Advertisement
ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿಯಹಿರಿಯರು, ಮಹಿಳೆಯರು ಒಳಗೊಂಡಂತೆ 100ಕ್ಕೂಹೆಚ್ಚು ಜನರು ನೇತ್ರದಾನದಂತಹ ಶ್ರೇಷ್ಠ ದಾನಕ್ಕೆ ಒಪ್ಪಿಗೆಸೂಚಿಸಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟ ಪುನೀತ್‌ರಾಜ್‌ಕುಮಾರ್ ಸಾಗಿದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.
Related Articles
Advertisement
ತಮ್ಮ ನೆಚ್ಚಿನ ನಟನಂತೆ ನಾವೂ ಕಣ್ಣುಗಳದಾನ ಮಾಡಬೇಕು, ನಾವು ಸತ್ತ ನಂತರವೂ ಇತರರಿಗೆಬೆಳಕಾಗಬೇಕು. ಮರಣದ ನಂತರವೂ ಪ್ರಪಂಚನೋಡುವಂತಾಗಬೇಕು. ಹಾಗಾಗಿ ಕಣ್ಣುಗಳದಾನ ಮಾಡಬೇಕು ಎಂದು ಗೆಳೆಯರು ವಿಷಯಪ್ರಸ್ತಾಪಿಸಿದರು. ಸಭೆ ನಡೆಸಿ ನೇತ್ರದಾನದ ಮಹತ್ವಮನವರಿಕೆ ಮಾಡಿದಾಗ 100ಕ್ಕೂ ಹೆಚ್ಚು ಜನರುಒಪ್ಪಿಕೊಂಡಿದ್ದಾರೆ. ನ. 6 ರಂದು ಗ್ರಾಮದಲ್ಲಿ ಕನ್ನಡರಾಜ್ಯೋತ್ಸವ, ಶ್ರೀ ಸೇವಾಲಾಲ್ ಸಂಘದ ಉದ್ಘಾಟನೆಜೊತೆಗೆ ನೇತ್ರದಾನ ಶಿಬಿರವನ್ನೂ ಕೈ ಗೊಳ್ಳಲಾಗಿತ್ತು.
ಆಸಂದರ್ಭದಲ್ಲಿ 100ಕ್ಕೂ ಹೆಚ್ಚು ಜನರು ನೇತ್ರದಾನದನಿರ್ಧಾರ ಪ್ರಕಟಿಸಿದರು ಎಂದು ಮಾಹಿತಿ ನೀಡಿದರು.45 ವರ್ಷ ಮೇಲ್ಪಟ್ಟಿರುವ ಎಲ್. ತಿಪ್ಪೇಶ್ ನಾಯ್ಕ,ಮಲ್ಲೇಶ್ ನಾಯ್ಕ, ರುದ್ರಾ ನಾಯ್ಕ ಸೇರಿದಂತೆನಾಲ್ವರು ಕಣ್ಣುಗಳ ದಾನಕ್ಕೆ ಒಪ್ಪಿದ್ದಾರೆ. 18 ರಿಂದ 45ವರ್ಷದೊಳಗಿನವರು ಸೇರಿಕೊಂಡು 100 ಜನರುನೇತ್ರದಾನ ಮಾಡುತ್ತಿದ್ದಾರೆ. ನನ್ನ ಜೊತೆಗೆ ನನ್ನ ತಮ್ಮಅನಿಲ್ ನಾಯ್ಕ ಸಹ ಕಣ್ಣು ದಾನ ಮಾಡುತ್ತಿದ್ದೇವೆಎಂದು ತಿಳಿಸಿದರು.
ನೇತ್ರದಾನಕ್ಕೆ ಸಂಬಂಧಿಸಿದಂತೆ ದಾವಣಗೆರೆಯಬಾಪೂಜಿ ಆಸ್ಪತ್ರೆಯವರನ್ನು ಸಂಪರ್ಕಿಸಿದ್ದೇವೆ. ಇನ್ನುಎರಡು ದಿನಗಳಲ್ಲಿ ಅರ್ಜಿ ಭರ್ತಿ ಮಾಡಿ ಮುಂದಿನಪ್ರಕ್ರಿಯೆ ಕೈಗೊಳ್ಳಲಾಗುವುದು. ನೇತ್ರದಾನಕ್ಕೆಒಪ್ಪಿರುವವರ ಎಲ್ಲ ಕುಟುಂಬದವರಿಗೆ ಮಾಹಿತಿನೀಡುವ ಜೊತೆಗೆ ಮುಂದೆ ಮಾಡಬೇಕಾದಂತಹಕೆಲಸಗಳ ಬಗ್ಗೆಯೂ ತಿಳಿಸಲಾಗಿದೆ ಎಂದು ಅಣ್ಣಪ್ಪಹೇಳಿದರು.
ಒಬ್ಬ ನಾಯಕ ನಟ ಸಾಗುವ ಹಾದಿ, ಮಾಡುವಂತಹಸಾಮಾಜಿಕ ಸೇವಾ ಕಾರ್ಯಗಳು ಅವರ ಅಭಿಮಾನಿಗಳಮೇಲೆ ಎಂತಹ ಪ್ರಭಾವ, ಪರಿಣಾಮ ಬೀರಬಲ್ಲವು.ಏನೆಲ್ಲ ಸಾಧನೆ ಸಾಧ್ಯ ಎಂಬುದಕ್ಕೆ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಹಾಗೂ ಚಟ್ಟೋಬನಹಳ್ಳಿ ಗ್ರಾಮಸ್ಥರೇಸಾಕ್ಷಿ ಎಂದರೆ ಅತಿಶಯೋಕ್ತಿಯಾಗಲಾರದು.ರಾ. ರವಿಬಾಬು