Advertisement

ಕ್ಯಾಂಟೀನ್‌ ಪರಿಶೀಲಿಸಿ, ಊಟ ಸವಿದ ಡೀಸಿ

12:38 PM Mar 17, 2021 | Team Udayavani |

ಕೊಳ್ಳೇಗಾಲ: ಪಟ್ಟ ಣದ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾಧಿಕಾರಿ ಡಾ. ಎಂ .ಆ ರ್‌. ರವಿ ಮಂಗಳವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಇಂದಿರಾ ಕ್ಯಾಂಟೀ ನ್‌ಗೆ ಆಗ ಮಿ ಸಿದ ಜಿಲ್ಲಾಧಿಕಾರಿ ಅಡುಗೆ ಕೋಣೆ, ಸಾಮ ಗ್ರಿ ಗಳ ಕೊಠಡಿ ಮತ್ತು ಸಾರ್ವ ಜನಿಕರು ಆಹಾರ ಸೇವಿ ಸುವ ಸ್ಥಳ, ಕುಡಿಯುವ ನೀರು ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ನಿತ್ಯ ನಿಗದಿಯಾಗ ರುವ ತಿಂಡಿ ಮತ್ತು ಊಟವನ್ನು ವಿತ ರಿಸಬೇಕು. ಸ್ವತ್ಛತೆ ಕಾಪಾ ಡ ಬೇಕು. ಬಿಸಿ ನೀರು ಕೇಳಿ ದ ವ ರಿಗೆ ನೀಡ ಬೇಕು ಎಂದು ಇಂದಿರಾ ಕ್ಯಾಂಟೀನ್‌ ವ್ಯವ ಸ್ಥಾಪಕರಿಗೆ ಸೂಚಿಸಿದರು.

ಬಿಸಿಲಿನ ಬೇಗ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕ್ಯಾಂಟೀ ನ್ ನಲ್ಲಿ ನೀಡುವ ಆಹಾರ ಪದಾ ರ್ಥಗ ಳಗೆ ಖಾರ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ, ಗುಣ ಮ ಟ್ಟ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಾಹಾರ ಸವಿದ ಡೀಸಿ: ಕ್ಯಾಂಟೀನ್‌ನಲ್ಲಿ ತಯಾರಿಸಿದ್ದ ತಿಂಡಿ ಯನ್ನು ಜಿಲ್ಲಾಧಿಕಾರಿ ಸೇವಿಸಿ, ಪ್ರತಿದಿನ ಇದೇ ರೀತಿ ಸಾರ್ವಜನಿಕರಿಗೆ ಅಡುಗೆ ತಯಾ ರಿಸಿ ನೀಡ ಬೇಕು ಎಂದರು. ಆಹಾರ ಪದಾರ್ಥಗಳ ದಾಸ್ತಾನು ಕೊಠಡಿಗೆ ಭೇಟಿ ನೀಡಿದ ಅವರು, ಆಹಾರ ಪದಾ ರ್ಥ ಗಳ ಗುಣಮಟ್ಟ ವೀಕ್ಷಣೆ ಮಾಡ ಬೇಕು. ಕೆಟ್ಟಿದ್ದರೆ ಅಂತಹ ಆಹಾ ರ ಪದಾರ್ಥ ಬಳಸಬಾರದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

Advertisement

ಕೋವಿಡ್: ಕೋವಿಡ್ 2ನೇ ಅಲೆ ಎದಿದ್ದು, ಸಾರ್ವಜನಿಕರ ರಕ್ಷ ಣೆ ಗಾಗಿ ಸರ್ಕಾರ ನೀಡಿರುವ ನಿಯಮ ವನ್ನು ಕಡ್ಡಾ ಯ ವಾಗಿ ಪಾಲಿಸಬೇ ಕೆಂದರು.

ಸಭೆ: ಕ್ಯಾಂಟೀನ್‌ ವೀಕ್ಷ ಣೆಯ ಬಳಿಕ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ಕುಡಿ ಯುವ ನೀರಿನಲ್ಲಿ ಯಾವುದೇ ತೊಂದರೆ ಎದು ರಾ ಗ ದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಸರ್ಕಟನ್‌ ನಾಲೆ, ನೂತನ ಬಸ್‌ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗು ತ್ತಿದ್ದು, ಕೂಡಲೇ ಕಾಮಗ ರಿಗಳನ್ನು ಪೂರ್ಣಗೊಳಿಸಿ ಎಂದರು.

ಇದೇ ವೇಳೆ ಎಸಿ ಡಾ. ಗಿರೀಶ್‌ ದಿಲೀಪ್‌ ಬದೋಲೆ, ತಹಶೀಲ್ದಾರ ಕೆ.ಕು ನಾಲ್‌, ಪೌರಾ ಯುಕ್ತ ವಿಜಯ್‌, ನಗ ರ ಸಭಾ ಎಇಇ ಅಲ್ತಾಪ್‌ ಮತ್ತು ನಾಗೇಂದ್ರ, ತಾಲೂ ಕು ಅಧಿಕಾ ರಿಗಳು ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next