Advertisement

ಸಂಘಟಿತ ಪರಿಶ್ರಮದಿಂದಲೇ ಸಾಧನೆ

11:34 AM Apr 11, 2020 | Naveen |

ದಾವಣಗೆರೆ: ಜಿಲ್ಲೆಯಲ್ಲಿ ವರದಿಯಾಗಿದ್ದ ಕೊರೊನಾ ಮೂರು ಪಾಸಿಟಿವ್‌ ಪ್ರಕರಣಗಳ ಸೋಂಕಿತರು ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಾದ್ಯಂತ ಕೋವಿಡ್  ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂದೆಯೂ ಒಂದೂ ಪ್ರಕರಣ ವರದಿಯಾಗದಂತೆ ಕ್ರಮಗಳು ಜಾರಿಯಲ್ಲಿರಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಸೂಚಿಸಿದ್ದಾರೆ.

Advertisement

ಶುಕ್ರವಾರ, ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಕೋವಿಡ್‌-19 ವೈರಾಣು ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು ಮಾತನಾಡಿ,ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ ಮಾನವ ಸಂಪನ್ಮೂಲ, ಮೂಲಸೌಕರ್ಯಗಳಿದ್ದು ಜಿಲ್ಲಾಡಳಿತವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಜಿಲ್ಲಾಧಿಕಾರಿ ಸೇರಿದಂತೆ ಕೋವಿಡ್‌ -19 ನಿಯಂತ್ರಣದಲ್ಲಿ ತೊಡಗಿರುವ ಎಲ್ಲ ತಂಡಗಳ ಪರಿಶ್ರಮದಿಂದ ಜಿಲ್ಲೆ ಕೊರೊನಾ ಪಾಸಿಟಿವ್‌ ಮುಕ್ತವಾಗಿದೆ. ಎಲ್ಲರ ಸಂಘಟಿತ ಪ್ರಯತ್ನದಿಂದ ಜಿಲ್ಲೆ ಉತ್ತಮ ಪ್ರಗತಿ ಸಾ ಧಿಸಿದೆಯೇ ಹೊರತು ಯಾವುದೇ ಅದೃಷ್ಟದಿಂದಲ್ಲ. ಇನ್ನು ಮುಂದೆಯೂ ಇದೇ ರೀತಿ ಕೋವಿಡ್‌ ಹರಡದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಫಲರಾಗಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದು ಉಸ್ತುವಾರಿ ಕಾರ್ಯದರ್ಶಿ ಹೇಳಿದರು.

ಜಿಲ್ಲೆಯಲ್ಲಿ ಇನ್ನು ಮುಂದೆ ಮುಂಚಿತವಾಗಿ ಯೋಜನೆ ಹಾಕಿಕೊಂಡು ಟೋಕನ್‌ ನೀಡಿ ಪಡಿತರ ಹಂಚಿಕೆ ಮಾಡಬೇಕು. ರೇಷನ್‌ ಕಾರ್ಡ್‌ಗೆ ಅರ್ಜಿ ಹಾಕಿದವರಿಗೂ ಪಡಿತರ ನೀಡಬೇಕೆಂದು ಸರ್ಕಾರ ಸೂಚಿಸಿದ್ದು, ಬಡವರು ಹಸಿವಿನಿಂದ ಬಳಲದಂತೆ ಹಾಗೂ ಪಡಿತರ ಎಲ್ಲೂ ದುರ್ಬಳಕೆ ಆಗದಂತೆ ಕ್ರಮ ವಹಿಸಬೇಕು ಹೇಳಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್‌, ಕೊರೊನಾ ವೈರಸ್‌ಗೆ ಸಂಬಂಧಿ ಸಿದಂತೆ ಜಿಲ್ಲೆಯಲ್ಲಿನ ಚಿಕಿತ್ಸೆಗೆ ದಾಖಲಾದ ಪ್ರಕರಣಗಳ ಮಾಹಿತಿ, ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಮಾಹಿತಿ ನೀಡಿದರು. ಆಹಾರ ಇಲಾಖೆ ಉಪ ನಿರ್ದೇಶಕರು ಮಂಟೇಸ್ವಾಮಿ, ಜಿಲ್ಲೆಯಲ್ಲಿ ಎರಡು ತಿಂಗಳ ಪಡಿತರ ಶೇ.72 ವಿತರಣೆಯಾಗಿದೆ. ರೇಷನ್‌ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಮಾಹಿತಿ ಪಡೆದು ಪಡಿತರ ನೀvಲು ಕ್ರಮವಹಿಸಲಾಗಿದೆ. ಕಲಬುರಗಿಯಿಂದ ತೊಗರಿಬೇಳೆ ತರಿಸಿಕೊಳ್ಳಲಾಗುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ಇನ್ನು ಮುಂದೆ ಪಡಿತರ ವಿತರಣೆಗೂ ಮುನ್ನ ಜನದಟ್ಟಣೆಯಾಗದಂತೆ ಯೋಜನೆ ಹಾಕಿಕೊಳ್ಳಿ. ಪಡಿತರ ನೀಡಲು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿದ್ದು, ಈ ಪೈಕಿ ಮೂರು ಅಂಗಡಿಗಳಿಗೆ ನೋಟಿಸ್‌ ನೀಡಲಾಗಿದ್ದು ಉಳಿದ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದ ಅಧಿ ಕಾರಿ ಬಸವರಾಜ್‌ ಮಾತನಾಡಿ, ಕೇಂದ್ರದಿಂದ ದಿನವೊಂದಕ್ಕೆ 10 ಸಾವಿರ ಕಾಟನ್‌ ಮಾಸ್ಕ್ ತಯಾರಿಸುತ್ತಿದ್ದು, 10 ಲಕ್ಷ ಮಾಸ್ಕ್ ಸಿದ್ದಪಡಿಸುವ ಗುರಿ ಇದೆ. ಮೂರು ಲೇಯರ್‌ನ 7 ಲಕ್ಷ ಮಾಸ್ಕ್ ಗಳನ್ನು ಹೊಲಿಸಲಾಗುವುದು ಎಂದರು. ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮೀ ಕಾಂತ ಬೊಮ್ಮನ್ನಾರ್‌ ಮಾತನಾಡಿ, ರೈತರ ಬಳಿ ಸುಮಾರು
15 ರಿಂದ 20 ಟನ್‌ ಸಿಹಿಗುಂಬಳ ಮತ್ತು ಕೋಸು ಇದ್ದು, ಅದನ್ನು ಖರೀದಿಸಿ, ಉಡುಪಿ, ಮಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಬಗ್ಗೆ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ತಿಳಿಸಿದರು.

ಜಿಲ್ಲಾ ಕೈಗಾರಿಕಾ ಸಂಸ್ಥೆ ಉಪನಿರ್ದೇಶಕ ಮಂಜುನಾಥ್‌, ಅಗತ್ಯ ವಸ್ತುಗಳ ಕೈಗಾರಿಕೆಗಳ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ವಾರ್ಡ್‌ಗಳಲ್ಲಿ ಔಷ ಧ ಸಿಂಪಡಣೆ, ಪೌರ ಕಾರ್ಮಿಕರ ಒದಗಿಸಿರುವ ಸೌಲಭ್ಯ, ಸ್ಲಂಗಳಲ್ಲಿ ಹಾಲು ವಿತರಣೆ ಬಗ್ಗೆ ಮಾಹಿತಿ ನೀಡಿ, ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ತಿಳಿಸಿದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲೆಯ ವ್ಯಾಪ್ತಿಯಲ್ಲಿ 21 ಡಾಬಾಗಳು ತೆರೆದಿದ್ದು ಕೇವಲ ಪಾರ್ಸೆಲ್‌ ಆಹಾರ ನೀಡುತ್ತಿದ್ದಾರೆಂದಾಗ, ಉಸ್ತುವಾರಿ ಕಾರ್ಯದರ್ಶಿಗಳು ಇಂತಹ ಡಾಬಾ ಮತ್ತು ಹೋಟೆಲ್‌ಗ‌ಳಿಗೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಲಾರಿ ಚಾಲಕರು, ಸಿಬ್ಬಂದಿ ಬರುವುದರಿಂದ ಒಂದು ತಂಡ ನಿಯೋಜಿಸಿ ನಿಗಾವಹಿಸಿ ಎಂದರು. ಸಭೆಯಲ್ಲಿ ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಕೋವಿಡ್‌ ಜಿಲ್ಲಾ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಮಮತಾ ಹೊಸಗೌಡರ್‌, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next