Advertisement

ಶಾಸಕ ರೇಣುಕಾಚಾರ್ಯ ಬಂಧಿಸಿ ಗಡಿಪಾರು ಮಾಡಿ

06:07 PM Apr 03, 2022 | Team Udayavani |

ದಾವಣಗೆರೆ: ಬೇಡ ಜಂಗಮ ಹೆಸರಲ್ಲಿ ನಕಲಿಜಾತಿ ಪ್ರಮಾಣಪತ್ರ ಪಡೆದಿರುವ, ದಲಿತಹೋರಾಟಗಾರರ ವಿರುದ್ಧ ಸುಳ್ಳು ಮೊಕದ್ದಮೆಹೂಡಿರುವ ಡಾ| ಎಂ.ಪಿ. ದಾರಕೇಶ್ವರಯ್ಯ ಮತ್ತುಅವರಿಗೆ ಕುಮ್ಮಕ್ಕು ನೀಡಿರುವ ಹೊನ್ನಾಳಿ ಶಾಸಕಎಂ.ಪಿ. ರೇಣುಕಾಚಾರ್ಯ ಅವರನ್ನ ಕೂಡಲೇಬಂಧಿಸಬೇಕು ಎಂದು ದಲಿತ ಪರ ಸಂಘಟನೆಗಳಮುಖಂಡ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷಡಾ| ವೈ. ರಾಮಪ್ಪ ಒತ್ತಾಯಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಶಾಸಕ ಎಂ.ಪಿ. ರೇಣುಕಾಚಾರ್ಯಅವರು ಬೇಡ ಜಂಗಮ ಜಾತಿ ಪ್ರಮಾಣಪತ್ರಪಡೆದಿರುವುದಾಗಿ ಸದನದಲ್ಲೇ ಒಪ್ಪಿಕೊಂಡಿದ್ದಾರೆ.ಹಾಗಾಗಿ ಕೂಡಲೇ ಅವರನ್ನು ಬಂಧನಕ್ಕೆಒಳಪಡಿಸಬೇಕು ಮಾತ್ರವಲ್ಲ ರಾಜ್ಯದಿಂದಲೇಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಕಾಯ್ದೆ ಅಧಿನಿಯಮ 7ರ ಪ್ರಕಾರ ಸುಳ್ಳು ಮಾಹಿತಿಸಲ್ಲಿಸಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದುಶಿಕ್ಷಾರ್ಹ ಮತ್ತು ಅಕ್ಷಮ್ಯ ಅಪರಾಧ. ಹಾಗಾಗಿರಾಜ್ಯ ಸರ್ಕಾರ ಕೂಡಲೇ ರೇಣುಕಾಚಾರ್ಯವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು.

ಶಾಸಕಸ್ಥಾನದಿಂದ ಕಿತ್ತೂಗೆಯಬೇಕು. ರೇಣುಕಾಚಾರ್ಯಮತ್ತು ದಾರಕೇಶ್ವರಯ್ಯ ಅವರನ್ನು ಒಂದರೆಡುದಿನಗಳಲ್ಲಿ ಬಂಧಿಸಬೇಕು ಎಂದು ಕೋರಿಜಿಲ್ಲಾ ರಕ್ಷಣಾಧಿಕಾರಿಯವರಿಗೆ ಮನವಿಸಲ್ಲಿಸಲಾಗುವುದು. ಬಂಧನಕ್ಕೆ ಒಳಪಡಿಸಸದೇಹೋದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿಜಿಲ್ಲೆ, ರಾಜ್ಯಮಟ್ಟದಲ್ಲಿ ತೀವ್ರ ಸ್ವರೂಪದ ಹೋರಾಟನಡೆಸಲಾಗುವುದು ಎಂದು ಎಚ್ಚರಿಸಿದರು.

ಬೆಂಗಳೂರು ಉತ್ತರ ತಾಲೂಕಿನಲ್ಲೇ600ಕ್ಕೂ ಹೆಚ್ಚು ಜನರು ಬೇಡ ಜಂಗಮ ಜಾತಿಪ್ರಮಾಣಪತ್ರ ಪಡೆದಿರುವು ದು ಯಕ್ಷ ಮತ್ತುಅಚ್ಚರಿಯ ಪ್ರಶ್ನೆಯಾಗಿದೆ. ಪರಿಶಿಷ್ಟ ಜಾತಿ ಮತ್ತುಪಂಗಡಗಳ ಕಾಯ್ದೆ ಅಧಿನಿಯಮ 4ರ ಪ್ರಕಾರಸ್ಥಳ ಮಹಜರು, ಪೂರ್ವಜರ ಪೂರ್ವಾಪರಮಾಹಿತಿ ಪಡೆದ ನಂತರವೇ ಜಾತಿ ಪ್ರಮಾಣಪತ್ರನೀಡಬೇಕು. ಆದರೆ, ಯಾವುದೇ ನಿಯಮಅನುಸರಿಸದೆ ಜಾತಿ ಪ್ರಮಾಣಪತ್ರ ನೀಡಲಾಗಿದೆ.ಸಂಬಂಧಿತರ ವಿರುದ್ಧವೂ ಸರ್ಕಾರ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next