Advertisement

ಮೊಸರಲಿ ಕಲ್ಲು ಹುಡುಕುತ್ತಿರುವ ಕಾಂಗ್ರೇಸ್‌

04:34 PM Nov 12, 2021 | Team Udayavani |

ದಾವಣಗೆರೆ: ಬಿಟ್‌ ಕಾಯಿನ್‌ ವಿಚಾರವಾಗಿ ವಿಪಕ್ಷಗಳುಗಾಳಿಯಲ್ಲಿ ಗುಂಡು ಹೊಡೆದಂತೆ ಹುರುಳಿಲ್ಲದ ಆರೋಪಮಾಡುತ್ತಿವೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಟ್‌ ಕಾಯಿನ್‌ ಪ್ರಕರಣ ಬಸವರಾಜ ಬೊಮ್ಮಾಯಿಮುಖ್ಯಮಂತ್ರಿಯಾದ ಬಳಿಕ ನಡೆದಿದ್ದಲ್ಲ.ಮೂರ್‍ನಾಲ್ಕು ವರ್ಷಗಳ ಹಿಂದಿನದು. ಆಗಿನಿಂದಲೂತನಿಖೆ ನಡೆಯುತ್ತಿದೆ.

Advertisement

ತನಿಖೆ ನಡೆಯುತ್ತಿರುವಾಗಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಕಾಂಗ್ರೆಸ್‌ ಮುಖಂಡರುಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತನಿಖೆ ನಡೆದರೆ ಯಾರು ತಪ್ಪು ಮಾಡಿದ್ದಾರೆ ಎಂಬಸತ್ಯ ಸ್ಪಷ್ಟವಾಗುತ್ತದೆ. ಜನರಲ್ಲಿ ತಪ್ಪು ಕಲ್ಪನೆ ಬರುವಂತಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಯಾವುದೂಯಶಸ್ವಿಯಾಗುವುದಿಲ್ಲ. ಎಲ್ಲದಕ್ಕೂ ಸಮಯ ಬೇಕು.ಅಲ್ಲಿಯವರೆಗೆ ಕಾಯಬೇಕಾಗುತ್ತದೆ ಎಂದರು.

ಪರಿಷತ್‌ ಚುನಾವಣೆ ಘೋಷಣೆಯಾಗಿದೆ. ವಿಪಕ್ಷದವರಿಗೆಯಾವುದಾದರೂ ವಿಷಯ ಬೇಕಾಗಿದೆ. ಮೊಸರಲ್ಲಿ ಕಲ್ಲುಹುಡುಕುತ್ತಿರುವ ಕಾಂಗ್ರೆಸ್‌ ನಾಯಕರು ಬಿಟ್‌ ಕಾಯಿನ್‌ಕುರಿತಂತೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪಗಳು ಹೊರಬರುತ್ತಿವೆ. ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಬಿಟ್‌ ಕಾಯಿನ್‌ ಆರೋಪ ಕುರಿತಂತೆ ವಿಚಾರಣೆನಡೆಯಲಿ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ.ವಿಚಾರಣೆ ನಂತರ ತಪ್ಪು ಯಾರದ್ದು ಎಂಬ ಸ್ಪಷ್ಟವಾದಸತ್ಯ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

ವಿಚಿತ್ರ ಎಂದರೆ ಕಾಂಗ್ರೆಸ್‌ ಮುಖಂಡರೇ ಅದರಲ್ಲಿಭಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟ. ಎಷ್ಟೇಪ್ರಭಾವಿಗಳು ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ವತಃಮುಖ್ಯಮಂತ್ರಿಯವರೆ ಹೇಳಿದ್ದಾರೆ. ಕಾಂಗ್ರೆಸ್‌ ಮುಖಂಡರುಬಿಜೆಪಿಯವರು ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದೆ.ಮೇಲ್ಮನೆಯಲ್ಲೂ ಬಹುಮತ ಬೇಕು. ಸ್ಪಷ್ಟ ಬಹುಮತ ಕೊಟ್ಟರೆಜನರ ಹಿತದೃಷ್ಟಿಯಿಂದ ಮತ್ತು ಸರ್ಕಾರಕ್ಕೂ ಒಳ್ಳೆಯದುಎಂದರು.

Advertisement

Udayavani is now on Telegram. Click here to join our channel and stay updated with the latest news.

Next