Advertisement

ಊಟ ವಿತರಿಸಿ ವಿನೂತನ ಪ್ರತಿಭಟನೆ

06:15 PM Oct 07, 2021 | Team Udayavani |

ದಾವಣಗೆರೆ: ಕಳೆದ ಐದು ತಿಂಗಳನಿಂದ ಬಾಕಿಇರುವ ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಕೆಸಿಇಟಿ ಗೃಹವೈದ್ಯರು ಬುಧವಾರ ಸುರಿಯುವ ಮಳೆಯಲ್ಲೇ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ಚಿಗಟೇರಿ ಆಸ್ಪತ್ರೆಎದುರು ಸಾರ್ವಜನಿಕರಿಗೆ ಉಚಿತವಾಗಿ ಊಟ ವಿತರಿಸಿದರು.ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ಶ್ರೀಜಯದೇವ ವೃತ್ತದಲ್ಲಿ ಮಳೆಯನ್ನೂ ಲೆಕ್ಕಿಸದೆಪ್ರತಿಭಟನೆ ನಡೆಸುವ ಮೂಲಕ ತಮ್ಮ ಹಕ್ಕಾದಶಿಷ್ಯ ವೇತನ ನೀಡಬೇಕು. ಆ ಮೂಲಕ ಕೊರೊನಾವಾರಿಯರ್ಸ್‌ಗಳಿಗೆ ನಿಜವಾಗಿ ಗೌರವ ನೀಡಬೇಕು ಎಂದು ಒತ್ತಾಯಿಸಿದರು.

ಕೆಸಿಇಟಿ ಇಂಟರ್ನಿಗಳಾದನಮಗೆ ಕಳೆದ ಐದು ತಿಂಗಳನಿಂದ ಶಿಷ್ಯವೇತನಇಲ್ಲದೆ ತೊಂದರೆಯಲ್ಲಿದ್ದೇವೆ. ಕೂಡಲೇ ಶಿಷ್ಯವೇತನಬಿಡುಗಡೆ ಮಾಡುವ ಮೂಲಕ ಅನುಕೂಲಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆದಿರುವ ಇಂಟರ್ನಿಗಳು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಹಲವುವರ್ಷಗಳಿಂದ ಶಿಷ್ಯವೇತನ ಪಾವತಿಸುತ್ತಿದೆ. ಆದರೆ ಕಳೆದ 5 ತಿಂಗಳಿನಿಂದ ಶಿಷ್ಯವೇತನ ನೀಡಿಲ್ಲ. ಸಂಬಂಧಪಟ್ಟ ಸರ್ಕಾರಿ ಅಧಿ ಕಾರಿಗಳುಮತ್ತು ಕಾಲೇಜು ಆಡಳಿತವನ್ನು ಹಲವು ಬಾರಿಸಂಪರ್ಕಿಸಿದರೂ ಪರಿಹಾರ ದೊರೆತಿಲ್ಲ ಎಂದರು.ಕಳೆದ ಐದು ತಿಂಗಳನಿಂದ ಶಿಷ್ಯವೇತನ ನೀಡದಿದ್ದರೂ ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯತೆಯ ಆಧಾರದ ಮೇಲೆ ನಮ್ಮಕೆಲಸವನ್ನು ನಿಲ್ಲಿಸಲಿಲ್ಲ.

ಮುಷ್ಕರ ನಡೆಸುತ್ತಲೇ ವೈದ್ಯಕೀಯ ಸೇವೆ ಮುಂದುವರೆಸುತ್ತೇವೆ. ಶಿಷ್ಯವೇತನಕ್ಕೆ ಒತ್ತಾಯಿಸಿ ಅನಿವಾರ್ಯವಾಗಿಮುಷ್ಕರಕ್ಕೆ ಇಳಿದಿದ್ದೇವೆ. ಸರ್ವೋತ್ಛನ್ಯಾಯಾಲಯವು ಜು. 17 ರಂದು ಎಲ್ಲಾ ರಾಜ್ಯಗಳಿಗೆಎಲ್ಲರಿಗೂ ಸಂಬಳ ನೀಡುವಂತೆ ಆದೇಶ ನೀಡಿದೆ.

Advertisement

ಕೋವಿಡ್‌ ಸೇವೆಯಲ್ಲಿ ತೊಡಗಿರುವ ವೈದ್ಯರಿಗೆ 5 ತಿಂಗಳ ನಂತರವೂ ಒಂದು ರೂಪಾಯಿ ಕೂಡಪಾವತಿಸಿಲ್ಲ . ಕೂಡಲೇ ಸಂಬಂಧಿತರು ಶಿಷ್ಯವೇತನಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಖ್ಯದ್ವಾರದಲ್ಲಿಸಾರ್ವಜನಿಕರಿಗೆ ಊಟ ವಿತರಿಸಿದರು.ಶಿಷ್ಯವೇತನ ಇಲ್ಲದೆ ವ್ಯಾಸಂಗಮುಂದುವರೆಸುವುದೇ ತುಂಬಾ ಕಷ್ಟವಾಗುತ್ತಿದೆ.

ಹೋಟೆಲ್‌ ಉದ್ಯಮ ನಡೆಸುವ ಮೂಲಕ ಜೀವನ,ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ತಂದೊಡ್ಡಲಾಗಿದೆಎಂದು ತಿಳಿಸಿದರು.ನಂತರ ಬಾಪೂಜಿ ವಿದ್ಯಾಸಂಸ್ಥೆ ಗೌರವಕಾರ್ಯದರ್ಶಿ, ಶಾಸಕ ಶಾಮನೂರು ಶಿವಶಂಕರಪ್ಪಅವರನ್ನು ಭೇಟಿ ಮಾಡಿದರು.ಶಿಷ್ಯವೇತನ ಬಿಡುಗಡೆ ಆಗದಿರುವುದು,ಅನಿರ್ದಿಷ್ಟಾವಧಿ ಮುಷ್ಕರದ ಬಗ್ಗೆ ಗಮನಕ್ಕೆತಂದರು.

ಅ. 8 ರಂದು ಶುಕ್ರವಾರ ಮತ್ತೆ ಭೇಟಿಮಾಡುವಂತೆ ಶಾಮನೂರು ಶಿವಶಂಕರಪ್ಪತಿಳಿಸಿದರು. ಅನಿರ್ದಿಷ್ಟಾವಧಿ ಮುಷ್ಕರದ ಅಂಗವಾಗಿಗುರುವಾರ ಬೆಳಗ್ಗೆ 9:30ಕ್ಕೆ ಜಯದೇವ ವೃತ್ತದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next