Advertisement

ಡೇವಿಸ್‌ ಕಪ್‌: ಪೇಸ್‌ ವಿಶ್ವದಾಖಲೆ

06:25 AM Apr 08, 2018 | Team Udayavani |

ತಿಯಾಂಜಿನ್‌: ಖ್ಯಾತ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ವಿಶ್ವ ದಾಖಲೆಯೊಂದಿಗೆ ಚೀನ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತ 3-2 ಅಂತರದಿಂದ ಜಯ ಸಾಧಿಸಿದೆ. ಒಟ್ಟಾರೆ 43 ಡೇವಿಸ್‌ ಕಪ್‌ ಡಬಲ್ಸ್‌ ಪಂದ್ಯ ಗೆದ್ದಿರುವ ಪೇಸ್‌, ಡೇವಿಸ್‌ ಕೂಟದ ಇತಿಹಾಸದಲ್ಲಿ ಅತೀ ಹೆಚ್ಚು ಡಬಲ್ಸ್‌ ಪಂದ್ಯ ಗೆದ್ದ ಆಟಗಾರನೆಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ತಂಡದ ಗೆಲುವಿನೊಂದಿಗೆ ಭಾರತ ವಿಶ್ವ ಗುಂಪು ಪ್ಲೇ ಆಫ್ಗೆ ಅರ್ಹತೆ ಪಡೆದಿದೆ.

Advertisement

ಮೊದಲ ದಿನದ ಸ್ಪರ್ಧೆಯಲ್ಲಿ ಚೀನ ವಿರುದ್ಧದ 2 ಸಿಂಗಲ್ಸ್‌ ಪಂದ್ಯಗಳನ್ನು ಭಾರತ ಸೋತಿತ್ತು. ಆದರೆ ಶನಿವಾರ ಭಾರತ ಆಟಗಾರರು ಪಟ್ಟು ಸಡಿಸಲಿಲ್ಲ. ಹಿನ್ನಡೆಯಿದ್ದರೂ ಮುನ್ನಡೆಯುವ ಛಲದೊಂದಿಗೆ ಡಬಲ್ಸ್‌ ಆಟಗಾರರಾದ ಲಿಯಾಂಡರ್‌ ಪೇಸ್‌-ರೋಹನ್‌ ಬೋಪಣ್ಣ ಕಣಕ್ಕೆ ಇಳಿದರು. ಮಾ ಕ್ಸಿನ್‌-ಝಾಂಗ್‌ ವಿರುದ್ಧ 7-5, 6-7, 6-7 ಅಂತರದಿಂದ ಗೆಲುವು ಸಾಧಿಸಿದರು. ಭಾರತದ ಹಿನ್ನಡೆ ಅಂತರವನ್ನು 1-2ಕ್ಕೆ ತಗ್ಗಿಸಿದರು.

ಮೊದಲ ಸಿಂಗಲ್ಸ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿದ ರಾಮ್‌ಕುಮಾರ್‌ ರಾಮನಾಥನ್‌ ಮತ್ತೂಂದು ಸಿಂಗಲ್ಸ್‌ನಲ್ಲಿ ಡಿ ವು ಅವರನ್ನು 7-6 (4), 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಹೀಗಾಗಿ ಹೋರಾಟ 2-2ರಿಂದ ಸಮಬಲಗೊಂಡಿತು.  ಕೊನೆಯ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಲ್‌ ಉಪಸ್ಥಿತಿಯ ಹೊರತಾಗಿಯೂ ಪ್ರಜ್ಞೆàಶ್‌ ಗುಣೇಶ್ವರನ್‌ ಅವರನ್ನು ಕಣಕ್ಕಿಳಿಸಲಾಯಿತು. ಅವರು ಯಿಬ್ಲಿಂಗ್‌ ವಿರುದ್ಧ 6-4, 6-2 ಅಂತರದಿಂದ ಗೆದ್ದು ಭಾರತದ ಸಂಭ್ರಮಕ್ಕೆ ಕಾರಣರಾದರು.

Advertisement

Udayavani is now on Telegram. Click here to join our channel and stay updated with the latest news.

Next