Advertisement

‘ಕಾಫಿ ಡೇ’ಯಲ್ಲಿ ಅಪ್ಪನನ್ನು ಹುಡುಕಿದ ವಾರ್ನರ್‌ ಮಗಳು!

03:21 PM Mar 27, 2017 | Team Udayavani |

ಧರ್ಮಶಾಲಾ: ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಇತ್ತೀಚೆಗೆ ತಮ್ಮ ಮಗಳು ಇವಿ ಮಾ ಜತೆಗಿನ ಭಾರತ ಭೇಟಿಯ ಹಲವು ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಮೊದಲೆರಡು ಟೆಸ್ಟ್‌ ಪಂದ್ಯದ ವೇಳೆ ವಾರ್ನರ್‌ ಕುಟುಂಬ ಭಾರತಕ್ಕೆ ಆಗಮಿಸಿತ್ತು. 

Advertisement

ಸದ್ಯ ವಾರ್ನರ್‌ ಪತ್ನಿ ಕ್ಯಾಂಡಿಸ್‌, ಮಗಳು ಇವಿ ಆಸೀಸ್‌ಗೆ ತೆರಳಿದ್ದಾರೆ. ಆಸೀಸ್‌ಗೆ ತೆರಳಿದರೂ ಮಗಳು ಇವಿ ಮಾತ್ರ ಅಪ್ಪನ ನೆನಪಿನಲ್ಲೇ ಇದ್ದಾಳಂತೆ. ಆಸೀಸ್‌ನಲ್ಲಿರುವ ಅಪ್ಪನ ನೆಚ್ಚಿನ ಕಾಫಿ ಡೇಗೆ ತೆರಳೋಣ ಎಂದು ಅಮ್ಮನಿಗೆ ಒತ್ತಾಯಿಸುತ್ತಾಳಂತೆ. ಅಪ್ಪ ಅಲ್ಲಾದರೂ ಸಿಗಬಹುದು ಎನ್ನುವ ನಿರೀಕ್ಷೆ ಮಗಳದ್ದು.

Advertisement

Udayavani is now on Telegram. Click here to join our channel and stay updated with the latest news.

Next