Advertisement

DCM D.K. Shivakumar 15 ದಿನಗಳಲ್ಲಿ ಮತ್ತೆ ತಿಹಾರ್‌ ಜೈಲಿಗೆ: ಯತ್ನಾಳ್‌

10:10 PM Jul 21, 2024 | Team Udayavani |

ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ನಾನು ಸಲ್ಲಿಸಿರುವ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಲಿದ್ದು 15 ದಿನಗಳ ಒಳಗೆ ಡಿಕೆಶಿ ಮತ್ತೆ ತಿಹಾರ್‌ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಡಿಕೆಶಿ ವಿರುದ್ಧದ ಕೇಸ್‌ ಸುಪ್ರೀಂ ಕೋರ್ಟ್‌ನಲ್ಲಿ ವಜಾ ಮಾಡಲಾಗಿದೆ. ಇನ್ನು 15 ದಿನಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಡಿಕೆಶಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಬಿಜೆಪಿಯಲ್ಲಿ ತಪ್ಪು ಮಾಡಿದ ಕೆಲವರು ಜೈಲಿಗೆ ಹೋದರೆ ಪಕ್ಷ ಸ್ವತ್ಛ ಆಗುತ್ತದೆ. ಎಷ್ಟೇ ಒಳ ಒಪ್ಪಂದ ಮಾಡಿದರೂ ಲಾಲು ಪ್ರಸಾದ್‌ ಯಾದವ್‌ ಜೈಲಿಗೆ ಹೋದರು. ಮೋದಿ ನೇತೃತ್ವದಲ್ಲಿ ನಮ್ಮ ಪಕ್ಷ ಸ್ವತ್ಛ ಆಗಬೇಕು. ನಮ್ಮಲ್ಲಿಯ ಕೆಲವು ಹುಳುಗಳು ಜೈಲಿಗೆ ಹೋಗಬೇಕು

ಸೋಮಣ್ಣ ಸೋಲಿಸಲು ಆರು ಕೋಟಿ ರೂ.: 
ತುಮಕೂರಿನಲ್ಲಿ ವಿ. ಸೋಮಣ್ಣ ಅವರನ್ನು ಸೋಲಿಸಲು ನಮ್ಮ ಪಕ್ಷದವರೇ ಆರು ಕೋಟಿ ರೂ. ಕಳುಹಿಸಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳ ಒಪ್ಪಂದದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹಳ ಹಾನಿ ಆಗಿದೆ. 9 ಕಡೆ ಬಿಜೆಪಿ ಸೋಲಲು ಒಳ ಒಪ್ಪಂದವೇ ಕಾರಣ. ಬೀದರ, ದಾವಣಗೆರೆ, ಕಲಬುರಗಿ, ರಾಯಚೂರು, ಚಾಮರಾಜನಗರ ಸೋಲಿಸಲು ಒಪ್ಪಂದ ಆಗಿತ್ತು. ಶಾಮನೂರು ಶಿವಶಂಕರಪ್ಪ ಅವರು ರಾಘವೇಂದ್ರಗೆ ವೋಟ್‌ ಹಾಕುವಂತೆ ಹೇಳಿದ್ದರು. ರೇಣುಕಾಚಾರ್ಯ ಕಾಂಗ್ರೆಸ್‌ಗೆ ಮತ ಹಾಕುವಂತೆ ಹೇಳಿದ್ದು ಬಯಲಾಗಿದೆ. ಎಲ್ಲ ಕ್ಷೇತ್ರಗಳ ತನಿಖೆ ಆಗಲಿ ಎಂದರು.

ಹಾದಿ ಬೀದಿಯಲ್ಲಿ ಹೋಗುವವರಿಗೆ ಅಪ್ಪಾಜಿ ಎನ್ನುವುದಿಲ್ಲ: ಯತ್ನಾಳ್‌
ನಾವು ಹುಟ್ಟಿದವರಿಗೆ ಮಾತ್ರ ಅಪ್ಪಾಜಿ ಎನ್ನುತ್ತೇವೆ. ಹಾದಿ ಬೀದಿಯಲ್ಲಿ ಹೋಗುವವರಿಗೆ ಅಪ್ಪಾಜಿ ಎನ್ನುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕುಟುಕಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ನಲ್ಲಿಯ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಶಾಸಕಾಂಗ ಪಕ್ಷದಲ್ಲಿ ಸಚಿವರ ಮೇಲೆ ಆರೋಪ ಮಾಡಿದ್ದಾರೆ. ಸಚಿವರು ಗೌರವ ಕೊಡುತ್ತಿಲ್ಲ. ಕೆಲಸಕ್ಕೆ ಹೋದರೆ ಅನುದಾನ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆ ಮೇಲೆ ಜನರಿಗೆ ವಿಶ್ವಾಸ ಇಲ್ಲವಾಗಿದೆ. ಗ್ಯಾರಂಟಿ ಬೆನ್ನು ಹತ್ತದಂತೆ ಶಾಸಕರು ಹೇಳಿದ್ದಾರೆ. ಆ ಪಕ್ಷದಲ್ಲಿ ಜಗಳವಾಗಿದೆ. ಬಹಳ ದಿನಗಳ ಕಾಲ ಸರ್ಕಾರ ಉಳಿಯಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next