Advertisement
ಡೇವಿಸ್ ಕಪ್ ಇತಿಹಾಸದಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಈವರೆಗೆ ಸೋಲನ್ನೇ ಕಂಡಿಲ್ಲ. ಆಡಿದ ಏಳೂ ಪಂದ್ಯಾವಳಿಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಬಾರಿ ಅಗ್ರ ಕ್ರಮಾಂಕದ ಆಟಗಾರರ ಗೈರಲ್ಲಿ ಭಾರತ ಆಡಲಿಳಿಯುತ್ತಿದೆ. ಅತ್ತ ಪಾಕ್ ತಂಡದಲ್ಲಿ 43 ವರ್ಷದ ಐಸಮ್ ಉಲ್ ಹಕ್ ಖುರೇಶಿ, ಅಖೀಲ್ ಖಾನ್ ಮೊದಲಾದ ಪ್ರಮುಖ ಆಟಗಾರರಿದ್ದಾರೆ.
Related Articles
ಡಬಲ್ಸ್‌ನಲ್ಲಿ ಯುಕಿ ಭಾಂಬ್ರಿ- ಸಾಕೇತ್ ಮೈನೇನಿ ಕಣಕ್ಕಿಳಿಯಲಿದ್ದಾರೆ.
Advertisement
ತೀವ್ರ ಸ್ಪರ್ಧೆ ಸಾಧ್ಯತೆಭಾರತ ತಂಡದ ಆಡದ ನಾಯಕ ಜೀಶನ್ ಅಲಿ ಪ್ರಕಾರ ಇದೊಂದು ತೀವ್ರ ಸ್ಪರ್ಧೆಯ ಪಂದ್ಯಾವಳಿ ಆಗಲಿದೆ. ಆದರೆ ಭಾರತದ ಕ್ರಿಕೆಟ್ ತಂಡವಾಗಲಿ, ಇತರ ಕ್ರೀಡಾಪಟುಗಳಾಗಲಿ ಪಾಕಿಸ್ಥಾನದಲ್ಲಿ ಏಕೆ ಆಡುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅಲಿ ಪ್ರತಿಕ್ರಿಯಿಸಲಿಲ್ಲ.
“ನಾವಿಲ್ಲಿ ಟೆನಿಸ್ ಆಡಲು ಬಂದಿದ್ದೇವೆ. ಕೆಲವೊಂದು ನಿರ್ಧಾರಗಳನ್ನು ನಮ್ಮ ಸರಕಾರ ತೆಗೆದುಕೊಳ್ಳುತ್ತದೆಯೇ ಹೊರತು ಇದರಲ್ಲಿ ನಮ್ಮ ಪಾತ್ರವೇನೂ ಇರದು’ ಎಂದರು. ಕೇವಲ 500 ಮಂದಿ
ಇಸ್ಲಾಮಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಕೇವಲ 500 ಮಂದಿ ಅಧಿಕಾರಿಗಳು ಹಾಗೂ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿದೆ.
ಶುಕ್ರವಾರ 2 ಸಿಂಗಲ್ಸ್ ಸ್ಪರ್ಧೆ ನಡೆಯಲಿದೆ. ಇದು 1-1 ಫಲಿತಾಂಶ ದಾಖಲಿಸಿದರೆ ಡಬಲ್ಸ್ ಪಂದ್ಯ ಕೂಡ ಶುಕ್ರವಾರವೇ ನಡೆಯುವ ಸಾಧ್ಯತೆ ಇದೆ. ಡೇವಿಸ್ ಕಪ್ ಡ್ರಾ
ಸಿಂಗಲ್ಸ್ (ಫೆ. 3)
1. ರಾಮ್‌ಕುಮಾರ್ ರಾಮನಾಥನ್-ಐಸಮ್ ಉಲ್ ಹಕ್ ಖುರೇಶಿ.
2. ಶ್ರೀರಾಮ್ ಬಾಲಾಜಿ-ಅಖೀಲ್ ಖಾನ್.
ಡಬಲ್ಸ್ (ಫೆ. 4)
ಯುಕಿ ಭಾಂಬ್ರಿ-ಸಾಕೇತ್ ಮೈನೇನಿ, ಬರ್ಕತುಲ್ಲ-ಮುಜಮ್ಮಿಲ್ ಮುರ್ತಜ
ರಿವರ್ಸ್ ಸಿಂಗಲ್ಸ್ (ಫೆ. 4)
1. ರಾಮ್‌ಕುಮಾರ್ ರಾಮನಾಥನ್-ಅಖೀಲ್ ಖಾನ್
2. ಶ್ರೀರಾಮ್ ಬಾಲಾಜಿ-ಐಸಮ್ ಉಲ್ ಹಕ್ ಖುರೇಶಿ