Advertisement

ಮೊದಲ ಟೆಸ್ಟ್‌ ಪಂದ್ಯಕ್ಕೆ ವಾರ್ನರ್‌ ಗೈರು: ಆಸೀಸ್ ಗೆ ಎದುರಾಗಿದೆ ಓಪನಿಂಗ್‌ ಸಮಸ್ಯೆ

07:36 AM Dec 10, 2020 | keerthan |

ಸಿಡ್ನಿ: ಆಸ್ಟ್ರೇಲಿಯ ತಂಡದ ಆರಂಭಕಾರ ಡೇವಿಡ್‌ ವಾರ್ನರ್‌ ಭಾರತ ವಿರುದ್ಧದ ಮೊದಲ ಟೆಸ್ಟ್‌ ನಿಂದ ಹೊರಬಿದ್ದಿದ್ದಾರೆ. ದ್ವಿತೀಯ ಟೆಸ್ಟ್‌ ವೇಳೆ ತಂಡಕ್ಕೆ ಮರಳುವ ಸಾಧ್ಯತೆ ಇದೆ ಎಂದು ತಂಡದ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ತಿಳಿಸಿದ್ದಾರೆ.

Advertisement

ಭಾರತದ ವಿರುದ್ಧ ದ್ವಿತೀಯ ಏಕದಿನ ಪಂದ್ಯದ ವೇಳೆ ವಾರ್ನರ್‌ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಇದರಿಂದ ಅಂತಿಮ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿಯಿಂದ ಬೇರ್ಪಟ್ಟಿದ್ದರು. ಇದೀಗ ಅಡಿಲೇಡ್‌ನ‌ಲ್ಲಿ ಡಿ. 17ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೂ ಲಭ್ಯರಾಗುತ್ತಿಲ್ಲ.

“ನನ್ನ ಚೇತರಿಕೆಯಲ್ಲಿ ಉತ್ತಮ ಪ್ರಗತಿ ಕಂಡು ಬಂದಿದೆ. ಸದ್ಯ ಸಿಡ್ನಿಯಲ್ಲೇ ಉಳಿದು ಸಂಪೂರ್ಣ ಫಿಟ್‌ನೆಸ್‌ ಗಳಿಸಿ, ಅನಂತರವೇ ಟೆಸ್ಟ್‌ ಆಡಳಿಲಿಯುವುದು ಉತ್ತಮ ಎಂದು ನನಗನಿಸುತ್ತಿದೆ’ ಎಂದು ವಾರ್ನರ್‌ ತಿಳಿಸಿದ್ದಾರೆ.

ಡೇವಿಡ್‌ ವಾರ್ನರ್‌ ಗೈರಿನಿಂದ ಆಸ್ಟ್ರೇಲಿಯಕ್ಕೆ ಸೂಕ್ತ ಆರಂಭಿಕನ ಆಯ್ಕೆ ಸಮಸ್ಯೆಯಾಗಿ ಕಾಡಿದೆ. ಯುವ ಓಪನರ್‌ ವಿಲ್‌ ಪುಕೋವ್‌ಸ್ಕಿಗೆ ಅಭ್ಯಾಸ ಪಂದ್ಯದ ವೇಳೆ ತಲೆಗೆ ಚೆಂಡಿನೇಟು ಬಿದ್ದಿದೆ. ಜೋ ಬರ್ನ್ಸ್ ರನ್‌ ಬರಗಾಲದಲ್ಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಗಳಿಸಿದ್ದು 4 ಮತ್ತು ಸೊನ್ನೆ. ಹೀಗಾಗಿ ಆಸೀಸ್‌ ಸರದಿಯನ್ನು ಯಾರು ಆರಂಭಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next