Advertisement
ಅಂದಹಾಗೆ, ಇದೊಂದು ರೀತಿಯಲ್ಲಿ ತಟಸ್ಥ ತಾಣದಲ್ಲಿ ನಡೆಯುವ ಪಂದ್ಯ. ಆದರೆ ಇದು ಡೆಲ್ಲಿಗೆ 2ನೇ “ಹೋಮ್ ಗ್ರೌಂಡ್’. ರಿಷಭ್ ಪಂತ್ ಬಳಗವಿಲ್ಲಿ 2 ಪಂದ್ಯಗಳನ್ನು ಆಡಲಿದೆ. ಕೆಲವು ದಿನಗಳ ಮೊದಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ.
Related Articles
Advertisement
ನಾಯಕ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡಿದ್ದಾರೆ. ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್ ಕೆಳ ಸರದಿಯನ್ನು ಆಧರಿಸಿ ನಿಲ್ಲುವ ಭರವಸೆಯನ್ನೇನೋ ಮೂಡಿಸಿದ್ದಾರೆ. ಆದರೆ ಚೆನ್ನೈನ ಘಾತಕ ಹಾಗೂ ವೈವಿಧ್ಯಮಯ ಬೌಲಿಂಗ್ ಆಕ್ರಮಣ ವನ್ನು ತಡೆದು ನಿಲ್ಲುವುದು ಸುಲಭವಲ್ಲ.
ಭಾರತೀಯರನ್ನೇ ನಂಬಿರುವ ಡೆಲ್ಲಿಯ ಬೌಲಿಂಗ್ ಘಾತಕವೇನಲ್ಲ. ಸ್ಪಿನ್ನರ್‌ಗಳಾದ ಕುಲದೀಪ್ ಮತ್ತು ಅಕ್ಷರ್ ಇನ್ನಷ್ಟು ಹರಿತಗೊಳ್ಳಬೇಕಿದೆ. ದಕ್ಷಿಣ ಆಫ್ರಿಕಾದ ಆ್ಯನ್ರಿಚ್ ನೋರ್ಜೆ ಇನ್ನೂ ದಂಡಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ!
ಚೆನ್ನೈ ಪರಿಪೂರ್ಣ ಪ್ಯಾಕೇಜ್:
ಚೆನ್ನೈ ಪರಿಪೂರ್ಣ ಟಿ20 ಪ್ಯಾಕೇಜ್ ಹೊಂದಿರುವ ತಂಡ. ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮುಸ್ತಫಿಜುರ್, ಪತಿರಣ… ಹೀಗೆ ಆರಂಭದಿಂದ ಅಂತ್ಯದ ತನಕವೂ ಬಲಿಷ್ಠ ಹಾಗೂ ಅಪಾಯಕಾರಿಯಾಗಿ ಗೋಚರಿಸುತ್ತದೆ. ಜತೆಗೆ ಗಾಯಕ್ವಾಡ್, ರಹಾನೆ, ಜಡೇಜ, ದುಬೆ, ಧೋನಿ, ರಿಝ್ವಿ ಮೊದಲಾದ ತವರಿನ ಹೀರೋಗಳಿದ್ದಾರೆ. ಅವಕಾಶ ಕ್ಕಾಗಿ ಕ್ಯೂ ನಿಂತ ಇನ್ನಷ್ಟು ಮಂದಿ ಸ್ಟಾರ್ ಕ್ರಿಕೆಟಿಗರಿದ್ದಾರೆ. ಶಾರ್ದೂಲ್ ಠಾಕೂರ್, ಮೊಯಿನ್ ಅಲಿ, ಸ್ಯಾಂಟ್ನರ್… ಮೊದಲಾದವರು. ಸದ್ಯ ಚೆನ್ನೈ ತಂಡದ ದೊಡ್ಡ ಸಮಸ್ಯೆಯೆಂದರೆ ಹನ್ನೊಂದರ ಬಳಗವನ್ನು ಆರಿಸುವುದು!