Advertisement

ಗ್ರಾಪಂ ಚುನಾವಣೆ ಸಿದ್ಧತೆಗೆ ಡೀಸಿ ಸೂಚನೆ

03:34 PM Nov 21, 2020 | Suhan S |

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯತ್‌ ಸಾರ್ವತ್ರಿಕ ಚುನಾವಣೆಯ ಯಾವುದೇ ಸಂದರ್ಭದಲ್ಲಿ ಘೋಷಣೆ ಸಾಧ್ಯತೆಯಿದ್ದು, ಅಧಿಕಾರಿಗಳು ಆ ದಿಸೆಯಲ್ಲಿ ಜಾಗೃತರಾಗಿ ಚುನಾವಣೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ಲತಾ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರ ವಾರ ಗ್ರಾಮ ಪಂಚಾಯತ್‌ ಸಾರ್ವತ್ರಿಕ ಚುನಾ ವಣೆತಯಾರಿ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 152 ಗ್ರಾಮ ಪಂಚಾಯಿತಿಗಳಿದ್ದು, ಈ ಗ್ರಾಪಂಗಳ ಸುಸ್ಥಿತಿ ಬಗ್ಗೆ ಆದಷ್ಟು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸ್ಥಳಾವಕಾಶ ನೀಡಿ: ಅಧಿಕಾರಿಗಳು ಮತಗಟ್ಟೆ ಸುಸ್ಥಿತಿ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡಬೇಕು. ಸಣ್ಣ ಪುಟ್ಟ ದರುಸ್ತಿ ಇದ್ದಲ್ಲಿ ಸರಿಪಡಿಸಲಾಗುವುದು. ಈ ಸಂಬಂಧ ತಹಶೀಲ್ದಾರ್‌ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದಜಿಲ್ಲಾಧಿಕಾರಿಗಳು, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‌ ಗಳಿಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕಚುನಾವಣಾಧಿಕಾರಿಗಳನ್ನು ನಿಯೋಜಿಸಬೇಕು. ಚುನಾವಣಾಧಿಕಾರಿಗಳಿಗೆ ಗ್ರಾಪಂ ಕಚೇರಿ ಯಲ್ಲಿ ಸ್ಥಳಾವಕಾಶ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಾಮಗ್ರಿ ಸಿದ್ಧಪಡಿಸಿಕೊಳ್ಳಿ: ಸೂಕ್ಷ್ಮ, ಅತೀ ಸೂಕ್ಷ್ಮ ಮತ್ತು ವಲ್ನರಬಲ್‌ ಮತಗಟ್ಟೆಗಳನ್ನು ಪೊಲೀಸ್‌ ಮತ್ತು ಕಂದಾಯ ಇಲಾಖೆಯವರು ಗುರುತಿಸಿ ವರದಿ ನೀಡಬೇಕು. ಕೋವಿಡ್‌-19 ಹಿನ್ನೆಲೆ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಬೇಕು. ಚುನಾವಣೆಗೆ ಅವಶ್ಯವಿರುವ ಮತಗಟ್ಟೆಗೆ ಹಾಗೂ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬೇಕೆಂದರು.

ಆದೇಶ ಪಾಲಿಸಿ: ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ, ನೇಮಕ ಮತ್ತು ತರಬೇತಿಗೆ ಅಗತ್ಯ ಕ್ರಮ ವಹಿಸುವುದು, ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಮತ ಎಣಿಕೆ ಕೇಂದ್ರ ಹಾಗೂ ಮತ ಪತ್ರಗಳ ಮುದ್ರಣಕ್ಕೆ ಮುದ್ರಣಾಲಯ ಗುರುತಿಸು ವುದು, ಚುನಾವಣೆಗೆ ಅಗತ್ಯವಿರುವ ವಾಹನ ಕಾಯ್ದಿರಿಸಿಕೊಳ್ಳುವುದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಚುನಾವಣೆಗೆ ಪೊಲೀಸ್‌ ಬಂದೋಬಸ್ತ್ ಮಾಡಿಕೊಳ್ಳುವುದು. ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆ ಪಾಲಿಸುವುದು ಮತ್ತಿತರ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಸ್ಟರಿಂಗ್‌, ಡಿ-ಮಸ್ಟರಿಂಗ್‌ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಈಗಾಗಲೇ ಗುರುತಿಸಿದ್ದು, ಸದರಿ ಕೇಂದ್ರಗಳನ್ನು ಮುಂಚಿತವಾಗಿಯೇ ಸ್ಯಾನಿಟೈಸ್‌ ಮಾಡಬೇಕು. ಕೋವಿಡ್‌-19 ಹಿನ್ನೆಲೆಯಲ್ಲಿ ಮುನ್ನೆ ಚ್ಚರಿಕೆ ಕ್ರಮ ಕೈಗೊಂಡು ಮತದಾನ ಮಾಡಲು ಮತದಾರರಿಗೆ ಮನವರಿಕೆ ಮಾಡಬೇಕೆಂದುಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್‌, ಅಪರ ಜಿಲ್ಲಾಧಿಕಾರಿ ಅಮರೇಶ್‌, ಉಪ ವಿಭಾಗಾಧಿಕಾರಿ ಎ. ಎನ್‌.ರಘುನಂದನ್‌, ಚುನಾವಣಾ ಶಿರಸ್ತೇದಾರ್‌ ಮೈಕಲ್‌ ಬೆಂಜೆಮಿನ್‌ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸೂಚನಾ ಪತ್ರ ಕಳುಹಿಸಲು ಸೂಚನೆ :  ಗ್ರಾಮ ಪಂಚಾಯತ್‌ನ ಒಟ್ಟು ಮತಗಟ್ಟೆಗಳು1332, ಒಟ್ಟು7,79,402 ಮತದಾರರಿದ್ದು,3,89,640 ಪುರುಷರು,3,89,706 ಮಹಿಳಾ,56 ಇತರೆ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು. ಚುನಾವಣಾಕಾರಿಗಳು ಮತ್ತು ಸಹಾಯಕ ಚುನಾವಣಾಕಾರಿಗಳಿಗೆ ಮಾಸ್ಟರ್‌ ಟ್ರೈನರ್‌ ಅವರಿಂದ ತರಬೇತಿ ನಡೆಯಲಿದ್ದು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಕಾರಿಗಳಿಗೆ ತರಬೇತಿ ಬಗ್ಗೆ ಸೂಚನಾ ಪತ್ರಕಳುಹಿಸುವಂತೆ ತಹಶೀಲ್ದಾರ್‌ರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next