ಮುಂಬಯಿ: ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬಯಿಯ ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್ ಸಿಬಿ) ವಶಕ್ಕೆ ಪಡೆದಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಮಲ್ಯ, ನೀರವ್ ಮೋದಿ,ಚೋಕ್ಸಿಗೆ ಸಂಬಂಧಿಸಿದ 18,170.02 ಕೋಟಿ ಮೌಲ್ಯದ ಸ್ವತ್ತುಗಳ ಮುಟ್ಟುಗೋಲು!
ಎಎನ್ ಐ ಸುದ್ದಿ ಸಂಸ್ಥೆ ಪ್ರಕಾರ, ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್ ಸಿಬಿ ಖಚಿತಪಡಿಸಿರುವುದಾಗಿ ಹೇಳಿದೆ.
ಇಕ್ಬಾಲ್ ಕಸ್ಕರ್ ನನ್ನು ಈ ಸಂದರ್ಭದಲ್ಲಿ ಎನ್ ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿದೆ. ಈ ಹಿಂದೆ ಮುಂಬಯಿಯಲ್ಲಿ ಭೇದಿಸಿದ ಮಾದಕವಸ್ತು ಜಾಲ ಪ್ರಕರಣ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಎನ್ ಸಿಬಿ ಸರಣಿಯಾಗಿ ತನಿಖೆಗೊಳಪಡಿಸಿದೆ ಎಂದು ವರದಿ ವಿವರಿಸಿದೆ.
ಕೆಲವು ನಂಬಲಾರದ ವರದಿಗಳ ಪ್ರಕಾರ, ಜಮ್ಮು-ಕಾಶ್ಮೀರದಿಂದ ಸುಮಾರು 25ಕೆ.ಜಿಯಷ್ಟು ಚರಸ್ ಅನ್ನು ತರುತ್ತಿದ್ದ ಇಕ್ಬಾಲ್ ಕಸ್ಕರ್ ನನ್ನು ಬಂಧಿಸಲಾಗಿದ್ದು, ಇಕ್ಬಾಲ್ ಚರಸ್ ಅನ್ನು ಮುಂಬಯಿಯಲ್ಲಿ ವಿತರಿಸುವ ಜಾಲ ಹೊಂದಿರುವುದಾಗಿ ತಿಳಿಸಿದೆ.