ದಾವಣಗೆರೆ: ನಿರಂತರವಾಗಿ ಸುರಿಯುತ್ತಿರುವ ಸಹಜಮಳೆ ಹಾಗೂ ಚಂಡಮಾರುತ ಪರಿಣಾಮವಾಗಿಆರ್ಭಟಿಸುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಬೆಳೆನಷ್ಟವಾಗಿದೆ. ರೈತರು “ಕೈಗೆ ಬಂದ ತುತ್ತು ಬಾಯಿಗೆಬರಲಿಲ್ಲ’ ಎಂಬ ಸ್ಥಿತಿಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಜುಲೈಹಾಗೂ ಅಕ್ಟೋಬರ್ ಈಎರಡು ತಿಂಗಳುಗಳಲ್ಲಿಸುರಿದ ಅಧಿಕ ಮಳೆಯಿಂದಾಗಿ 1.22 ಕೋಟಿರೂ. ಮೌಲ್ಯದ ಕೃಷಿ ಬೆಳೆ,ಜುಲೈದಿಂದ ಇಲ್ಲಿಯವರೆಗೆ ಅಂದಾಜು1.86 ಕೋಟಿ ರೂ.ಮೌಲ್ಯದ ತೋಟಗಾರಿಕೆಬೆಳೆ ಸೇರಿ ಒಟ್ಟುಅಂದಾಜು 3.08 ಕೋಟಿ ರೂ.ಗಳಷ್ಟುಬೆಳೆ ಹಾನಿ ಸಂಭವಿಸಿದೆ.
ಈಗ ನವೆಂಬರ್‌ನಲ್ಲಿ ಮುಂದುವರಿದ ಮಳೆ ಹಾಗೂ ತಂಪುವಾತಾವರಣದಿಂದ ಇನ್ನಷ್ಟು ಹಾನಿಯಾಗಿದ್ದು ಸಮೀಕ್ಷೆಮುಂದುವರಿದೆ.ಈ ವರ್ಷ ಬಿತ್ತನೆ ಆರಂಭದಲ್ಲಿ ಮಳೆಕೊರತೆಯಾಗಿ ರೈತರಿಗೆ ಬಿತ್ತನೆ ಮಾಡಿರುವಬೀಜಗಳನ್ನು ಉಳಿಸಿಕೊಳ್ಳುವುದೇ ದೊಡ್ಡಸವಾಲಾಗಿತ್ತು. ಮೇಘರಾಜ ಅನ್ನದಾತರ ಮೊರೆಕೇಳಿಸಿಕೊಂಡವನೇನೋ ಎಂಬಂತೆ ಮಳೆಸುರಿದು ಬೀಜ ಮೊಳಕೆಯೊಡೆಯಲು, ಚಿಗುರುಬೆಳೆಯಲು ಸಹಕಾರಿಯಾಯಿತು. ಉತ್ತಮಮಳೆಯಿಂದ ಸಂತಸಗೊಂಡಿದ್ದ ಕೃಷಿಕರು ಜುಲೈ,ಅಕ್ಟೋಬರ್ ತಿಂಗಳಲ್ಲಿ ಮಳೆಯ ಆರ್ಭಟಕ್ಕೆಆತಂಕಗೊಳ್ಳುವಂತಾಯಿತು.
ಆ ಸಂದರ್ಭದಲ್ಲಿಯೂಒಂದಿಷ್ಟು ಬೆಳೆ ಹಾನಿ ಆಯಿತು. ಬಳಿಕ ಉಳಿಸಿಕೊಂಡುಬರಲಾಗಿದ್ದ ಒಂದಿಷ್ಟು ಬೆಳೆ ಕಟಾವಿಗೆ ಬಂದ ಈಸಂದರ್ಭದಲ್ಲಿ ಚಂಡಮಾರುತದ ಪರಿಣಾಮದಿಂದಬಂದ ಮಳೆ, ಸಹಜ ಮಳೆ ಹಾಗೂ ಮುಂದುವರೆದತಂಪಾದ ವಾತಾವರಣ ರೈತರನ್ನು ಕಂಗಾಲಾಗಿಸಿದೆ.ಮಳೆಯಿಂದಾಗಿ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ,ರಾಗಿ, ಶೇಂಗಾ, ಹತ್ತಿ, ಶೇಂಗಾ, ಈರುಳ್ಳಿ, ಬಾಳೆ,ತರಕಾರಿ, ವೀಳ್ಯದೆಲೆ ಬೆಳೆಗಳಿಗೆ ಹೆಚ್ಚು ಹಾನಿಯಾಗಿದ್ದುಹಾನಿ ಸಮೀಕ್ಷೆ ಮುಂದುವರಿದೆ. ಕೃಷಿ, ತೋಟಗಾರಿಕೆಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿಸಮೀಕ್ಷೆ ಮಾಡಬೇಕಿದೆ. ಸಿಬ್ಬಂದಿ ಕೊರತೆನಡುವೆಯೂ ಬೆಳೆ ಹಾನಿ ಸಮೀಕ್ಷೆ ಸಾಗಿರುವುದುಸಮಾಧಾನದ ಸಂಗತಿ
.ಇತೀ¤ಚೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಜಿಲ್ಲೆಗೆಭೇಟಿ ನೀಡಿದಾಗ ರಾಜ್ಯ ವಿಪತ್ತು ಪರಿಹಾರ ನಿಧಿಹಾಗೂ ರಾಷೀrÅಯ ವಿಪತ್ತು ಪರಿಹಾರ ನಿಧಿಯಡಿನೀಡುವ ಪರಿಹಾರ ಹಣ ಪರಿಷ್ಕರಣೆಗಾಗಿ ಕೇಂದ್ರಕ್ಕೆಮನವಿ ಮಾಡಿದ್ದು ಅಲ್ಲಿಂದ ಮಾರ್ಗಸೂಚಿ ಬಂದಬಳಿಕ ಬೆಳೆನಷ್ಟ ಪರಿಹಾರ ಮೊತ್ತ ಘೋಷಿಸುವುದಾಗಿಭರವಸೆ ನೀಡಿದ್ದರು. ಸಚಿವರ ಈ ಭರವಸೆ ಬೆಳೆ ನಷ್ಟಪರಿಹಾರ ಮೊತ್ತ ಹೆಚ್ಚಾಗಬಹುದು ಎಂಬ ರೈತರನಿರೀಕ್ಷೆ ಗರಿಗೆದರುವಂತೆ ಮಾಡಿದ್ದು, ಶೀಘ್ರ ಬೆಳೆಹಾನಿ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಎಚ್.ಕೆ. ನಟರಾಜ