Advertisement
ಶನಿವಾರದ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತಿದ್ದ ಭಾರತ, ರವಿವಾರ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿತ್ತು. ಮೊದಲು ಆಡಲಾದ ಡಬಲ್ಸ್ ಪಂದ್ಯದಲ್ಲಿ ರಾಮ್ಕುಮಾರ್ ರಾಮನಾಥನ್-ಎನ್. ಶ್ರೀರಾಮ್ ಬಾಲಾಜಿ ಅವರನ್ನು ಆ್ಯಂಡ್ರೆ ಗೊರಾನ್ಸನ್-ಫಿಲಿಪ್ ಬಗೇìವಿ ಸೇರಿಕೊಂಡು 6-3, 6-4 ಅಂತರದಿಂದ ಮಣಿಸಿದರು.ಸ್ವೀಡನ್ 3-0 ಲೀಡ್ ಪಡೆದ ಕಾರಣ ರಿವರ್ಸ್ ಸಿಂಗಲ್ಸ್ ಕೇವಲ ಔಪಚಾರಿಕವಾಗಿತ್ತು. ಇಲ್ಲಿ ನ್ಯಾಶನಲ್ ಚಾಂಪಿಯನ್ ಸಿದಾ§ರ್ಥ್ ಅವರನ್ನು ಪರೀಕ್ಷಿಸಲು ಕಣಕ್ಕಿಳಿಸಲಾಯಿತು. ಎದುರಾಳಿ ಎಲಿಯಾಸ್ ವೈಮರ್ 6-2, 6-2ರಿಂದ ಭಾರತೀಯನನ್ನು ಮಣಿಸಿದರು.