Advertisement

ಭಾರತಕ್ಕೆ ತೈಲ ಪೂರೈಕೆ ಮಾಡುವೆವು : ಖಡಕ್‌ ಬಳಿಕ ಇರಾನ್‌ ಮೆದು

11:10 AM Jul 12, 2018 | Team Udayavani |

ಹೊಸದಿಲ್ಲಿ : ಭಾರತವು ನಮ್ಮ ನಂಬಲರ್ಹ ಇಂಧನ ಪಾಲುದಾರ ದೇಶವಾಗಿರುವುದರಿಂದ ನಮ್ಮಿಂದ ಸಾಧ್ಯವಿರುವ ಮಟ್ಟಿಗೆ ಅದರ ಭದ್ರತಾ ತೈಲ ಪೂರೈಕೆ ಬಾಧಿತವಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಇರಾನ್‌ ಇಂದು ಗುರುವಾರ ಹೇಳಿದೆ. 

Advertisement

ಅಮೆರಿಕದ ನಿಷೇಧಗಳನ್ನು ಅನುಸರಿಸಿ ಭಾರತವು ಇರಾನ್‌ ತೈಲ ಆಮದನ್ನು ಕಡಿತಗೊಳಿಸಿದರೆ ಅದು ಇರಾನ್‌ನಿಂದ ಪಡೆಯುತ್ತಿರುವ ವಿಶೇಷ ಸೌಕರ್ಯಗಳನ್ನು  ಕಳೆದುಕೊಳ್ಳಬೇಕಾದೀತು ಎಂದು ನಿನ್ನೆ ಬುಧವಾರವಷ್ಟೇ ಇರಾನ್‌ನ ಉಪ ರಾಯಭಾರಿ ಮತ್ತು ಚಾರ್ಜ್‌ ಡಿ ಅಫೇರ್  ಮಸೂದ್‌ ರೆಜ್‌ವಾನಿಯನ್‌ ರೆಹಾಗಿ ಖಡಕ್‌ ಎಚ್ಚರಿಕೆ ಕೊಟ್ಟಿದ್ದರು. 

ಇಂದು ಇರಾನ್‌ ದೂತಾವಾಸ ಈ ಬಗ್ಗೆ ಸ್ಪಷ್ಟೀಕರಣ ನೀಡಿ ಭಾರತಕ್ಕೆ ಪೂರೈಸಲಾಗುವ ತೈಲ ಪ್ರಮಾಣವನ್ನು ಕಾಯ್ದುಕೊಳ್ಳಲು ಎಲ್ಲ ಸಾಧ್ಯ ಯತ್ನಗಳನ್ನು ಮಾಡಲಾಗುವುದು ಎಂದು ಹೇಳುವ ಮೂಲಕ ತನ್ನ ಕಠಿನ ನಿಲುವಿನಿಂದ ಮೃದುವಾಗಿ ತೇಪೆ ಹಾಕುವ ಕೆಲಸ ಮಾಡಿದೆ. 

ಅಸ್ಥಿರ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯೊಂದಿಗೆ ವ್ಯವಹರಿಸುವಾಗ ಹೊಸದಿಲ್ಲಿ ಎದುರಿಸುವ ಒತ್ತಡವನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಹಾಗೆಯೇ ಭಾರತ ತನ್ನ ಇಂಧನ ಪಾಲುದಾರನನ್ನು ಆಯ್ಕೆ ಮಾಡಿಕೊಳ್ಳಬೇಕಾಗುವುದು ಮತ್ತು ಹಾಗೆ ಮಾಡುವಾಗ ಅದು ಭೂರಾಜಕಾರಣ ಸ್ಥಿತಿಗತಿ ಮತ್ತು ನಂಬಿಗಸ್ಥ ತೈಲ ಪೂರೈಕೆದಾರ ಇತ್ಯಾದಿ ಅಂಶಗಳನ್ನು ಪರಿಗಣಿಸುವುದು ಉತ್ತಮ ಎಂದು ಇರಾನ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next