Advertisement

ಡೇವಿಸ್‌: ತಂಡಕ್ಕೆ ಮರಳಿದ ಭಾಂಬ್ರಿ, ಮೈನೇನಿ; ಪೇಸ್‌ ಔಟ್‌

02:29 PM Aug 15, 2017 | |

ಹೊಸದಿಲ್ಲಿ: ಅಗ್ರ ಕ್ರಮಾಂಕದ ಸಿಂಗಲ್ಸ್‌ ಆಟಗಾರ ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಅವರು ಭಾರತೀಯ ಡೇವಿಸ್‌ ಕಪ್‌ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ನಿರೀಕ್ಷೆಯಂತೆ ಖ್ಯಾತ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. 

Advertisement

ಮುಂದಿನ ತಿಂಗಳು ಕೆನಡ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಹೋರಾಟಕ್ಕಾಗಿ ತಂಡವನ್ನು ಆಯ್ಕೆ ಮಾಡಲಾಗಿದ್ದು ಭಾಂಬ್ರಿ, ಮೈನೇನಿ ಅವರಲ್ಲದೇ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ರೋಹನ್‌ ಬೋಪಣ್ಣ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡವನ್ನು ಮಹೇಶ್‌ ಭೂಪತಿ ಮುನ್ನಡೆಸಲಿದ್ದಾರೆ. ಪ್ರಜ್ಞೆàಶ್‌ ಗುಣೇಶ್ವರನ್‌ ಮತ್ತು ಎನ್‌. ಶ್ರೀರಾಮ್‌ ಬಾಲಾಜಿ ಅವರು ಮೀಸಲು ಆಟಗಾರರಾಗಿರುತ್ತಾರೆ.

44ರ ಹರೆಯದ ಪೇಸ್‌ ಕಳೆದ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಉಜ್ಬೆಕಿಸ್ಥಾನ ವಿರುದ್ಧದ ಡೇವಿಸ್‌ ಕಪ್‌ ಹೋರಾಟದ ವೇಳೆ ಆರು ಸದಸ್ಯರ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ ಅಂತಿಮ ನಾಲ್ಕರ ತಂಡದಲ್ಲಿ ಹೊಸ ನಾಯಕ ಭೂಪತಿ ಅವರು ಪೇಸ್‌ ಅವರನ್ನು ಕೈಬಿಟ್ಟಿದ್ದರು. ಇದರಿಂದ ಆಘಾತ ಮತ್ತು ಮುಜುಗರಕ್ಕೆ ಒಳಗಾದ ಪೇಸ್‌ ಹೋರಾಟದ ನಡುವೆಯೆ ಸ್ಪರ್ಧೆಯ ತಾಣದಿಂದ ಹೊರನಡೆದಿದ್ದರು. 

ಗಾಯದ ಸಮಸ್ಯೆಯಿಂದಾಗಿ ಭಾಂಬ್ರಿ ಮತ್ತು ಮೈನೇನಿ ಉಜ್ಬೆಕಿಸ್ಥಾನ ವಿರುದ್ಧದ ಹೋರಾಟದಲ್ಲಿ ಆಡಿರಲಿಲ್ಲ. ಇದೀಗ ಎಟಿಪಿ ಟೂರ್‌ನಲ್ಲಿ ಆಡುತ್ತಿರುವ ಅವರಿಬ್ಬರು ಸೆ. 15ರಿಂದ 17ರ ವರೆಗೆ ಎಡ್ಮಂಟನ್‌ನಲ್ಲಿ ನಡೆಯುವ ಕೆನಡ ವಿರುದ್ಧದ ಡೇವಿಸ್‌ ಕಪ್‌ ಹೋರಾಟದಲ್ಲಿ ಆಡಲಿದ್ದಾರೆ. ಭಾಂಬ್ರಿ ಇತ್ತೀಚೆಗೆ ವಿಶ್ವದ 22ನೇ ರ್‍ಯಾಂಕಿನ ಗಾಲ್‌ ಮೊನ್‌ಫಿಲ್ಸ್‌ ಅವರನ್ನು ಸೋಲಿಸಿದ್ದರು. 

ತಂಡದಲ್ಲಿರುವ ರಾಮ್‌ಕುಮಾರ್‌ ರಾವåನಾಥನ್‌ ಕೂಡ ಇತ್ತೀಚೆಗೆ ವಿಶ್ವದ 8ನೇ ರ್‍ಯಾಂಕಿನ ಡೊಮಿನಿಕ್‌ ಥೀಮ್‌ ಅವರನ್ನು ಸೋಲಿಸಿ ಸುದ್ದಿ ಮಾಡಿದ್ದರು. ಉನ್ನತ ರ್‍ಯಾಂಕಿನ ಡಬಲ್ಸ್‌ ಆಟಗಾರರಾಗಿರುವ ಬೋಪಣ್ಣ ಅವರು ನೇರವಾಗಿ ತಂಡಕ್ಕೆ ಆಯ್ಕೆಯಾದರು. ಆದರೆ ಡೇವಿಸ್‌ ಕಪ್‌ನ ಡಬಲ್ಸ್‌ನಲ್ಲಿ ಗರಿಷ್ಠ ಗೆಲುವಿನ ವಿಶ್ವದಾಖಲೆಗೈಯಲು ಪೇಸ್‌ ಅವರಿಗೆ ಇನ್ನೊಂದು ಗೆಲುವಿನ ಆವಶ್ಯಕತೆ ಇತ್ತು. ಆದರೆ ಇದೀಗ ತಂಡದಿಂದ ಕೈಬಿಟ್ಟ ಕಾರಣ ಇದು ಸಾಧ್ಯವಾಗುತ್ತಿಲ್ಲ. ಅವರೀಗ ಇಟಲಿಯ ನಿಕೋಲ ಪೀತ್ರಾಂಗೆಲಿ ಜತೆ 42 ಗೆಲುವಿನ ದಾಖಲೆ ಹೊಂದಿದ್ದಾರೆ. 

Advertisement

ಕೆನಡ ವಿರುದ್ಧದ ಹೋರಾಟಕ್ಕೆ ಡೇವಿಸ್‌ ಕಪ್‌ ತಂಡ: ಯೂಕಿ ಭಾಂಬ್ರಿ, ರಾಮ್‌ಕುಮಾರ್‌ ರಾಮನಾಥನ್‌, ಸಾಕೇತ್‌ ಮೈನೇನಿ, ರೋಹನ್‌ ಬೋಪಣ್ಣ.

Advertisement

Udayavani is now on Telegram. Click here to join our channel and stay updated with the latest news.

Next