Advertisement

25.08 ಕೆಜಿ ಅಕ್ರಮ ಗಾಂಜಾ ನಾಶ

03:40 PM Jun 27, 2022 | Team Udayavani |

ದಾವಣಗೆರೆ: ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದ ಅಂಗವಾಗಿಭಾನುವಾರ ಕಳೆದ ಒಂದು ವರ್ಷದಲ್ಲಿ 11ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಒಟ್ಟು25 ಕೆಜಿ 800 ಗ್ರಾಂ ಅಕ್ರಮ ಗಾಂಜಾವನ್ನುನ್ಯಾಯಾಲಯದ ಅನುಮತಿ ಪಡೆದುನಗರದ ಹೊರವಲಯದಲ್ಲಿ ಬೆಂಕಿಯಲ್ಲಿಹಾಕಿ ನಾಶಪಡಿಸಲಾಯಿತು.ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್‌ ಮಾತನಾಡಿ, ಜಿಲ್ಲೆಯಾದ್ಯಂತಮಾದಕ ವಸ್ತುಗಳ ವಿರೋಧಿಅಭಿಯಾನ ನಡೆಸಲಾಗುತ್ತಿದೆ.

Advertisement

ಗಾಂಜಾ ಮತ್ತಿತರ ಮಾದಕ ವಸ್ತುಗಳಸಾಗಾಣಿಕೆ ಮತ್ತು ಮಾರಾಟದಲ್ಲಿತೊಡಗಿದ್ದ ಎಲ್ಲರ ವಿರುದ್ಧ ಪ್ರಕರಣದಾಖಲಿಸಿಕೊಂಡು ತನಿಖೆನಡೆಸಲಾಗುತ್ತಿದೆ. ಮಾದಕ ವಸ್ತುಗಳಸಾಗಾಣಿಕೆ, ಮಾರಾಟ, ಬಳಕೆಮಾಡುವರ ವಿರುದ್ಧ ಅತ್ಯಂತ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದುಎಚ್ಚರಿಸಿದರು.ಮಾದಕ ವಸ್ತುಗಳ ವಿರೋಧಿಅಭಿಯಾನಕ್ಕೆ ಎಲ್ಲರೂ ಸಹಕರಿಸಬೇಕು.ವಿಶೇಷವಾಗಿ ಶಾಲಾ-ಕಾಲೇಜುವಿದ್ಯಾರ್ಥಿ ಸಮೂಹ ಯಾವುದೇಕಾರಣಕ್ಕೂ ದುಶ್ಚಟಗಳಿಗೆಬಲಿಯಾಗಬಾರದು.

ಫ್ಯಾಷನ್‌,ಗೆಳೆಯರ ಒತ್ತಡ ಇತರೆ ಕಾರಣಮುಂದೊಡ್ಡಿ ಗಾಂಜಾ ಮತ್ತಿತರ ಮಾದಕವಸ್ತುಗಳ ಬಳಕೆ ಮಾಡಬಾರದು.ವಿದ್ಯಾರ್ಜನೆಗೆ ಹೆಚ್ಚಿನ ಗಮನ ಮತ್ತುಮಹತ್ವ ನೀಡುವ ಮೂಲಕ ಒಳ್ಳೆಯಭವಿಷ್ಯ ರೂಪಿಸಿಕೊಳ್ಳಬೇಕು. ಯಾರಿಯೇಆಗಲಿ ಮಾದಕ ವಸ್ತುಗಳ ಸಾಗಾಟ, ಬಳಕೆಮಾಡುವುದು ಕಂಡು ಬಂದಲ್ಲಿ ಕಠಿಣಕ್ರಮ ಜರುಗಿಸಲಾಗುವುದು ಎಂದುತಿಳಿಸಿದರು.ಹೆಚ್ಚುವರಿ ಪೊಲೀಸ್‌ ಅಧೀಕ್ಷಕಅರ್‌.ಬಿ. ಬಸರಗಿ, ಡಿಸಿಆರ್‌ಬಿ ಡಿವೈಎಸ್ಪಿಬಿ.ಎಸ್‌. ಬಸವರಾಜ್‌, ಚನ್ನಗಿರಿ ಡಿವೈಎಸ್ಪಿಕೆ.ಎಂ. ಸಂತೋಷ್‌ ಮತ್ತು ಸಿಬ್ಬಂದಿಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next