ಶ್ರೀನಿವಾಸಪುರ: ಸಮಾಜದಲ್ಲಿ ಬಡವರ ಪರ ಕೆಲಸ ಮಾಡುವುದು ಕಡಿಮೆಯಾಗಿದೆ. ರಾಜಕಾರಣಕ್ಕೆ ದುಡ್ಡು ದೊಡ್ಡದಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳು ಸಿಗುವುದು ಪ್ರಯಾಸವಾಗಿದೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಸಹಕಾರ ಕೇಂದ್ರ ಬ್ಯಾಂಕ್ ಶ್ರೀನಿವಾಸಪುರಶಾಖೆ, ದಳಸನೂರು ರೇಷ್ಮೆ ಬೆಳೆಗಾರರಮತ್ತು ರೈತರ ಸೇವಾ ಸಹಕಾರ ಸಂಘದಿಂದ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಸುಮ್ಮನೆ ಮಾಡುವುದಿಲ್ಲ. ಉದ್ದೇಶವಿಟ್ಟುಕೊಂಡು ಮಾಡುತ್ತಿದೆ. ಮುಖ್ಯವಾಗಿ ಬಡವರಿಗೆ ಸ್ಪಂದಿಸುವ ಕಾಳಜಿ ಹೆಚ್ಚಾಗಬೇಕು. ಇದರಿಂದ ಸೌಲಭ್ಯಗಳು ಸಿಗುತ್ತವೆ. ನಮ್ಮಲ್ಲಿ ಮೊದಲು ಪ್ರಾಮಾಣಿಕತೆ ಇರಬೇಕು. ಆಗ ನಾವು ನಾಯಕರೆನಿಸಿಕೊಳ್ಳುತ್ತೇವೆ ಎಂದರು.
ಎಲ್ಲಾ ಸಂಘಗಳಿಗೆ 25 ಕೋಟಿ ರೂ. ಸಾಲ ನೀಡಿ: ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಸಾಲ ನೀಡುವ ವಿಚಾರದಲ್ಲಿ ತಮ್ಮ ಸೊಸೈಟಿ ವ್ಯಾಪ್ತಿಗೆಬರುವ ಎಲ್ಲಾ ಗ್ರಾಮಗಳ ಮಹಿಳಾ ಸಂಘಗಳಿಗೆ ತಾರತಮ್ಯವಿಲ್ಲದೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ಎಷ್ಟು ಸಂಘಗಳಿಗೆ ಕೊಟ್ಟಿದ್ದೇವೆ. ಮರುಪಾವತಿ ಎಷ್ಟಾಗಿದೆ ಎಂದು ತಿಳಿದುಕೊಳ್ಳಬೇಕು. ಸಣ್ಣ ಮೊತ್ತದ ಸಾಲ ಬಿಟ್ಟು ಮುಂದೆ ಸೊಸೈಟಿ ವ್ಯಾಪ್ತಿಯ ಎಲ್ಲಾ ಸಂಘಗಳಿಗೆ 25 ಕೋಟಿ ರೂ. ಸಾಲ ನೀಡುವಂತಹ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ದಿಂಬಾಲ್ ಅಶೋಕ್, ಅಶ್ವಥ್, ಬಿ.ವಿ.ವೆಂಕಟರೆಡ್ಡಿ,ತಿಮ್ಮಯ್ಯ, ಎಸ್.ವಿ.ಸುಧಾಕರ್, ಹೂಹಳ್ಳಿ ಬಾಬು, ಬಗಲಹಳ್ಳಿ ಚಂದ್ರೇಗೌಡ,ಟಿ.ಎಂ.ಶ್ರೀನಿವಾಸಗೌಡ, ಬಂಗವಾದಿಕೃಷ್ಣಮೂರ್ತಿ, ಎನ್.ಬೈಚೇಗೌಡ,ಗಾಂಡ್ಲಹಳ್ಳಿ ಶಶಿಕುಮಾರ್, ಮಾಸ್ಥೆàನಹಳ್ಳಿನಾರಾಯಣಸ್ವಾಮಿ, ದಳಸನೂರು ಶ್ರೀನಿವಾಸ್, ನಂಬಿಹಳ್ಳಿ ಎನ್.ಜಿ.ಶ್ರೀರಾಮರೆಡ್ಡಿ, ಶ್ರೀನಾಥ್, ಗಾಂಡ್ಲಹಳ್ಳಿ ನಾರಾಯಣಸ್ವಾಮಿ ಹಾಜರಿದ್ದರು.