ದಾವಣಗೆರೆ: ರಾಜ್ಯದ ಮಹಾನಗರ ಪಾಲಿಕೆ,ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವಾಹನ ಚಾಲಕರು, ನೀರಗಂಟಿಗಳು, ಡಾಟಾಆಪರೇಟರ್‌ಗಳನ್ನು ಗುತ್ತಿಗೆ ಪದ್ಧತಿ ಬದಲುಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆಒಳಪಡಿಸಬೇಕು ಎಂದು ರಾಜ್ಯ ಪಾಲಿಕೆ, ನಗರಸಭೆ,ಪುರಸಭೆ, ಪಟ್ಟಣ ಪಂಚಾಯತಿ ಹೊರ ಗುತ್ತಿಗೆನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ರಾಜ್ಯದ 288 ನಗರ ಸ್ಥಳೀಯ ಸಂಸ್ಥೆಗಳಲ್ಲಿ15 ಸಾವಿರಕ್ಕೂ ಹೆಚ್ಚು ಜನರು ವಾಹನ ಚಾಲಕರು,ನೀರಗಂಟಿಗಳು, ಡಾಟಾ ಆಪರೇಟರ್‌ಗಳಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನುಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ.
ಹಾಗಾಗಿ ಸರ್ಕಾರ ಗುತ್ತಿಗೆ ಪದ್ಧತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆಒಳಪಡಿಸಬೇಕು ಎಂದರು.ಗುತ್ತಿಗೆ ಏಜೆನ್ಸಿಗಳ ಮೂಲಕ ಕೆಲಸಪಡೆದಿರುವಂತಹವರಿಗೆ ಬಹುತೇಕ ಎಲ್ಲ ನಗರಸ್ಥಳೀಯ ಸಂಸ್ಥೆಗಳಲ್ಲಿ ಸರಿಯಾದ ವೇತನ ಇಲ್ಲ.ಸಮಯಕ್ಕೆ ಸರಿಯಾಗಿ ಪಾವತಿಯೂ ಆಗುವುದಿಲ್ಲ.
ಭವಿಷ್ಯನಿಧಿ ಬಗ್ಗೆ ಹೇಳುವಂತೆಯೇ ಇಲ್ಲ. ಅನೇಕಕಡೆ ವೇತನ ಪಾವತಿಯ ಬಿಲ್ ಸಹ ನೀಡುವುದಿಲ್ಲ.ಇನ್ನು ಕೆಲವಡೆ ಹಾಜರಾತಿ ಪುಸ್ತಕ ನಿರ್ವಹಣೆಮಾಡುವುದೇ ಇಲ್ಲ ಎಂದು ದೂರಿದರು.ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿರುವರನ್ನು ಪೌರಕಾರ್ಮಿಕರಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವುದರಿಂದ ಸರ್ಕಾರಕ್ಕೆ ಶೇ.18 ರಷ್ಟುಜಿಎಸ್‌ಟಿ, ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ. 5ರಷ್ಟು ಸೇವಾ ಶುಲ್ಕ ಉಳಿಯಲಿದೆ.
ಒಟ್ಟು ಸರ್ಕಾರಕ್ಕೆಶೇ. 25 ರಷ್ಟು ಹಣ ಉಳಿತಾಯವಾಗಲಿದೆ. ನೌಕಕರಮೇಲೆ ಆಗುವಂತಹ ಕಿರುಕುಳ, ದೌರ್ಜನ್ಯ ಎಲ್ಲವೂನಿಲ್ಲಲಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆಒಳಪಡಿಸಬೇಕು ಎಂದರು.ಹಾಸನ ಜಿಲ್ಲೆ ಹೊಳೆನರಸಿಪುರ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಚಾಲಕರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರೂ ಅಧಿಕಾರಿಗಳು ಪರಿಹಾರ ನೀಡುವುದಿರಲಿ, ಮೃತನಕುಟುಂಬದವರಿಗೆ ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ.
ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿಶವ ಸಾಗಾಣಿಕೆ, ಸಂಸ್ಕಾರ ನೆರವೇರಿಸಿದಂತಹನೌಕಕರನ್ನು ಸರ್ಕಾರ ಈವರೆಗೆ ಗುರುತಿಸಿಲ್ಲ ಎಂದುಅಸಮಾಧಾನ ವ್ಯಕ್ತಪಡಿಸಿದರು.ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸಂಘದಅಧ್ಯಕ್ಷರಾಗಿದ್ದ ದುಗ್ಗೇಶ್ ಎಂಬುವವರನ್ನು ಏಕಾಏಕಿಕೆಲಸ ದಿಂದ ಕಿತ್ತು ಹಾಕಲಾಗಿದೆ.
ಒಂದು ವಾರದಲ್ಲಿಅವರನ್ನು ಮರು ನಿಯೋಜನೆ ಮಾಡಿಕೊಳ್ಳಬೇಕು.ಇಲ್ಲದಿದ್ದಲ್ಲಿ ದಾವಣಗೆರೆ ಒಳಗೊಂಡಂತೆ ರಾಜ್ಯದ288 ನಗರ ಸ್ಥಳೀಯ ಸಂಸ್ಥೆಗಳ ಮುಂದೆ ಪ್ರತಿಭಟನೆನಡೆಸಲಾಗುವುದು ಎಂದು ಎಚ್ಚರಿಸಿದರು.ಸಂಘದ ರಾಜ್ಯ ಕಾರ್ಯದರ್ಶಿ ಜಿ. ಶ್ರೀನಿವಾಸ್,ದುಗ್ಗೇಶ್, ಹರಿಹರದ ದಸಂಸ ಮುಖಂಡಪಿ.ಜೆ. ಮಹಾಂತೇಶ್, ವಿಜಯಮ್ಮ ಇತರರುಸುದ್ದಿಗೋಷ್ಠಿಯಲ್ಲಿದ್ದರು.