ನವದೆಹಲಿ/ಮುಂಬೈ: ಪಾಕಿಸ್ತಾನದ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಗ್ಯಾಂಗ್‌ನ ಸದಸ್ಯರಿಗೆ ವಿಶೇಷ ಆದ್ಯತೆಯ ಸವಲತ್ತುಗಳು ಸಿಗುತ್ತವೆ. ಇದು ಎನ್‌ಐಎ ನಡೆಸಿದ ತನಿಖೆ ಹಾಗೂ ಸಂಗ್ರಹಿಸಿದ ಮಾಹಿತಿಯಿಂದ ದೃಢಪಟ್ಟಿದೆ. ಭೂಗತ ಪಾತಕಿಯ ಅತ್ಯಂತ ಆಪ್ತ ಛೋಟಾ ಶಕೀಲ್ ಹಾಗೂ ದಾವೂದ್ ಸಂಬಂಧಿಕರು 2013ರಿಂದ 3 ಬಾರಿ ಯುಎಇ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದ್ದರು.
ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿ ಛೋಟಾ ಶಕೀಲ್‌ನ ಸಂಬಂಧಿ ಸಲೀಂ ಖುರೇಶಿ ಅಲಿಯಾಸ್ “ಸಲೀಂ ಫ್ರುಟ್’ನ ಪತ್ನಿ ಸಜಿಯಾ ಮೊಹಮ್ಮದ್ ಎನ್‌ಐಎಗೆ ನೀಡಿದ ಮಾಹಿತಿಯಲ್ಲಿ ಈ ಆಘಾತಕಾರಿ ಅಂಶಗಳು ವ್ಯಕ್ತವಾಗಿವೆ.
ಕರಾಚಿ ವಿಮಾನ ನಿಲ್ದಾಣವನ್ನು ದಾವೂದ್‌ನ ನಿಕಟ ಬಂಧುಗಳು ಮತ್ತು ಸಹಚರರ ಪಾಸ್‌ಪೋರ್ಟ್ ಮೇಲೆ ಸ್ಟಾಂಪಿಂಗ್ ಕೂಡ ಮಾಡಲಾಗುತ್ತಿಲ್ಲ.
ಇದರ ಜತೆಗೆ ದಾವೂದ್ ಇಬ್ರಾಹಿಂ ಜತೆಗೆ ಯಾವುದಾದರೂ, ವ್ಯಾಪಾರ ನಡೆಸುವ ಉದ್ದೇಶದಿಂದ ಕರಾಚಿಗೆ ಆಗಮಿಸಿದ್ದರೆ ಅವರಿಗೆ ಕೂಡ ಆದ್ಯತೆಯ ಸವಲತ್ತುಗಳನ್ನು ನೀಡಲಾಗುತ್ತದೆ ಎಂದು ಸದ್ಯ ಮುಂಬೈನಲ್ಲಿ ವಾಸಿಸುವ ಸಾಜಿಯಾ ಮೊಹಮ್ಮದ್ ಹೇಳಿದ್ದಾಳೆ.
2013ರಲ್ಲಿ ಒಂದು ಬಾರಿ ಮತ್ತು 2014ರಲ್ಲಿ ಎರಡು ಬಾರಿ ಸಾಜಿಯಾ ತನ್ನ ಇಬ್ಬರು ಪುತ್ರರಾದ ಸಲೀಂ ಮತ್ತು ಝೈದ್ ಜತೆಗೆ ಭಾರತಕ್ಕೆ ಎರಡು ಬಾರಿ ಅಕ್ರಮವಾಗಿ ಪ್ರವೇಶ ಮಾಡಿದ್ದಾಗಿ ಎನ್‌ಐಎಗೆ ತಿಳಿಸಿದ್ದಾಳೆ.