Advertisement
ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಹಾಗೂ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಈಗಾಗಲೇ ಹರಾಜು ಮಾಡಲಾಗಿದ್ದು ಅದರಲ್ಲಿ ರೆಸ್ಟೋರೆಂಟ್ 4.53 ಕೋಟಿಗೆ ಹರಾಜಾಗಿದ್ದು, ಆರು ಫ್ಲಾಟ್‌ಗಳು 3.53 ಕೋಟಿಗೆ ಹಾಗೂ ಅತಿಥಿ ಗೃಹ 3.52 ಕೋಟಿಗೆ ಹರಾಜಾಗಿತ್ತು.
ದಾವೂದ್ ತಾಯಿ ಅಮಿನಾ ಬಿ ಹೆಸರಿನಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್ ತಾಲೂಕಿನಲ್ಲಿರುವ ನಾಲ್ಕು ಆಸ್ತಿಗಳಿದ್ದು ಇದರಲ್ಲಿ ದಾವೂದ್ ಅವರ ಬಾಲ್ಯದ ಮನೆ ಜೊತೆಗೆ ಕೃಷಿ ಭೂಮಿ ಕೂಡ ಇದೆಯಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವಾಗ ನಡೆಯಲಿದೆ:
ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದ್ದು ಹರಾಜಿನಲ್ಲಿ ಭಾಗವಹಿಸುವವರು ಬುಧವಾರದೊಳಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement