Advertisement

Davis Cup ವಿಶ್ವ ಬಣ 1 ಭಾರತಕ್ಕೆ ಸ್ವೀಡನ್‌ ಎದುರಾಳಿ

11:41 PM Feb 08, 2024 | Team Udayavani |

ಹೊಸದಿಲ್ಲಿ: ಮುಂದಿನ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಬಣ ಒಂದರ ಹೋರಾಟದಲ್ಲಿ ಭಾರತವು ಸ್ವೀಡನ್‌ ತಂಡವನ್ನು ಎದುರಿಸಲಿದೆ.

Advertisement

ಭಾರತವು ಈ ಮೊದಲು ನಡೆದ ವಿಶ್ವ ಬಣ ಒಂದರ ಪ್ಲೇಆಫ್ನಲ್ಲಿ ಪಾಕಿಸ್ಥಾನವನ್ನು 4-0 ಅಂತರದಿಂದ ಸೋಲಿಸಿದ್ದರೆ ಸ್ವೀಡನ್‌ ತಂಡವು ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಬ್ರಝಿಲ್‌ ವಿರುದ್ಧ 1-3 ಅಂತರದಿಂದ ಸೋಲನ್ನು ಕಂಡಿತ್ತು

.ಭಾರತ ಮತ್ತು ಸ್ವೀಡನ್‌ ಇಷ್ಟರವರೆಗೆ ಐದು ಬಾರಿ ಮುಖಾಮುಖೀಯಾದರೂ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಆದರೆ ಈ ಬಾರಿ ಭಾರತಕ್ಕೆ ಸ್ವೀಡನ್‌ ತಂಡವನ್ನು ಸೋಲಿಸುವ ಒಳ್ಳೆಯ ಅವಕಾಶ ಭಾರತಕ್ಕೆ ಲಭಿಸಿದೆ. ಭಾರತ ಈ ಹಿಂದೆ 2005ರಲ್ಲಿ ತವರಿನಲ್ಲಿ ಸ್ವೀಡನ್‌ ವಿರುದ್ಧ ಆಡಿತ್ತು. ಹೊಸದಿಲ್ಲಿಯಲ್ಲಿ ನಡೆದ ಈ ಹೋರಾಟದಲ್ಲಿ ಭಾರತ 1-3 ಅಂತರದಿಂದ ಸೋಲನ್ನು ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next