Advertisement

ಪೃಥ್ವಿ ಶಾ ಬೌಂಡರಿಗೆ ಬೆಚ್ಚಿದ ಕೆಕೆಆರ್‌

11:17 PM Apr 29, 2021 | Team Udayavani |

ಅಹ್ಮದಾಬಾದ್‌: ಶಿವಂ ಮಾವಿ ಅವರ ಮೊದಲ ಓವರಿನಲ್ಲೇ ಸತತ 6 ಬೌಂಡರಿ ಬಾರಿಸಿ ಡೆಲ್ಲಿಯ ಚೇಸಿಂಗ್‌ಗೆ ಜೋಶ್‌ ತಂದಿತ್ತ ಪೃಥ್ವಿ ಶಾ ಕೆಕೆಆರ್‌ಗೆ ಐದನೇ ಸೋಲಿನ ಬರೆ ಎಳೆದಿದ್ದಾರೆ. ಮಾರ್ಗನ್‌ ಪಡೆ 6 ವಿಕೆಟಿಗೆ 154 ರನ್‌ ಗಳಿಸಿದರೆ, ಡೆಲ್ಲಿ 16.3 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 156 ರನ್‌ ಬಾರಿಸಿ 5ನೇ ಜಯಭೇರಿ ಮೊಳಗಿಸಿತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆಯಿತು.

Advertisement

ಸಿಡಿದು ನಿಂತ ಪೃಥ್ವಿ ಶಾ 41 ಎಸೆತಗಳಿಂದ 82 ರನ್‌ ಬಾರಿಸಿದರು. ಇದರಲ್ಲಿ 11 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಶಿವಂ ಮಾವಿ ಎಸೆದ ಮೊದಲ ಎಸೆತ ವೈಡ್‌ ಆಗಿತ್ತು. ಉಳಿದ ಆರೂ ಎಸೆತಗಳನ್ನು ಪೃಥ್ವಿ ಶಾ ಬೌಂಡರಿಗೆ ಬಡಿದಟ್ಟಿದರು. ಈ ಓವರ್‌ನಲ್ಲಿ 25 ರನ್‌ ಹರಿದು ಬಂತು. ಐಪಿಎಲ್‌ ಇನ್ನಿಂಗ್ಸ್‌ನ 3ನೇ ಅತೀ ದುಬಾರಿಯಾದ “ಫಸ್ಟ್‌ ಓವರ್‌’ ಇದಾಗಿದೆ. ಶಾ ಐಪಿಎಲ್‌ ಓವರ್‌ ಒಂದರಲ್ಲಿ ಸತತ 6 ಬೌಂಡರಿ ಬಾರಿಸಿದ 2ನೇ ಕ್ರಿಕೆಟಿಗ. ಉನ್ಮುಕ್ತ್ ಚಂದ್‌ ಮೊದಲಿಗ.

ಶಾ-ಧವನ್‌ ಸೇರಿ ಪವರ್‌ ಪ್ಲೇಯಲ್ಲಿ 67 ರನ್‌ ರಾಶಿ ಹಾಕಿದರು. ಇದು ಈ ಐಪಿಎಲ್‌ನ ಮೊದಲ 6 ಓವರ್‌ಗಳಲ್ಲಿ ಒಟ್ಟುಗೂಡಿದ ಸರ್ವಾಧಿಕ ರನ್‌ ಆಗಿದೆ. ಇವರಿಬ್ಬರು 13.5 ಓವರ್‌ಗಳಿಂದ 132 ರನ್‌ ಪೇರಿಸಿದರು. ಇದರಲ್ಲಿ ಧವನ್‌ ಪಾಲು 46 ರನ್‌ (47 ಎಸೆತ, 4 ಬೌಂಡರಿ, ಒಂದು ಸಿಕ್ಸರ್‌). ಉರುಳಿದ ಮೂರೂ ವಿಕೆಟ್‌ ಕಮಿನ್ಸ್‌ ಪಾಲಾಯಿತು.

ಕೆಕೆಆರ್‌ ಪರದಾಟ :

ಲಲಿತ್‌ ಯಾದವ್‌, ಕಾಗಿಸೊ ರಬಾಡ, ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌ ಅವರ ಎಸೆತಗಳಿಗೆ ಮಾರ್ಗನ್‌ ಬಳಗ ತೀವ್ರ ಪರದಾಟ ನಡೆಸಿತು. ಸಾಮಾನ್ಯ ಮಟ್ಟದ ಆರಂಭ ಪಡೆದ ಕೆಕೆಆರ್‌ಗೆ ಮಧ್ಯಮ ವೇಗಿ ಲಲಿತ್‌ ಯಾದವ್‌ ಬಲವಾದ ಆಘಾತವಿತ್ತರು. ಮಿಡ್ಲ್ ಆರ್ಡರ್‌ ಮೇಲೆರಗಿ ಹೋದ ಅವರು ಇಯಾನ್‌ ಮಾರ್ಗನ್‌ ಮತ್ತು ಸುನೀಲ್‌ ನಾರಾಯಣ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿ ಡೆಲ್ಲಿಗೆ ಮೇಲುಗೈ ಒದಗಿಸಿದರು. ಇವರಿಬ್ಬರದೂ ಶೂನ್ಯ ಗಳಿಕೆಯಾಗಿತ್ತು. ಮಾರ್ಗನ್‌ 2 ಎಸೆತ ಎದುರಿಸಿದರೆ, ನಾರಾಯಣ್‌ ಮೊದಲ ಎಸೆತದಲ್ಲೇ ಬೌಲ್ಡ್‌ ಆದರು.

Advertisement

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ 13ನೇ ಓವರ್‌ ತನಕ ಬೇರೂರಿ ನಿಂತ ಶುಭಮನ್‌ ಗಿಲ್‌ 43 ರನ್‌ ಹೊಡೆದರು (38 ಎಸೆತ, 3 ಬೌಂಡರಿ, ಒಂದು ಸಿಕ್ಸರ್‌).

ನಿತೀಶ್‌ ರಾಣಾ (15), ರಾಹುಲ್‌ ತ್ರಿಪಾಠಿ (19), ದಿನೇಶ್‌ ಕಾರ್ತಿಕ್‌ (14) ಅವರಿಂದ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. 109 ರನ್ನಿಗೆ 6 ವಿಕೆಟ್‌ ಉರುಳಿತು. ಡೆತ್‌ ಓವರ್‌ಗಳಲ್ಲಿ ಬಿಗ್‌ ಹಿಟ್ಟರ್‌ಗಳಾದ ಆ್ಯಂಡ್ರೆ ರಸೆಲ್‌ ಮತ್ತು ಪ್ಯಾಟ್‌ ಕಮಿನ್ಸ್‌ ಕ್ರೀಸ್‌ನಲ್ಲಿ ಇದ್ದುದರಿಂದ ಕೆಕೆಆರ್‌ ಮೊತ್ತ ಏರುವ ನಿರೀಕ್ಷೆ ಇತ್ತು. ಇವರಲ್ಲಿ ರಸೆಲ್‌ ಹೆಚ್ಚಿನ ಯಶಸ್ಸು ಕಂಡರು. 27 ಎಸೆತಗಳಿಂದ ಅಜೇಯ 45 ರನ್‌ ಬಾರಿಸಿದರು (3 ಸಿಕ್ಸರ್‌, 2 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಕೆಕೆಆರ್‌-6 ವಿಕೆಟಿಗೆ (ಗಿಲ್‌ 43, ರಸೆಲ್‌ ಔಟಾಗದೆ 45, ರಾಣಾ 15, ಯಾದವ್‌ 13ಕ್ಕೆ 2, ಪಟೇಲ್‌ 32ಕ್ಕೆ 2). ಡೆಲ್ಲಿ-16.3 ಓವರ್‌ಗಳಲ್ಲಿ 3 ವಿಕೆಟಿಗೆ 156 (ಶಾ 82, ಧವನ್‌ 46, ಕಮಿನ್ಸ್‌ 24ಕ್ಕೆ

 

Advertisement

Udayavani is now on Telegram. Click here to join our channel and stay updated with the latest news.

Next