Advertisement

ವೃಂದ-ನೇಮಕಾತಿ ಕರಡು ನಿಯಮ ತಿದ್ದುಪಡಿಗೆ ವಿರೋಧಿ ಡಿಸಿಎಂ ಕಾರಜೋಳಗೆ ಮನವಿ

08:22 PM Feb 02, 2021 | Team Udayavani |

ಲೋಕಾಪುರ: ವೃಂದ ಮತ್ತು ನೇಮಕಾತಿ ಕರಡು ನಿಯಮ ತಿದ್ದುಪಡಿಗೆ ವಿರೋಧಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಧೋಳ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಡಿಸಿಎಂ ಗೋವಿಂದ ಕಾರಜೋಳ ಆವರಿಗೆ ಮನವಿ ಸಲ್ಲಿಸಿದರು.

Advertisement

ನೇಮಕಾತಿ ಹೊಂದಿದ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 7ನೇ ತರಗತಿ ವೃಂದದಲ್ಲಿ ಉಳಿಸಿಕೊಂಡು, ಸೇವಾ ನಿರತ ಪ್ರಾಥಮಿಕ ಶಾಲಾ ಪದವಿ ಪಡೆದ ಶಿಕ್ಷಕರನ್ನು ಸಂಪೂರ್ಣವಾಗಿ ಸೇವಾ ಜೇಷ್ಠತೆಯೊಂದಿಗೆ ವಿಲೀನಗೊಳಿಸುವುದು. ನಂತರ ನೇರ ನೇಮಕಾತಿಗೆ ಶೇ. 25 ಮತ್ತು ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗಾಗಿ ಶೇ. 75 ಮೀಸಲಾತಿ ಮತ್ತು ಬಡ್ತಿ ಎಂಬ ಪದವನ್ನು ಕೈಬಿಟ್ಟು ವಿಲೀನ ಎಂದು ಬದಲಾವಣೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಮಹದಾಯಿಗಾಗಿ ಪ್ರಧಾನಿ ಮೋದಿ ಭೇಟಿ ಅರ್ಥವಿಲ್ಲದ್ದು: ಕೋನರಡ್ಡಿ

ಅಧ್ಯಕ್ಷ ಪಿ.ಅರ್‌. ಬೆಳಗಲಿ, ಪ್ರಧಾನ ಕಾರ್ಯದರ್ಶಿ ರಮೇಶ ಅರಕೇರಿ, ನಿರ್ದೇಶಕರಾದ ಎಸ್‌. ಎಸ್‌. ಪುರವಾರ, ವಿ.ಎ. ವರ್ಚಗಲ್‌, ಮಂಜು ಪರೀಟ, ಅಣ್ಣಿಗೇರಿ, ಮುಧೋಳ ತಾಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಎಚ್‌. ನಿಡೋಣಿ,ಸಿಆರ್‌ಪಿ ಜಿ.ಬಿ. ಗಾಣಿಗೇರ, ಕೆ.ಎಲ್‌. ಮಾಳೇದ, ಹಿರಿಯ ಶಿಕ್ಷಕರಾದ ಆರ್‌. ಎಲ್‌. ಪಾಟೀಲ, ಆರ್‌.ಎಸ್‌. ಪಾಟೀಲ, ವಿ.ಐ. ಪಾಟೀಲ, ಎಸ್‌.ಡಿ. ನಿಲಗುಂದ, ಆರ್‌.ಆರ್‌. ಕೋಲ್ಹಾರ, ಎಸ್‌.ಎಸ್‌. ವಿರಕ್ತಮಠ, ಎಂ.ಬಿ. ಹಾದಿಮನಿ, ಎನ್‌. ಐ. ಮುದ್ದಾಪೂರ, ಎಸ್‌. ಎಸ್‌. ಶಿರಗುಂಪಿ, ಎಚ್‌. ಎಫ್‌. ಬೂದಿಹಾಳ, ಎಂ. ಎಸ್‌. ಜಾಲಿಕಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next