Advertisement

ಕಲಬುರಗಿ: ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಮಡಿಲಿಗೆ; ಬಿಜೆಪಿಗೆ ಮುಖಭಂಗ

07:08 PM Nov 29, 2020 | Mithun PG |

ಕಲಬುರಗಿ: ಇಲ್ಲಿನ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್‌ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ.

Advertisement

ರವಿವಾರ ನಡೆದ ಚುನಾವಣೆಯಲ್ಲಿ ಒಟ್ಟಾರೆ 13 ನಿರ್ದೆಶಕ ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದರೆ ಬಿಜೆಪಿ ಕೇವಲ 04 ನಾಲ್ಕು ಸ್ಥಾನಗಳನ್ನು ಪಡೆದು ತೀವ್ರ ಮುಖಭಂಗ ಅನುಭವಿಸಿತು.

ಏಳು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದರೆ ರವಿವಾರ 6 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅವಿರೋಧವಾಗಿ ಆಯ್ಕೆಯಾದ ಏಳು ಸದಸ್ಯರಲ್ಲಿ  ಐವರು ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿಯವರಾಗಿದ್ದಾರೆ.

ಇದನ್ನೂ ಓದಿ:  ಮುಂಬಯಿ: ಸ್ಥಳೀಯ ರೈಲು ಸಂಚಾರ : ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ!

ಚುನಾವಣೆ ನಡೆದ ಆರು ಸ್ಥಾನಗಳಲ್ಲಿ ನಾಲ್ಕು ಕಾಂಗ್ರೆಸ್ ಗೆದ್ದರೆ ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 13 ಸ್ಥಾನಗಳು ಹಾಗೂ ಇಬ್ಬರು ಸಹಕಾರಿ ಅಧಿಕಾರಿಗಳು ಜತೆಗೆ ಓರ್ವ ನಾಮನಿರ್ದೇಶಿತ ಸದಸ್ಯ ಸೇರಿ ಒಟ್ಟಾರೆ 16 ಸ್ಥಾನಗಳಾಗಲಿದ್ದು, ಬಹುಮತಕ್ಕೆ 09 ಸದಸ್ಯರು ಬೇಕು. ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ.

Advertisement

ಒಂದು ಮತದಿಂದಲೇ ಗೆದ್ದರು:

ಆರು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಲ್ಲಿ ಕೇವಲ ಒಂದು ಮತದಿಂದ ಚುನಾಯಿತರಾದರು. ಜೇವರ್ಗಿ ತಾಲೂಕಿನಿಂದ ನಿಂಗಪ್ಪ ಮಾಳಪ್ಪ ದೊಡ್ಮನಿ, ಚಿಂಚೋಳಿ ತಾಲೂಕಿನಿಂದ ಗೌತಮ ವೈಜನಾಥ ಪಾಟೀಲ್, ಪಟ್ಟಣ ಸಹಕಾರಿ ಕ್ಷೇತ್ರದಿಂದ ಸೋ ಮಶೇಖರ ಗೋನಾಯಕ ಹಾಗೂ ಟಿಎಪಿಸಿಎಂ ಕ್ಷೇತ್ರದಿಂದ ಶಿವಾನಂದ ಮಾನಕರ ಒಂದು ಮತದಿಂದ ಚುನಾಯಿತರಾದರು. ಶಹಾಪೂರ ತಾಲೂಕಿನಿಂದ ಗುರುನಾಥರೆಡ್ಡಿ ಪರ್ವತ ರೆಡ್ಡಿ13 ಮತಗಳ ಅಂತರದಿಂದ ಹಾಗೂ ಚಿತ್ತಾಪುರ ಕ್ಷೇತ್ರದಿಂದ ಬಸವರಾಜ ಅಣ್ಣಾರಾವ ಪಾಟೀಲ್ ಎರಡು ಮತಗಳ ಅಂತರದಿಂದ ಚುನಾಯಿತರಾದರು

ಇದನ್ನೂ ಓದಿ: ಭಾರತೀಯ ಯುವಕನಿಂದ ಲವ್ ಪ್ರಪೋಸ್; ಒಪ್ಪಿಗೆ ನೀಡಿದಳಾ ಆಸೀಸ್ ಯುವತಿ ? ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next