Advertisement

ಎನ್‌ಡಿಎ ತೆಕ್ಕೆಗೆ ವೈಎಸ್ಸಾರ್‌ಸಿ? ಮೋದಿ ಜತೆಗೆ ಆಂಧ್ರ ಸಿಎಂ ಚರ್ಚೆ

05:45 PM Oct 09, 2020 | Nagendra Trasi |

ನವದೆಹಲಿ: ವೈ.ಎಸ್‌.ಆರ್‌. ಕಾಂಗ್ರೆಸ್‌ ಎನ್‌ಡಿಎ ಸೇರ್ಪಡೆಯಾಗಲಿದೆಯೇ? ಅಂಥದ್ದೊಂದು ವದಂತಿ ನವದೆಹಲಿಯ ರಾಜಕೀಯ ವಲಯದಲ್ಲಿ ಹರಿದಾಡು
ತ್ತಿದೆ. ಅದಕ್ಕೆ ಪೂರಕವಾಗಿ ಮಂಗಳವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಅವರು ಪ್ರಧಾನಿ ಮೋದಿಯವರ ಜತೆ40 ನಿಮಿಷ ಮಾತು ಕತೆ ನಡೆಸಿದ್ದಾರೆ.

Advertisement

ಕೇಂದ್ರದಿಂದ ಆಂಧ್ರಕ್ಕೆ ಮಂಜೂರಾಗ ಬೇಕಾಗಿರುವ ಹಲವು ಯೋಜನೆಗಳಿಗೆ ಅನುಮೋದನೆ ಪಡೆಯುವ ವಿಚಾರ ಸಂಬಂಧ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಂಧ್ರದಲ್ಲಿ ಟಿಡಿಪಿ ಎನ್‌ಡಿಎಯಿಂದ ಹೊರಗೆ ಬಂದ ಬಳಿಕ ಅಲ್ಲಿ ಬಿಜೆಪಿಗೆ ಸೂಕ್ತ ಮಿತ್ರರಿಲ್ಲ. ವೈ.ಎಸ್‌.ಆರ್‌.ಕಾಂಗ್ರೆಸ್‌ ಲೋಕಸಭೆಯಲ್ಲಿ 21 ಸದಸ್ಯರನ್ನು ಹೊಂದಿದೆ.

ರಾಜ್ಯಸಭೆಯಲ್ಲಿ ಪಕ್ಷದ ‌ 6 ಸದಸ್ಯರಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾದ ಮುಂಗಾರು ಅಧಿವೇಶನದಲ್ಲಿ ಕಾರ್ಮಿಕ ಸಂಹಿತೆ ಸೇರಿದಂತೆ ಹಲವು ವಿಧೇಯಕಗಳಿಗೆ ವೈಎಸ್ಸಾರ್‌ ಕಾಂಗ್ರೆಸ್‌ ಬೆಂಬಲ ನೀಡಿದ್ದುಂಟು.

ಜಗನ್‌ ರೆಡ್ಡಿಯವರು ಸೆ.23, 24ರಂದು ನವದೆಹಲಿಯಲ್ಲಿ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿ ಮಾತು ಕತೆ ನಡೆಸಿದ್ದರು. ಶಿರೋಮಣಿ ಅಕಾಲಿ ದಳ (ಪಂಜಾಬ್‌), ಮಹಾರಾಷ್ಟ್ರದಿಂದ ಶಿವಸೇನೆ ಎನ್‌ಡಿಎಯನ್ನು ತ್ಯಜಿಸಿವೆ.

ಇದನ್ನೂ ಓದಿ: ಸುಭದ್ರವಾಗಿದೆ ಟೀಂ ಇಂಡಿಯಾ ಭವಿಷ್ಯ… ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ಆಟಗಾರರು

Advertisement

ಹೀಗಾಗಿ, ಬಿಜೆಪಿ ಈಗ ಮೈತ್ರಿಕೂಟ ಬಲಪಡಿಸಲು ಸಿದ್ಧತೆ ನಡೆಸುತ್ತಿದೆ. ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಗಳಿಂದ ರಕ್ಷಣೆ ಪಡೆಯುವ ನಿಟ್ಟಿ ನಲ್ಲಿಯೇ ಜಗನ್‌ ಎನ್‌ಡಿಎ ಸೇರಿಕೊಳ್ಳುತ್ತಿ ದ್ದಾರೆಂದು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next