Advertisement

Davis Cup ಕೋಚ್‌ ಜೀಶನ್‌ ಅಲಿ ರಾಜೀನಾಮೆ

01:40 AM Aug 15, 2024 | Team Udayavani |

ಹೊಸದಿಲ್ಲಿ: ಕಳೆದ 11 ವರ್ಷಗಳಿಂದ ಭಾರತದ ಡೇವಿಸ್‌ ಕಪ್‌ ತಂಡದ ಕೋಚ್‌ ಆಗಿದ್ದ ಜೀಶನ್‌ ಅಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. “ನ್ಯಾಶನಲ್‌ ಟೆನಿಸ್‌ ಸೆಂಟರ್‌’ನ (ಎನ್‌ಟಿಸಿ) ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ನಿರ್ಧಾರಕ್ಕೆ ಬಂದುದಾಗಿ ಅಲಿ ಹೇಳಿದ್ದಾರೆ.

Advertisement

2013ರಲ್ಲಿ ನಂದನ್‌ ಬಾಲ್‌ ಅವರ ಉತ್ತರಾಧಿಕಾರಿಯಾಗಿ ಡೇವಿಸ್‌ ಕಪ್‌ ತಂಡದ ಕೋಚ್‌ ಆಗಿ ಜೀಶನ್‌ ಅಲಿ ನೇಮಕ ಗೊಂಡಿ ದ್ದರು. ಆಗ ಭಾರತದ ಅಗ್ರ ಶ್ರೇಣಿಯ ಆಟ ಗಾರರು ಎಐಟಿಎ ವಿರುದ್ಧ ತಿರುಗಿ ನಿಂತಿದ್ದರು. ಆಟಕ್ಕೆ ಅತ್ಯಂತ ಸೂಕ್ತವಾದ, ಅತ್ಯುತ್ತಮ ವಾತಾವರಣ ಮೂಡಿಸಬೇಕು ಎಂಬುದು ಇವರ ಬೇಡಿಕೆಯಾಗಿತ್ತು.

ಇದೇ ಕಾರಣ ಕ್ಕಾಗಿ ಕೊರಿಯಾ ವಿರುದ್ಧ ಹೊಸದಿಲ್ಲಿಯಲ್ಲಿ ಆಡಲು ನಿರಾಕರಿಸಿದ್ದರು. ಇದನ್ನೆಲ್ಲ ನಿಭಾಯಿಸಬೇಕಾದ ಒತ್ತಡ ಅಲಿ ಮೇಲಿತ್ತು. 54 ವರ್ಷದ ಜೀಶನ್‌ ಆಲಿ, ಕಳೆದ ಪಾಕಿಸ್ಥಾನ ವಿರುದ್ಧದ ಪಂದ್ಯಾವಳಿ ವೇಳೆ ಭಾರತ ತಂಡದ ಆಡದ ನಾಯಕನೂ ಆಗಿದ್ದರು. ಇಸ್ಲಾಮಾಬಾದ್‌ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಭಾರತ ಜಯ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next