Advertisement

ಬಿಸಿಲಿಗೆ ಬಳಲಿ ಬೆಂಡಾದ ಬೆಣ್ಣೆ ನಗರಿ ಜನ

01:49 PM Apr 07, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಸೂರ್ಯನ ಪ್ರಖರತೆದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲಿನ ಝಳದಿಂದರಕ್ಷಿಸಿಕೊಳ್ಳಲು ಜನರು ನಾನಾ ರೀತಿಯ ಕ್ರಮಗಳತ್ತ ಚಿತ್ತಹರಿಸಿದ್ದಾರೆ.ಸೋಮವಾರ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ಉಷ್ಣಾಂಶ ದಾಖಲಾಗಿದೆ.

Advertisement

ಮುಂದಿನ ಐದು ದಿನಗಳಲ್ಲಿಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 38 ಡಿಗ್ರಿಸೆಲ್ಸಿಯಸ್‌ ಇರಲಿದ್ದು, ಗುರುವಾರ ಮಾತ್ರ ತಾಪಮಾನ39 ಡಿಗ್ರಿಸೆಲ್ಸಿಯಸ್‌ಗೆ ಏರಲಿದೆ ಎಂದು ಹವಾಮಾನಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್‌ ಮೂರನೇವಾರದಿಂದ ಉಷ್ಣಾಂಶ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆಎನ್ನಲಾಗಿದೆ.

ಬೆಳಿಗ್ಗೆ 11 ಗ ‌ಂಟೆಯಾಗುತ್ತಲೇ ಸೂರ್ಯತನ್ನ ಪ್ರಖರತೆ ಹೆಚ್ಚಿಸಿಕೊಳ್ಳುತ್ತಿದ್ದು, ಮಧ್ಯಾಹ್ನ 12ರಿಂದನಾಲ್ಕು ಗಂಟೆ ಅವಧಿಯಲ್ಲಿನ ಓಡಾಟ ಮಹಿಳೆ,ವೃದ್ಧರು, ಮಕ್ಕಳಾದಿಯಾಗಿ ಎಲ್ಲರಿಗೂ ಕಷ್ಟವಾಗುತ್ತಿದೆ.ಒಂದು ಕಡೆ ಬಿಸಿಲಿಗೆ ಕಾದು ಕೆಂಡದಂತಾದ ಕಾಂಕ್ರಿಟ್‌ರಸ್ತೆಯ ಉಗಿ, ಇನ್ನೊಂದೆಡೆ ಮೇಲಿನ ಸುಡುಬಿಸಿಲು.ಈ ನಡುವೆ ಕೆಲವರು ಕೊಡೆ, ಟೋಪಿ ಬಳಸಿದರೆ,ಮತ್ತೆ ಕೆಲವರು ಆಟೋರಿಕ್ಷಾ ಪ್ರಯಾಣಕ್ಕೆ ಮೊರೆಹೋಗುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next