Advertisement

ಕನ್ನಡ ಹಬ್ಬಕ್ಕೆ ಗೀತ ಗಾಯನದ ಮೆರಗು

12:42 PM Oct 29, 2021 | Team Udayavani |

ದಾವಣಗೆರೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಮಾತಾಡ್‌ಮಾತಾಡ್‌ ಕನ್ನಡದ ನಿಮಿತ್ತ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ 1,500ಕ್ಕೂ ಹೆಚ್ಚುವಿದ್ಯಾರ್ಥಿಗಳು ಏಕ ಕಾಲಕ್ಕೆ ಕನ್ನಡ ಗೀತೆಗಳ ಮೂಲಕ ಕನ್ನಡಮಯ ವಾತಾವರಣ ನಿರ್ಮಿಸಿದರು.

Advertisement

ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ,ಪ್ರೊ| ಕೆ.ಎಸ್‌. ನಿಸಾರ್‌ ಅಹಮ್ಮದ್‌ರವರ ಜೋಗದ ಸಿರಿಬೆಳಕಿನಲ್ಲಿ ಮತ್ತು ಹಂಸಲೇಖರವರ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡುಗಳನ್ನ ಸುಶ್ರಾವ್ಯವಾಗಿಹಾಡುವ ಮೂಲಕ ಕನ್ನಡದ ಹಬ್ಬಕ್ಕೆ ಮೆರಗು ತಂದಿತ್ತರು.ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|ವಿಜಯಮಹಾಂತೇಶ ದಾನಮ್ಮನವರ್‌ ಮಾತನಾಡಿ,ನಾವೆಲ್ಲ ಕನ್ನಡಿಗರು ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿಅನ್ಯ ಭಾಷೆಗಳ ಪದಗಳನ್ನು ಕನ್ನಡದಲ್ಲಿ ಬಳಸುತ್ತಿದ್ದೇವೆ.

ಬೇರೆ ದೇಶದ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಕನ್ನಡಿಗರುಯಾವಾಗಲೂ ನಮ್ಮ ನಾಡು, ನಮ್ಮ ಸಂಸ್ಕೃತಿ, ನಮ್ಮ ಭಾಷೆಗೆಹೆಚ್ಚು ಆದ್ಯತೆ ನೀಡಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನುಧಿಧೀಮಂತಗೊಳಿಸಬೇಕು ಎಂದು ಕರೆ ನೀಡಿದರು.

ಪ್ರತಿ ವರ್ಷ ನ. 1 ರಂದು ನಮ್ಮ ನಾಡು, ನುಡಿ, ನೆಲ,ಜಲ, ಭಾಷೆ, ಸಂಸ್ಕೃತಿ ಮತ್ತು ಹಿರಿಮೆಯ ಉಳಿವಿಗಾಗಿಅತ್ಯಂತ ವಿಜೃಂಭಣೆಯಿಂದ ರಾಜ್ಯೋತ್ಸವವನ್ನಆಚರಿಸುತ್ತಿದ್ದೇವೆ. ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿನಮ್ಮ ಭಾಷೆಯ ಮಹತ್ವವನ್ನು ಲೆಕ್ಕಿಸುತ್ತಿಲ್ಲ. ನಮ್ಮ ನಾಡಿನಪರಂಪರೆ, ಸಂಸ್ಕೃತಿ, ಭಾಷೆಯ ಹೆಚ್ಚಿನ ಒಲವನ್ನುತೋರಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯಕರ್ತವ್ಯ ಎಂದರು.

ನಂತರ ಪ್ರತಿಜ್ಞಾವಿಧಿ ಬೋ ಧಿಸಿದರು.ಅಪರ ಜಿಲ್ಲಾಧಿ ಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‌ಒ ಡಾ| ನಾಗರಾಜ,ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಕನ್ನಡ ಜಾಗೃತಿ ಜಿಲ್ಲಾ ಹಾಗೂ ಪಾಲಿಕೆ ಸಮಿತಿ ಸದಸ್ಯರಾದ ಬಾ.ಮ. ಬಸವರಾಜಯ್ಯ, ಡಾ| ಭಿಕ್ಷಾವರ್ತಿಮಠ, ಎನ್‌.ಟಿ ಯರ್ರಿಸ್ವಾಮಿ, ಮಹಾಲಿಂಗಪ್ಪ, ದಿಳ್ಯಪ್ಪ, ಸತ್ಯಭಾಮಾ,ದೇವಿಕಾ ಸುನೀಲ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next