಗಿದೆ ಎಂದರು.
ಕಾರ್ಖಾನೆಗಳು. ಕಂಪನಿಗಳು. ಹೊಟೇಲ್ ಉದ್ಯಮ ನಿಂತು ಹೋಗಿದೆ. ಇದರಿಂದ ಜನಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಜನರ ತೊಂದರೆ ನೀಗಿಸಲು ಕೇಂದ್ರ ಸರಕಾರ ಆತ್ಮನಿರ್ಭರ ಭಾರತ ಜಾರಿಗೆ ತಂದು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ 4300 ಕೋಟಿ ರಾಜ್ಯಕ್ಕೆ ಪ್ಯಾಕೇಜ ಬಂದಿದೆ. ಆರ್ಥಿಕವಾಗಿ ಹಿಂದುಳಿದವರು ಲಾಕಡೌನ್ ದಲ್ಲಿ ತೊಂದರೆಯಾಗಿದ್ದವರನ್ನು ಗುರ್ತಿಸಿ ನೇರವಾಗಿ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡುತ್ತಾ ಹೋದರೆ ಕೋವಿಡ್ ನಿಯಂತ್ರಣಕ್ಕೆ ಬರಲಿದೆ. ಚಿಕ್ಕೋಡಿ ನಗರದ ಪ್ರಾಚೀನ ದೇವಸ್ಥಾನವಾದ ಮರಡಿ ಬಸವೇಶ್ವರ ದೇವಸ್ಥಾನದ ಜೊರ್ನೋದ್ದಾರಕ್ಕೆ 2 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ. ಎನ್.ಎಸ್. ವಂಟಮುತ್ತೆ, ನಾಗರಾಜ ಮೇದಾರ, ಅಕ್ರಮ ಅರ್ಕಾಟೆ ಇತರರು ಇದ್ದರು.