ಮಾಲ್ಡೀವ್ಸ್: ಕೋವಿಡ್ 19 ಸೋಂಕು ಕಾರಣದಿಂದ 14ನೇ ಆವೃತ್ತಿ ಐಪಿಎಲ್ ಕೂಟವನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ. ಕೂಟದಲ್ಲಿ ಆಡುತ್ತಿದ್ದ ವಿದೇಶಿ ಆಟಗಾರರನ್ನು ಅವರ ದೇಶಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಬಿಸಿಸಿಐ ಮಾಡಿದೆ. ಆಸೀಸ್ ಆಟಗಾರರು, ಕೋಚ್, ಕಾಮೆಂಟೇಟರ್ಸ್ ಗಳು ಸದ್ಯ ಮಾಲ್ಡೀವ್ಸ್ ನಲ್ಲಿದ್ದು, ಅಲ್ಲಿಂದ ಆಸೀಸ್ ಗೆ ತೆರಳಲಿದ್ದಾರೆ.
ಆದರೆ ಸನ್ ರೈಸರ್ಸ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಮತ್ತು ಆಸೀಸ್ ನ ಕಾಮೆಂಟೇಟರ್ ಮೈಕಲ್ ಸ್ಲೇಟರ್ ಮಾಲ್ಡೀವ್ ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾರೆ. ಮಾಲ್ಡೀವ್ಸ್ ನ ಬಾರೊಂದರಲ್ಲಿ ವಾರ್ನರ್ ಮತ್ತು ಸ್ಲೇಟರ್ ಕೈ ಕೈ ಮಿಲಾಯಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ ತಂದೆ ಕೋವಿಡ್ 19 ಸೋಂಕಿನಿಂದ ಸಾವು
ಆದರೆ ಈ ಸುದ್ದಿಯನ್ನು ಮೈಕಲ್ ಸ್ಲೇಟರ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ನಿರಾಕರಿಸಿದ್ದಾರೆ. ನಾವಿಬ್ಬರೂ ಉತ್ತಮ ಸ್ನೇಹಿತರು. ಇಂತಹ ಘಟನೆಗಳು ಎಂದಿಗೂ ನಡೆಯಲ್ಲ ಎಂದು ಸ್ಲೇಟರ್ ಹೇಳಿದ್ದಾರೆ.
ಈ ಸುದ್ದಿ ಎಲ್ಲಿಂದ ಹುಟ್ಟಿಕೊಂಡಿತು ಎನ್ನುವುದೇ ಗೊತ್ತಿಲ್ಲ. ಕಣ್ಣಾರೆ ನೋಡದೆ ಅಥವಾ ಯಾವುದೇ ಸಾಕ್ಷ್ಯವಿಲ್ಲದೆ ಇಂತಹ ಸುದ್ದಿ ಮಾಡುವುದು ತಪ್ಪು ಎಂದು ಡೇವಿಡ್ ವಾರ್ನರ್ ಪ್ರತಿಕ್ರಯಿಸಿದ್ದಾರೆ.