Advertisement
ವಿವಿಧ ದೇಶಗಳಿಂದ ಬಂದವರು, ಚಿಕಿತ್ಸೆಗಾಗಿ ದಾಖಲಾದ ಬೇರೆ ಜಿಲ್ಲೆಯವರೂ ಸೇರಿ ಶನಿವಾರದವರೆಗೆ ಒಟ್ಟು 433 ಮಂದಿ ಅವಲೋಕನಾ ಪಟ್ಟಿಯಲ್ಲಿದ್ದಾರೆ. ಇನ್ನು ಸೋಂಕು ನಿಯಂತ್ರಣಕ್ಕಾಗಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮದಲ್ಲಿ 189 ಮಂದಿ 28 ದಿನಗಳ ಹಾಗೂ 170 ಜನರು 14 ದಿನಗಳ ಅವಲೋಕನ ಅವಧಿ ಪೂರ್ಣಗೊಳಿಸಿದ್ದಾರೆ. ಒಟ್ಟು 19 ಜನರನ್ನು ಮನೆಯಲ್ಲೇ ಮತ್ತು 54 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೂ 43 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಒಟ್ಟು 16 ವಿವಿಧ ತಂಡಗಳನ್ನು ರಚಿಸಿದ್ದು, ಆ ತಂಡಗಳಿಗೆ ಸಂಬಂಧಪಟ್ಟ ಕಾರ್ಯನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.
Related Articles
Advertisement
ಲಾಕ್‌ಡೌನ್ ಬಿಗಿಲಾಕ್ಡೌನ್ ಇದ್ದರೂ ಪ್ರಾರಂಭದಲ್ಲಿ ಒಂದಿಷ್ಟು ಜನ ಹಾಗೂ ವಾಹಗಳ ಸಂಚಾರ ಇದ್ದಿದ್ದರಿಂದ ಕಳೆದ 4-5 ದಿನಗಳಿಂದ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ. ಅನಾವಶ್ಯಕವಾಗಿ ಸಂಚರಿಸುವ ಮಂದಿಗೆ ಲಾಠಿ ಬಿಸಿ ಮುಟ್ಟಿಸಿದ್ದಲ್ಲದೆ, ಈಗ ವಾಹನಗಳ ಜಪ್ತಿ ಮಾಡುತ್ತಿದ್ದಾರೆ. ಹಾಗಾಗಿ ಬೆಳಿಗ್ಗೆ ಅಲ್ಲಲ್ಲಿ ವಾಹನಗಳ ಸಂಚಾರವಿದ್ದರೂ ಮಧ್ಯಾಹ್ನ ನಿಶ್ಯಬ್ದ ವಾತಾವರಣ ಇರಲಿದೆ. ಪ್ರಮುಖ ವೃತ್ತ, ರಸ್ತೆಗಳು ಸೇರಿದಂತೆ ಹಲವಡೆ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಏನೇ ಬಿಗಿ ಮಾಡಿದರೂ ಕೆಲವೆಡೆ ಜನಸಂಚಾರ ಕಡಿಮೆಯಾಗದಿರುವುದರಿಂದ ಶನಿವಾರದಿಂದ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮರ ಮೂಲಕ ಪರಿಶೀಲಿಸಲು ಕ್ರಮ ಕೈಗೊಂಡಿದೆ. ಅಗತ್ಯ ವಸ್ತುಗಳು ಲಭ್ಯ
ತರಕಾರಿ ಹಾಗೂ ಅಗತ್ಯ ವಸ್ತುಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿಲ್ಲ. ದಿನಸಿ ಅಂಗಡಿಗಳು ಬೆಳಿಗ್ಗೆಯಿಂದಲೇ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆಯಲ್ಲಿ ಜನಜಂಗುಲಿ ಆಗುತ್ತಿದ್ದರಿಂದ ಈಗ ತಳ್ಳುವ ಗಾಡಿ ಹಾಗು ಆಪೇ ಆಟೋಗಳ ಮೂಲಕ ಎಲ್ಲಾ ವಾರ್ಡ್‌ಗಳಲ್ಲೂ ತರಕಾರಿ ಸಿಗುವ ಸೌಲಭ್ಯ ಕಲ್ಪಿಸಲಾಗಿದೆ. ಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗಳು ತರಕಾರಿಗೆ ದರ ನಿಗದಿಪಡಿಸಲಿದ್ದು, ನಿಗದಿತ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.ಆದರೂ ತಳ್ಳುವ ಗಾಡಿಯಲ್ಲಿನ ತರಕಾರಿ ಬೆಲೆ ದುಬಾರಿ ಎಂಬ ಮಾತು ಕೇಳಿ ಬರುತ್ತಿವೆ. ಪಡಿತರ ವಿತರಣೆ
ಜಿಲ್ಲೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಸೇರಿ ಒಟ್ಟು 3,79,769 ಕಾರ್ಡ್‌ದಾರರಿದ್ದು, ಶುಕ್ರವಾರದವರೆಗೆ ಒಟ್ಟು 2,91,523 ಕಾರ್ಡ್‌ದಾರರಿಗೆ ಪಡಿತರ ವಿತರಿಸಲಾಗಿದೆ. ಮಾರ್ಚ್ 31ರ ವರೆಗೂ ಬಾಕಿ ಕಾಡ್ ìದಾರರಿಗೆ ಪಡಿತರ ವಿತರಿಸಲಾಗುವುದು. ಎಪಿಎಲ್ ಕಾರ್ಡ್‌ದಾರರು ಯಾರೂ ಸಹ ಪಡಿತರಕ್ಕಾಗಿ ಬಂದಿಲ್ಲ. ಮೇಲಾಗಿ ಪಡಿತರ ವಿತರಣೆ ವೇಳೆ ಹಣ ಕೇಳಿದ ದೂರಿನ ಮೇರೆಗೆ ನಾಲ್ಕು ಅಂಗಡಿಗಳನ್ನ ಸಸ್ಪೆಂಡ್ ಮಾಡಲಾಗಿದೆಯಲ್ಲದೆ, ಮೂರು ಅಂಗಡಿಯವರಿಗೆ ನೋಟಿಸ್ ನೀಡಲಾಗಿದೆ ಎಂದು ಆಹಾರ ಇಲಾಖೇ ಉಪ ನಿರ್ದೇಶಕ ಮಂಟೇಸ್ವಾಮಿ ತಿಳಿಸಿದ್ದಾರೆ. ಎನ್.ಆರ್. ನಟರಾಜ