Advertisement
ರಾಜ್ಯ ಬಿಜೆಪಿ ಸರ್ಕಾರ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಲು ಆಡಳಿತವೇ ಜನರ ಮನೆ ಬಾಗಿಲಿಗೆ ತೆರಳುವಂತೆಮಾಡಲು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳು ಯಲಬುರ್ಗಾತಾಲೂಕಿನ ಹಿರೇ ವಡ್ರಕಲ್ ಗ್ರಾಮದಲ್ಲಿ ಫೆ. 20ರಂದು ವಾಸ್ತವ್ಯ ಮಾಡಲಿದ್ದಾರೆ. ಅಲ್ಲದೇ ಪ್ರತಿ ತಿಂಗಳು 3ನೇ ಶನಿವಾರ ಒಂದೊಂದು ತಾಲೂಕಿನ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸಲಿದ್ದಾರೆ.
Related Articles
Advertisement
ತಹಶೀಲ್ದಾರ್‌ರು ಭೇಟಿ: ಜನರಿಂದ ಅನಗತ್ಯವಾಗಿ ಆಡಳಿತ ವರ್ಗಕ್ಕೆ ಮುಜುಗುರ ಆಗುವ ಸನ್ನಿವೇಶನ ತಪ್ಪಿಸಲು ಯಲಬುರ್ಗಾ ತಹಶೀಲ್ದಾರ್ ಶ್ರೀಶೈಲ ತಳವಾರ ಪೂರ್ವ ತಯಾರಿಯಾಗಿ ಹಿರೇವಡ್ರಕಲ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಕುಡಿಯುವ ನೀರು, ಶೌಚಾಲಯ, ಚರಂಡಿಗಳ ಸ್ವತ್ಛತೆ, ರಸ್ತೆಸೇರಿದಂತೆ ವಿವಿಧ ಸಮಸ್ಯೆ ಪರಿಹರಿಸುವ ಬಗ್ಗೆ ಗಮನಹರಿಸಿದ್ದಾರೆ. ಜಿಲ್ಲಾಧಿಕಾರಿ ಎದುರುಸಮಸ್ಯೆ ಹೇಳಿಕೊಳ್ಳುವ ಮೊದಲೇ ಅವುಗಳಪರಿಹಾರ ಕಾರ್ಯವು ಭರ್ಜರಿಯಾಗಿ ನಡೆದಿದೆ.
ಪ್ರತಿ 3ನೇ ಶನಿವಾರ ಗ್ರಾಮವಾಸ್ತವ್ಯ:
ಸರ್ಕಾರದ ಆದೇಶದಂತೆ ಪ್ರತಿ ತಿಂಗಳು ಮೂರನೇ ಶನಿವಾರ ಡಿಸಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಇದು ಕೇವಲ ಒಂದು ತಿಂಗಳ ಗ್ರಾಮ ವಾಸ್ತವ್ಯವಲ್ಲ. ಪ್ರತಿ ತಿಂಗಳೂಈ ಪ್ರಕ್ರಿಯೆ ನಡೆಯಲಿದೆ. ಜಿಲ್ಲಾಡಳಿತವುಮೊದಲ ಹಂತದಲ್ಲಿ ಕಂದಾಯ ಇಲಾಖೆಯಸಮಸ್ಯೆಗಳ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.ನಂತರದ ದಿನದಲ್ಲಿ ವಿವಿಧ ಇಲಾಖೆಗಳ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೂ ಮುಂದಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸರ್ಕಾರ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಇತ್ಯರ್ಥಕ್ಕೆ ಒತ್ತು ನೀಡುವಂತಹ ಜನಪರ ನಿರ್ಧಾರ ಕೈಗೊಂಡಿರುವುದು ಗಮನ ಸೆಳೆದಿದೆ.ಹಿರೇವಡ್ರಕಲ್ ಗ್ರಾಮಸ್ಥರು ಜಿಲ್ಲಾಧಿಕಾರಿ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಕಾಯುತ್ತಿದ್ದಾರೆ.
ಗ್ರಾಮ ವಾಸ್ತವ್ಯಕ್ಕೂ ಮೊದಲೇ ಇತ್ಯರ್ಥ! :
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅವರು ಗ್ರಾಮ ವಾಸ್ತವ್ಯ ನಿಗದಿ ಯಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಗ್ರಾಮ ಹಂತದಿಂದ ತಾಲೂಕು ಹಂತದವರೆಗಿನ ಅಧಿಕಾರಿಗಳುಹಿರೇವಡ್ರಕಲ್ ಗ್ರಾಮಕ್ಕೆ ಭೇಟಿನೀಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಒಂದು ವಾರದಿಂದ ತಹಶೀಲ್ದಾರ್, ಆರ್‌ಐ, ವಿಎ ಗ್ರಾಮದಲ್ಲಿ ಠಿಕಾಣಿ ಹೂಡಿ ರೈತರ ಪಹಣಿ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರವೇನು? ಎನ್ನುವಮಾರ್ಗೋಪಾಯ ತಿಳಿಸುತ್ತಿದ್ದಾರೆ. ಜೊತೆಗೆ ಕುಡಿಯುವ ನೀರು, ಚರಂಡಿಗಳ ಸ್ವತ್ಛತೆ ಸೇರಿ ಹಲವು ಸಮಸ್ಯೆ ಆಲಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ.
ಸರ್ಕಾರದ ಆದೇಶದಂತೆ ಪ್ರತಿ ಮೂರನೇ ಶನಿವಾರ ಗ್ರಾಮ ವಾಸ್ತವ್ಯ ಮಾಡಲಿದ್ದು, ಮೊದಲ ಬಾರಿ ಫೆ.20ರಂದು ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದೇನೆ. ಅಲ್ಲಿ ರೈತರ ಪಹಣಿದೋಷ, ನಕಾಶೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಅವುಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗಿದೆ. -ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ
ನಮ್ಮ ಗ್ರಾಮದಲ್ಲಿ 30-40 ವರ್ಷಗಳಿಂದ ಪಹಣಿ ಸಮಸ್ಯೆಗಳಿದ್ದವು. ನಾವು ಬೆಂಗಳೂರುವರೆಗೆ ಹೋದರೂಇತ್ಯರ್ಥವಾಗಿದ್ದಿಲ್ಲ. ಹಾಗಾಗಿ ಭೂಮಿ ಖರೀದಿ, ಮಾರಾಟಕ್ಕೂ ತುಂಬತೊಂದರೆ ಎದುರಿಸಿದ್ದೇವೆ. ಈಗ ಡಿಸಿ ಅವರೇ ನಮ್ಮೂರಲ್ಲಿ ವಾಸ್ತವ್ಯಮಾಡಿ ಕಂದಾಯ ಇಲಾಖೆಯಡಿ ಪಹಣಿ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಿರುವುದು ಖುಷಿ ತಂದಿದೆ. –ಹನುಮೇಶ ಸುಣಗಾರ, ಗ್ರಾಮದ ಮುಖಂಡ
ದತ್ತು ಕಮ್ಮಾರ