Advertisement
ಆದರೆ, ಉಪ ವಿಭಾಗಾಧಿಕಾರಿ ಕಾರ್ಯಾ ಚರಣೆ ಖಂಡಿಸಿ ವರ್ತಕ ಷಾಪ್ ಲಿಂಗರಾಜ್ ನೇತೃತ್ವ ದಲ್ಲಿ ನ್ಯಾಯಾಲಯದ ಮೊರೆಹೋದ ವರ್ತಕರು, ಯಾವುದೆ ಮುಂಜಾಗ್ರತ ಕ್ರಮ ಕೈಗೊಳ್ಳದೆ ರಸ್ತೆ ಅಗಲೀಕರಣಕ್ಕೆ ಉಪಭಾಗಾಧಿಕಾರಿ ಮುಂದಾಗಿದ್ದಾರೆ. ಆದ್ದರಿಂದ, ನೆಲಸಮಗೊಂಡ ಕಟ್ಟಡದ ಒಂದು ಮೀಟರ್ ವಿಸ್ತೀರ್ಣಕ್ಕೆ 19300 ರೂ.ನಂತೆ ಅದರ ಹತ್ತುಪಟ್ಟು ಪರಿಹಾರ ಹಾಗೂ ಕಟ್ಟಡ ತೆರವುಗೊಳಿಸಿದ ವೇಳೆ ಕಟ್ಟಡಕ್ಕಾದ ಹಾನಿಯ ಪರಿಹಾರವಾಗಿ 10 ಲಕ್ಷ ರೂ., ಗಳನ್ನು ತಪ್ಪಿತಸ್ಥ ಅಧಿಕಾರಿಗಳು ಪ್ರತಿಯೊಬ್ಬ ವರ್ತಕರಿಗೂ ನೀಡ ಬೇಕು ಎಂದು ಮನವಿ ಸಲ್ಲಿಸಿದ್ದರು. 3 ವರ್ಷದ ನಂತರ ತೀರ್ಪು: ರಾಜ್ಯ ಉಚ್ಚನ್ಯಾಯಾ ಲಯ ವಾದ ಪ್ರತಿವಾದ ಆಲಿಸಿದ ನಂತರ ಜಿಲ್ಲಾಧಿ ಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾ ಯಿಸಿತ್ತು. ಆದರೆ, ಕಳೆದ ಮೂರು ವರ್ಷದಲ್ಲಿ ಹಲವು ಜಿಲ್ಲಾಧಿಕಾರಿಗಳು ಬದಲಾದರು.
Related Articles
Advertisement
ಇದನ್ನೂ ಓದಿ:- ಬಿಜೆಪಿ ಒಂದು ಹೆಜ್ಜೆ ಮುಂದು
ಕರ್ನಾಟಕ ಪುರಸಭಾ ಅದಿನಿಯಮ 1964ರ ಪ್ರಕಾರ ಪಟ್ಟಣದ ಶೇ.90ರಷ್ಟು ಕಟ್ಟಡಗಳನು ನಿಯಮ ಬಾಹಿರವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿ ಸಿರುವುದು ಕಂಡುಬಂದಿದೆ. ಆದ್ದರಿಂದ, ಪುರಸಭೆ ವ್ಯಾಪ್ತಿಯ ಪರಿಮಿತಿಯೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಸರ್ಕಾರದ ಸುತ್ತೋಲೆಯನ್ವಯ ರಸ್ತೆಗಳ ಎರಡು ಬದಿಗಳಲ್ಲಿಯು 40 ಮೀಟರ್ ಅಗಲೀಕರಣಗೊಳಿಸ ಬೇಕು.
ಯೋಜನಾ ವರದಿ ಸಿದ್ಧಪಡಿಸಿ: ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ರಸ್ತೆಯ ಇಕ್ಕೆಲ್ಲಗಳಲಿರುವ ಎಲ್ಲ ಕಟ್ಟಡ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು, ರಸ್ತೆ ಅಗಲೀಕರಣದ ಸರ್ವೆ ನಡೆಸಿ, ಭೂ ಮಾಲೀಕತ್ವದ ಬಗ್ಗೆ ಖಾತರಿಪಡಿಸಿಕೊಂಡು ನಿಯಮಾನುಸಾರ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಅಗಲೀಕರಣಗೊಳ್ಳಬೇಕಿರುವ ಸಕಲೇಶಪುರ ಮುಖ್ಯರಸ್ತೆ.
“ವರ್ತಕರ ವಲಯದಿಂದ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ಮನವಿ ಸಲ್ಲಿಸಲಾಗುವುದು. ನಿಯಮ ಅನುಸಾರವಾಗಿ ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿ ತೆರವುಗೊಳಿಸಿದರೆ ನಮ್ಮ ತಕರಾರಿಲ್ಲ.” – ಷಾಪ್ ಲಿಂಗರಾಜ್, ವರ್ತಕರು
“ಜಿಲ್ಲಾಧಿಕಾರಿ ಆದೇಶ ಅತ್ಯಂತ ಸಾರ್ವಜನಿಕ ವಲಯಕ್ಕೆ ಸಂತೋಷ ತಂದಿದ್ದು, ಇನ್ನು ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ವಿಳಂಬ ಮಾಡದೆ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು.” – ನಾರಾಯಣ ಆಳ್ವ, ಸಮಾಜಸೇವಕ
“ವರ್ತಕರ ವಲಯದಿಂದ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ಮನವಿ ಸಲ್ಲಿಸಲಾಗುವುದು. ನಿಯಮ ಅನುಸಾರವಾಗಿ ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿ ತೆರವುಗೊಳಿಸಿದರೆ ನಮ್ಮ ತಕರಾರಿಲ್ಲ.” – ಷಾಪ್ ಲಿಂಗರಾಜ್, ವರ್ತಕರು
“ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸೂಚಿರುವ ಎಲ್ಲ ಅಂಶಗಳನ್ನು ಪಾಲಿಸುವ ಮೂಲಕ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಶೀಘ್ರದಲ್ಲಿ ಸಭೆ ಕರೆಯಲಾಗುವುದು.” –ಪ್ರತೀಕ್ ಬಯಾಲ್, ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ
– ಸುಧೀರ್ ಎಸ್.ಎಲ್