Advertisement

ಚೆಂಡು ಬಡಿದ ಟೆನಿಸ್‌ ಅಂಪಾಯರ್‌ ಕಣ್ಣಿಗೆ ಶಸ್ತ್ರಚಿಕಿತ್ಸೆ

03:45 AM Feb 13, 2017 | |

ಒಟ್ಟಾವ: ಗ್ರೇಟ್‌ ಬ್ರಿಟನ್‌ ವಿರುದ್ಧ ನಡೆದ ಡೇವಿಸ್‌ ಕಪ್‌ ಪಂದ್ಯದ ವೇಳೆ ಕೆನಡದ ಡೆನಿಸ್‌ ಶಪೋವಾಲೋವ್‌ ಸಿಟ್ಟಿನಿಂದ ಎಸೆದ ಚೆಂಡು ಬಡಿದು ಕಣ್ಣಿಗೆ ಗಾಯವಾಗಿದ್ದ  ಫ್ರಾನ್ಸ್‌ನ ಟೆನಿಸ್‌ ಅಂಪಾಯರ್‌ ಅರ್ನಾಡ್‌ ಗಾಬಾಸ್‌ ಅವರೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Advertisement

ಎಎಫ್ಪಿ ಮೂಲಗಳ ಪ್ರಕಾರ 35ರ ಹರೆಯದ ಗಾಬಾಸ್‌ ಅವರ ರೆಟಿನಾ ಮತ್ತು ಕಾರ್ನಿಯಾಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಕಣ್ಣಿನ ಕುಳಿಗೆ ಗಾಯವಾಗಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದೆ.  ಡೇವಿಸ್‌ ಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಕೈಲ್‌ ಎಡ್ಮಂಡ್‌ ವಿರುದ್ಧ ಆಡುತ್ತಿರುವ ವೇಳೆ ಶಪೋವಾಲೋವ್‌ ಅಂಕ ಕಳೆದುಕೊಂಡ ಸಿಟ್ಟಿನಿಂದ ಚೆಂಡನ್ನು ಅಂಪಾಯರ್‌ ಕಡೆ ಎಸೆದಿದ್ದರು. ಚೆಂಡು ನೇರ ಅಂಪಾಯರ್‌ ಗಾಬಾಸ್‌ ಅವರ ಕಣ್ಣಿಗೆ ಬಡಿದಿತ್ತು. ಅನುಚಿತ ವರ್ತನೆಗಾಗಿ ಆ ಪಂದ್ಯವನ್ನು ಅನರ್ಹಗೊಳಿಸಿ ಎಡ್ಮಂಡ್‌ ವಿಜಯಿಯೆಂದು ಘೋಷಿಸಲಾಗಿತ್ತು.

ವಿಂಬಲ್ಡನ್‌ ಜೂನಿಯರ್‌ ಚಾಂಪಿಯನ್‌ ಆಗಿರುವ ಇಸ್ರೇಲ್‌ ಮೂಲದ ಶಪೋವಾಲೋವ್‌ ತನ್ನ ವರ್ತನೆಗೆ ಆಬಳಿಕ ಕ್ಷಮೆಯಾಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next