ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷನಳಿನಕುಮಾರ ಬದಲಾವಣೆ ಸಾಧ್ಯವೇ ಇಲ್ಲ. ಇದೆಲ್ಲ ನಿಜಕ್ಕೂಕಪೋಲಕಲ್ಪಿತ, ಕಾಂಗ್ರೆಸ್‌ನವರ ಪಿತೂರಿ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷಇದೆ. ಅಲ್ಲಿಯವರೆಗೂ ಬಸವರಾಜ ಬೊಮ್ಮಾಯಿ ಅವರೇಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.
ಕಾಂಗ್ರೆಸ್‌ನವರು ಹಾನಗಲ್ ಉಪಚುನಾವಣೆ ಗೆದ್ದಿರಬಹುದು.ಆದರೆ ಈ ಹಿಂದೆ ನಡೆದ ಎಲ್ಲ ಚುನಾವಣೆಗಳಲ್ಲಿ ಸೋತಿದ್ದಾರೆ.ಸೋಲಿನಿಂದ ಹತಾಶರಾಗಿ ಬಿಟ್ ಕಾಯಿನ್ ವಿಚಾರದಲ್ಲಿ ಇಲ್ಲ ಸಲ್ಲದಆರೋಪ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂಬಸವರಾಜ ಬೊಮ್ಮಾಯಿ ವಿರುದ್ಧ ಹತಾಶೆಯಿಂದ ಟೀಕಿಸುತ್ತಿದ್ದಾರೆಎಂದರು.ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಯುತ್ತಿದೆ ಎಂದುಮುಖ್ಯಮಂತ್ರಿಯವರೇ ಹೇಳಿದ್ದಾರೆ.
ಯಾವುದೇ ರೀತಿಯತನಿಖೆಗೂ ಸಿದ್ಧ ಎಂದಿದ್ದಾರೆ. ಆದರೂ ಇಲ್ಲಸಲ್ಲದ ಆರೋಪಮಾಡುವುದು ಶೋಭೆ ತರುವಂತದ್ದಲ್ಲ. ವಾಲ್ಮೀಕಿ ಸಮಾಜಕ್ಕೆಮೀಸಲಾತಿ ವಿಚಾರ ಸೇರಿದಂತೆ ಬಹುತೇಕ ಸಮಾಜಗಳ ಬೇಡಿಕೆಬಗ್ಗೆ ಸಿಎಂ ಸ್ಪಂದಿಸಲಿದ್ದಾರೆ. ಈ ವಿಚಾರದಲ್ಲಿ ಯಾವುದೇ ಸಮಾಜದಸ್ವಾಮೀಜಿಗಳು ಆತಂಕ ಪಡಬಾರದು.
ಹಾನಗಲ್‌ನಲ್ಲಿ ನಾವುಎಲ್ಲೋ ಎಡವಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿಹಾಗೂ ಯಡಿಯೂರಪ್ಪ ಸಾಕಷ್ಟು ಪ್ರಯತ್ನ ಮಾಡಿದರೂಜಯ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳುವಪ್ರಯತ್ನ ಮಾಡುತ್ತೇವೆ ಎಂದರು.
ಪಕ್ಷ ನಿರ್ಧರಿಸಿದರೆ ಸ್ಪರ್ಧೆ: ವಿಧಾನಸಭೆ ಚುನಾವಣೆಗೆಇನ್ನೂ ಕಾಲಾವಕಾಶ ಇದೆ. ಉಪಾಧ್ಯಕ್ಷನಾಗಿ ಪಕ್ಷದಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಚುನಾವಣೆಗೆನಿಲ್ಲಬೇಕೋ, ಬೇಡವೋ, ನಿಂತರೆ ಎಲ್ಲಿ ನಿಲ್ಲಬೇಕು ಎನ್ನುವುದನ್ನುಪಕ್ಷದ ಮುಖಂಡರು ನಿರ್ಧರಿಸುತ್ತಾರೆ. ಎಲ್ಲಿ ನಿಲ್ಲಬೇಕೆಂದು ಪಕ್ಷಹೇಳುತ್ತದೆಯೋ ಆ ಕ್ಷೇತ್ರದಲ್ಲಿ ನಿಲ್ಲುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷನಳಿನಕುಮಾರ್ ಕಟೀಲ್ ಬದಲಾವಣೆ ವಿಚಾರ ಕೂಡ ಕೇವಲಊಹಾಪೋಹ ಅಷ್ಟೇ.
ಪಕ್ಷ ಎಲ್ಲ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.ಸಂಘಟನೆ ವಿಚಾರದಲ್ಲಿ ಬಲಶಾಲಿ ಆಗುತ್ತಿದೆ. ಹಾಗಾಗಿ ರಾಜ್ಯಾಧ್ಯಕ್ಷರಬದಲಾವಣೆ ಆಗುತ್ತದೆ ಎಂದು ಯಾರೂ ಸಹ ತಲೆ ಕೆಡಿಸಿಕೊಳ್ಳುವಅಗತ್ಯವೇ ಇಲ್ಲ. ಕಟೀಲ್ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದರು.