ಬೆಂಗಳೂರು: ಬಿಗ್‌ಬಾಸ್ (Bigg Boss Kannada-11) ಮನೆಯಲ್ಲಿ ಟಾಸ್ಕ್‌ಗಳು ನಡೆಯುತ್ತಿರುವಂತೆಯೇ ಸ್ಪರ್ಧಿಗಳ ನಡುವಿನ ಸ್ನೇಹ ಕೂಡ ಹಳಸಿದಂತೆ ಆಗುತ್ತಿದೆ.
ಗೌತಮಿ, ಮೋಕ್ಷಿತಾ ಉಗ್ರಂ ಮಂಜು ಅವರು ಜತೆ ಕಳೆದ ಕೆಲ ವಾರಗಳಿಂದ ಆಪ್ತವಾಗಿದ್ದಾರೆ. ದೊಡ್ಮನೆಯಲ್ಲಿ ಯಾವುದೇ ಸಂಗತಿಗಳು ನಡೆದರೂ ಈ ಮೂವರು ಒಂದು ತಂಡದಂತೆ ಜತೆಯಾಗಿಯೇ ಇರುತ್ತಿದ್ದರು. ಮಂಜು ಮೋಕ್ಷಿತಾ, ಗೌತಮಿ ಅವರಿಗೆ ಮನೆಯವರ ಉಳಿದ ಸದಸ್ಯರ ಬಗ್ಗೆ ಹೇಳುತ್ತಿದ್ದರು.
ಆದರೆ ಆಪ್ತವಾಗಿದ್ದ ಮೋಕ್ಷಿತಾ, ಗೌತಮಿ ಮಂಜು ಅವರ ನಡುವೆ ಟಾಸ್ಕ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಮೂರು ನಾಲ್ಕು ದಿನಗಳಿಂದ ಮಿಸ್ ಹೊಡೆಯುತ್ತಾ ಇದೆ. ಅವರೇ ಹೈಲೈಟ್ ಆಗಬೇಕೆಂದು ಮಾಡುತ್ತಿದ್ದಾರೆ. ನೀವು ಆಡಿದ ಗೇಮ್ ನಮಗೆ ಇಷ್ಟ ಆಗಿಲ್ಲವೆಂದು ಗೌತಮಿ ನೇರವಾಗಿಯೇ ಮಂಜು ಅವರಿಗೆ ಹೇಳಿದ್ದರು.
ಇದು ನಾವು ನೋಡಿದ ಮಂಜಣ್ಣನಾ ಹೀಗೆ ಮಾಡುತ್ತಾ ಇದ್ದಾರ ಅಂಥ ನಂಬೋಕೆ ಆಗ್ತಾ ಇಲ್ಲ ಎಂದು ಮೋಕ್ಷಿತಾ, ಗೌತಮಿ ಮಂಜು ಅವರ ಮ್ಯಾಚ್ ಫಿಕ್ಸಿಂಗ್ ಗೇಮ್ ಪ್ಲ್ಯಾನ್ ನೋಡಿ ಕಣ್ಣೀರಿಟ್ಟಿದ್ದರು.
ಇದಾದ ಬಳಿಕ ಇಬ್ಬರ ಬಳಿ ಮಂಜು ಸ್ಸಾರಿ ಕೇಳಿದ್ದರು. ಆದರೆ ಇದೀಗ ಮೂವರ ನಡುವಿನ ಗೆಳೆತನದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.
ನಾನಂತೂ ಬರಲ್ಲ ಮಂಜಣ್ಣ, ಅಲ್ಲಿ ಕೂತ್ಕುಂಡು ಮಾತನಾಡೋಕೆ ಬರಲ್ಲ ಅಷ್ಟೇ. ಇನ್ಮುಂದೆ ನನ್ನ ನಿರ್ಧಾರವೇ ಬೇರೆ ಆಗಿದೆ. ನಮ್ಮ ನಡುವೆ ಇರುವ ಅಣ್ಣ – ತಂಗಿ ಬಾಂಡ್ ಇರುವಷ್ಟು ನಮ್ಮ ನಿರೀಕ್ಷೆಗಳು ಬೇರೇ ಥರ ಇರುತ್ತದೆ. ಅದೆಲ್ಲದಕ್ಕೂ ಫುಲ್ ಸ್ಟಾಪ್ ಅಷ್ಟೇ. ಇದೆಲ್ಲ ಇವತ್ತೇ ಮುಗೀತು. ಗೊತ್ತಿಲ್ಲ ಈ ವಾರ ಏನು ಆಗುತ್ತದೆ ಅಂಥ. ನಾವು ಫ್ಲೆಶ್ ಔಟ್ ಆಗುತ್ತೇವೆ ಅಂಥ ಮಾತು ಬಂದದ್ದೇ ನಿಮ್ಮಿಂದ. ಇದೆಲ್ಲ ನನಗೆ ನಿಮ್ಮ ಬಳುವಳಿ ಅಷ್ಟೇ ಎಂದು ಮೋಕ್ಷಿತಾ ಮಂಜು ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವುದು ಪ್ರೋಮೊದಲ್ಲಿ ತೋರಿಸಲಾಗಿದೆ.
ಇನ್ನೊಂದು ಪ್ರೋಮೊದಲ್ಲಿ ಕ್ಯಾಪ್ಟನ್ಸಿ ಓಟದಿಂದ ಹೊರಗಿಡುವ ಕುರಿತು ವೋಟ್ ನಡೆದಿದೆ. ಇಬ್ಬರಿಗೆ ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲವೆಂದು ಸ್ಪರ್ಧಿಗಳು ಫೋಟೋ ಆಯ್ಕೆ ಮಾಡಿ ಕಾರಣ ಕೊಟ್ಟಿದ್ದಾರೆ.
ಧನರಾಜ್ ಅವರು ಅನುಷಾ ಅವರ ಹೆಸರು ಹೇಳಿದ್ದು, ಅನುಷಾ ನಿಮ್ಮಗಿಂತ ಜಾಸ್ತಿ ಅರ್ಹತೆ ನನಗಿದೆ ಎಂದಿದ್ದಾರೆ. ಇನ್ನುಳಿದ ಮಂಜು, ಗೌತಮಿ ಧನರಾಜ್ ಅವರ ಹೆಸರು ಹೇಳಿದ್ದಾರೆ.
ಧನರಾಜ್ ರೂಲ್ಸ್ ಕಾರಣ ಕೊಟ್ಟು ಮೋಕ್ಷಿತಾ ಅವರ ಹೆಸರನ್ನು ಹೇಳಿದ್ದಾರೆ. ಇದಕ್ಕೆ ಗರಂ ಆದ ಮೋಕ್ಷಿತಾ ನೆಟ್ಟಗೆ ಒಂದು ನಿರ್ಧಾರ ತೆಗೆದುಕೊಳ್ಳೋಕೆ ಬರಲ್ಲ. ಏನಾದರೂ ಸೆನ್ಸ್ ಇದೆಯಾ ತಲೆಯಲ್ಲಿ. ಮತ್ತೆ ನೀವು ಕ್ಯಾಪ್ಟನ್, ನಿಮ್ಮಂಥವರು ಕ್ಯಾಪ್ಟನ್ ಎಂದಿದ್ದಾರೆ.
ಧನರಾಜ್ ಈಗ ಬೇರೆ ಆಗಿದ್ದಾನೆ. ಭಯ ಪಡುವ ಧನರಾಜ್ ಅಲ್ಲ ಎಂದಿದ್ದಾರೆ. ಆದರೆ ಇದಾದ ಬಳಿಕ ವಾಶ್ ರೂಮ್ ಬಳಿ ನಾನಿನ್ನು ಸ್ಟ್ರಾಂಗ್ ಆಗಿಲ್ಲ ಎಂದು ಕಣ್ಣೀರು ಹಾಕಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಈ ಸಂಚಿಕೆ ಗುರುವಾರ ರಾತ್ರಿ 9:30ಕ್ಕೆ (ನ.7ರಂದು) ಪ್ರಸಾರವಾಗಲಿದೆ.