Advertisement
ಭಾನುವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಎರಡು ದಿನಗಳ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತ ಒಳಗೊಂಡಂತೆ ಪ್ರತಿ ಪ್ರಕರಣದ ತನಿಖೆಯಲ್ಲಿ ಆಸಕ್ತಿ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ. ಆಸಕ್ತಿ ಪ್ರಶ್ನೆಗಳಿಗೆ ಕಾರಣವಾಗುತ್ತಾ ಪ್ರಕರಣದ ಮೂಲ ಪತ್ತೆ ಹಚ್ಚಲು ನೆರವಾಗುತ್ತದೆ. ಆಸಕ್ತಿ, ಅನ್ವೇಷಣಾಶೀಲತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Related Articles
Advertisement
ಘಟನಾ ಸ್ಥಳಕ್ಕೆ ಹೋಗುವ ಯಾರೆಯೇ ಆಗಲಿ ತಕ್ಷಣಕ್ಕೆ ಶ್ವಾನದಳ, ಬೆರಳಚ್ಚು ತಜ್ಞರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಕರೆಸಿಕೊಳ್ಳಬೇಕು. ಅದಕ್ಕೆ ಜಿಲ್ಲಾ ರಕ್ಷಣಾಧಿಕಾರಿಯ ಅನುಮತಿ, ಆದೇಶವೇ ಬೇಕಾಗಿಲ್ಲ. ಪ್ರತಿ ಪ್ರಕರಣದ ತನಿಖೆಯನ್ನ ಎಲ್ಲ ಹಂತಗಳಲ್ಲಿ ನಿಗದಿತ ಕ್ರಮಗಳನ್ನು ಕೈಗೊಂಡು ಆಸಕ್ತಿಯಿಂದ ತನಿಖೆ ನಡೆಸಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸದಾ ಸಮಾಜದೊಂದಿಗೆ ಒಡನಾಟ ಹೊಂದಿರಬೇಕಾಗುತ್ತದೆ. ಕೆಟ್ಟವರಿಂದ ಒಳ್ಳೆಯವರಿಗೆ ತೊಂದರೆ ಆಗದಂತೆ ಕರ್ತವ್ಯ ನಿರ್ವಹಣೆ ಮಾಡಬೇಕಾಗುತ್ತದೆ. ಹಾಗಾಗಿ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವುದು ಅತೀ ಮುಖ್ಯ ಎಂದು ತಿಳಿಸಿದರು.
ಕಳೆದ ಆರು ತಿಂಗಳಲ್ಲಿ ಬೆರಳಚ್ಚು ವಿಭಾಗದ ರುದ್ರೇಶ್ ಮತ್ತವರ ತಂಡದ ಆಸಕ್ತಿಯಿಂದ ಅನೇಕ ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗಿದೆ. ಪ್ರತಿ ಠಾಣೆಯಲ್ಲೂ ಪ್ರತಿಭಾವಂತ, ಕೌಶಲ್ಯ, ಆಸಕ್ತಿಯ ಸಿಬ್ಬಂದಿ,ಅಧಿಕಾರಿಗಳು ಇದ್ದಾರೆ. ಪ್ರತಿಯೊಬ್ಬರಲ್ಲಿನ ವಿಶೇಷ ಸಾಮರ್ಥ್ಯ, ಕೌಶಲ್ಯವನ್ನ ಸಮರ್ಥವಾಗಿ ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡಾಕೂಟ ಉದ್ಘಾಟಿಸಿದ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ಕರ್ತವ್ಯ ಕೂಟದ ಮೂಲಕ ಇಲಾಖೆಯ ತನಿಖೆಯ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ. ಸಾಮಾನ್ಯ ಜನರ ದೃಷ್ಟಿಯಲ್ಲಿ ಫೋಟೋಗ್ರಫಿ, ವಿಡಿಯೋಗ್ರಫಿ ಒಂದುತೆರನಾಗಿದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಅದಕ್ಕೆ ವಿಶೇಷ ಅರ್ಥವಿರುತ್ತದೆ. ತನಿಖೆಯಲ್ಲಿ ಫೋಟೊದ ವಿವರಣೆ ದೊಡ್ಡದು ಮತ್ತು ವಿಭಿನ್ನವಾದುದು ಎಂದು ತಿಳಿಸಿದರು. ಎಸ್‌ಸಿಆರ್‌ಬಿ ಹಿರಿಯ ಕಾರ್ಯಕ್ರಮಾಧಿಕಾರಿ ಎನ್. ನಾಗೇಶ್ ಪ್ರಾಸ್ತಾವಿಕ ಮಾತುಗಳಾಡಿದರು. ಅಭಿಯೋಗ ಉಪನಿರ್ದೇಶಕಕಿ ಕೆ.ಜೆ ಕಲ್ಪನಾ, ವಿಧಿ ವಿಜ್ಞಾನ ವಿಭಾಗದ ಉಪನಿರ್ದೇಶಕಿ ಛಾಯಾಕುಮಾರಿ ಇದ್ದರು. ಮಲ್ಲಿಕಾರ್ಜುನ ಶಾನುಭೋಗ ಪ್ರಾರ್ಥಿಸಿದರು. ಡಿಎಆರ್ ಉಪಾಧೀಕ್ಷಕ ಬಿ.ಪಿ. ಪ್ರಕಾಶ್ ಸ್ವಾಗತಿಸಿದರು. ದೇವರಾಜ್ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು. ಕಳೆದ ಸಾಲಿನ ರಾಷ್ಟ್ರ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಫೋಟೋಗ್ರಫಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕೆ.ಪಿ. ದುಗ್ಗೇಶ್, ಬೆರಳಚ್ಚು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಕಿರಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.