ಬೈಲಹೊಂಗಲ: ತಾಲೂಕಿನ ಹೊಸಕೋಟಿ ಗ್ರಾಮದ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಿತು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಯೋಜನೆ ಸರಕಾರದ ವಿನೂತನ ಯೋಜನೆಯಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಅವರನ್ನು ಅಭಿನಂದಿಸುತ್ತೇನೆ. ಪೋಡಿ ಮಾಡುವುದು, ಪಹಣಿ ವಿತರಣೆಯನ್ನು ಕಂದಾಯ ಇಲಾಖೆ ಉತ್ತಮವಾಗಿ ನಿಭಾಯಿಸುತ್ತಿದೆ. 213 ಜನರಿಗೆ ಮಾಶಾಸನ ಹಣ ಖಾತೆಗೆ ಜಮೆಯಾಗುತ್ತಿದೆ. 153 ಇನ್ನೂ ಅರ್ಜಿ ಬಾಕಿ ಇವೆ. ಇಲ್ಲಿ 23 ಇಲಾಖೆಗಳ ಅಧಿಕಾರಿಗಳು ಇದ್ದು, ಅವರು ಸರ್ವ ಸಮಸ್ಯೆ ಬಗೆಹರಿಸಲಿದ್ದಾರೆಂದರು.
ತಹಶೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವಿಧವಾ ವೇತನ ಮೊದಲಾದ ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಅಧಿಕಾರಿಗಳು ಸಹಾಯ ಮಾಡುತ್ತಾರೆ. ಹೀಗಾಗಿ ಸರಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದರು. ಇವಲ್ಲದೆ ರಸ್ತೆ ಸುಧಾರಣೆ, ಕುಡಿಯುವ ನೀರಿನ ಸಮಸ್ಯೆ, ಪಡಿತರ ಚೀಟಿ ವಿತರಣೆ ಹೀಗೆ ಹಲವಾರು ಸಮಸ್ಯೆಗಳ ಕುರಿತು ನಾಗರಿಕರು ಮನವಿ ಸಲ್ಲಿಸಿದ್ದು, ಅಂಥ ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್, ಆಯುಷ್‌ಮಾನ್ ಕಾರ್ಡ್ ವಿತರಣೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯ, ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು.
ಗ್ರಾಪಂ ಅಧ್ಯಕ್ಷ ಪ್ರಕಾಶ ಬಡವನ್ನವರ, ಉಪಾಧ್ಯಕ್ಷೆ ಚೈತ್ರಾ ಖೊದಾನಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಫ್. ಕೊಳದೂರ, ತಾಲೂಕು ಆರೋಗ್ಯಾಧಿಕಾರಿ ಡಾ| ಎಸ್.ಎಸ್. ಸಿದ್ದನ್ನವರ, ಸಮಾಜ ಕಲ್ಯಾಣಾಧಿಕಾರಿ ಸಿ.ಬಿ. ಯಮನೂರ, ನೀರಾವರಿ ಇಲಾಖೆ ಎಇಇ ಎಂ.ಎಲ್. ಪಾಟೀಲ, ಎಇ ಆರ್.ಜಿ. ಯಲಿಗಾರ, ಪಶು ಇಲಾಖೆ ಅಧಿಕಾರಿ ಡಾ| ಐ.ಎಸ್. ಕೊಲಾರ, ತಾ.ಪಂ ನಿರ್ದೇಶಕ ವಿಜಯಕುಮಾರ ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ, ಸಿಡಿಪಿಒ ರೇವತಿ ಹೊಸಮಠ, ಆರ್.ಐ. ಕುಂಬಾರ, ವಿದ್ಯಾ ದೊಡಮನಿ, ಉಪತಹಶೀಲ್ದಾರ್ ಬಸವರಾಜ ಹುಬ್ಬಳ್ಳಿ, ಎಸ್.ಎಂ. ಪಾಟೀಲ, ಸದಾನಂದ ಖೋದಾನಪುರ, ಡಾ| ಸಂತೋಷ ಗೋವಿ, ಲಕ್ಷ ¾ಣ ಮಾಸ್ತಮರಡಿ, ಪಿಡಿಒ ಶಿವಾನಂದ ಕಲ್ಲೂರ, ಆನಂದ ಖೋದಾನಪೂರ, ಡಾ| ಪ್ರಕಾಶ ಹಲ್ಯಾಳ, ಎಸ್.ಎಂ. ಪಾಟೀಲ, ಎ.ಆರ್. ಮಾಳನ್ನವರ, ಅಡಿವೆಪ್ಪ ಹೊಸಮನಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಗ್ರಾ.ಪಂ ಸದಸ್ಯರು ಇದ್ದರು.