ದಾವಣಗೆರೆ: ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾತಿಗೊಂಡು ಈವರೆಗೆ ಮನೆಗಳನಿರ್ಮಾಣ ಮಾಡದಂತಹವರ ಮಂಜೂರಾತಿರದ್ದುಪಡಿಸಬೇಕು. ಬೇರೆ ಅರ್ಹ ಫಲಾನುಭವಿಗಳಿಗೆಮಂಜೂರಾತಿ ನೀಡಿ ಎಂದು ಸಂಸದ ಡಾ| ಜಿ.ಎಂ.ಸಿದ್ದೇಶ್ವರ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾ ಪಂಚಾಯತ್‌ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿಆವಾಸ್ (ನಗರ) ಯೋಜನೆ ಯಡಿ ಜಿಲ್ಲೆಯವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ1346 ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಮನೆ ಪ್ರಾರಂಭಿಸದೇ ಇರುವುದರಿಂದ ಆನ್‌ಲೈನ್‌ತಂತ್ರಾಂಶದಲ್ಲಿ ಬ್ಲಾಕ್ ಮಾಡಲಾಗಿದೆ. ಕಳೆದ ಜೂ. 28ರಂದು ರಾಜೀವ್‌ಗಾಂಧಿ ವಸತಿ ನಿಗಮದಿಂದ ಬ್ಲಾಕ್ ಮಾಡಲಾಗಿರುವ ಮನೆಗಳನ್ನು ರದ್ದುಪಡಿಸುವಂತೆ ಆದೇಶಿಸಲಾಗಿದೆ ಎಂದರು.
ವಾಜಪೇಯಿ ನಗರ ವಸತಿ, ಡಾ| ಬಿ.ಆರ್.ಅಂಬೇಡ್ಕರ್, ದೇವರಾಜ ಅರಸು ವಸತಿ,ಪಿಎಂಎವೈ (ನಗರ) ಯೋಜನೆಗಳಡಿ ಜಿಲ್ಲೆಯಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಮಂಜೂರಾದ 5,360 ಮನೆಗಳಲ್ಲಿ 1492 ಮನೆಗಳುಪೂರ್ಣಗೊಂಡಿವೆ, 2657 ಮನೆಗಳು ಪ್ರಗತಿಯವಿವಿಧ ಹಂತದಲ್ಲಿವೆ. 1,211 ಮನೆಗಳ ನಿರ್ಮಾಣಇನ್ನೂ ಪ್ರಾರಂಭವೇ ಆಗಿಲ್ಲ ಎಂದು ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾಹಿತಿ ನೀಡಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದಸಂಸದರು , ತಂತ್ರಾಂಶದಲ್ಲಿ ಬ್ಲಾಕ್ ಆಗಿರುವಮನೆಗಳನ್ನು ರದ್ದುಪಡಿಸಿ. ಅದನ್ನು ಹೊಸದಾಗಿಪಡೆದು ಬೇರೆ ಅರ್ಹರಿಗೆ ಮನೆ ಮಂಜೂರಾತಿಮಾಡಬೇಕು. ಮನೆ ನಿರ್ಮಾಣ ಪ್ರಾರಂಭಿಸದೇಇರುವವರಿಗೆ ಕೂಡಲೇ ಅಂತಿಮ ನೋಟಿಸ್‌ನೀಡಿ. ನಿಗದಿತ ಅವಧಿಯೊಳಗೆ ಮನೆ ನಿರ್ಮಾಣಪ್ರಾರಂಭಿಸದಿದ್ದರೆ. ಮಂಜೂರಾತಿ ರದ್ದುಪಡಿಸಿ.ಆಯಾ ಕ್ಷೇತ್ರಗಳ ಶಾಸಕರ ಗಮನಕ್ಕೆ ತಂದು ಅರ್ಹಫಲಾನುಭವಿಗಳಿಗೆ ಮಂಜೂರಾತಿ ಮಾಡಲು ತಕ್ಷಣಕ್ರಮ ಜರುಗಿಸಬೇಕು.
ಅಧಿಕಾರಿಗಳು ಒಂದುವಾರದ ಒಳಗಾಗಿ ವರದಿ ಸಲ್ಲಿಸಬೇಕು ಎಂದುಸೂಚನೆ ನೀಡಿದರು.ಜಲಜೀವನ್ ಮಿಷನ್ ಯೋಜನೆಯಡಿಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವನೀರಿನ ಕಾಮಗಾರಿ ಪೂರೈಸಲು ಒಟ್ಟು 353ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ.
ಈಗಾಗಲೆ 62 ಕಾಮಗಾರಿ ಪೂರ್ಣಗೊಂಡಿವೆ.ಆದರೆ ಕೆಲವು ಗ್ರಾಮಗಳಲ್ಲಿ ಕಾಮಗಾರಿ, ಮೀಟರ್‌ಅಳವಡಿಕೆಗೆ ಗ್ರಾಮಸ್ಥರ ವಿರೋಧವಿದೆ ಎಂದುಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯವಿಭಾಗ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.ಶಾಸಕ ಎಸ್.ವಿ. ರಾಮಚಂದ್ರ, ಪ್ರೊ| ಎನ್.ಲಿಂಗಣ್ಣ ಇತರರು ಇದ್ದರು.