Advertisement

ತಂಬಾಕು ಮುಕ್ತ ಪ್ರದೇಶವಾಗಿಸಲು ಶ್ರಮಿಸಿ

04:30 PM Mar 10, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಕಚೇರಿಗಳುಮತ್ತು ಶಾಲಾ ಕಾಲೇಜುಗಳ ಸುತ್ತಮುತ್ತಲಿನಪ್ರದೇಶವನ್ನು ತಂಬಾಕು ಮುಕ್ತವನ್ನಾಗಿಸಲುಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕರುಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿಪೂಜಾರ್‌ ವೀರಮಲ್ಲಪ್ಪ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಜಿಲ್ಲಾಡಳಿತ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಕೋಶದ ವತಿಯಿಂದ ಆಯೋಜಿಸಲಾಗಿದ್ದ ತ್ತೈಮಾಸಿಕಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ತಂಬಾಕು ನಿಯಂತ್ರಣಕಾಯ್ದೆ (ಕೋಟಾ³) ಅನ್ವಯ ಶಾಲಾ-ಕಾಲೇಜುಗಳಸುತ್ತಮುತ್ತ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕುಮಾರಾಟಕ್ಕೆ ಅವಕಾಶವಿಲ್ಲ. ಕಾಯ್ದೆ ಉಲ್ಲಂಘಿಸಿಮಾರಾಟ ಮಾಡುವವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳುವ ಜೊತೆಗೆ ಅಧಿಕಾರಿಗಳು ವರದಿನೀಡಬೇಕು.

ವಿಶೇಷವಾಗಿ ಗ್ರಾಮೀಣ ಪ್ರದೇಶದವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕು. ತಾಲೂಕುಮಟ್ಟದಲ್ಲಿ ಕಡ್ಡಾಯವಾಗಿ ಪ್ರತಿ ತಿಂಗಳು ಆಕಸ್ಮಿಕದಾಳಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಾರ್‌ಮತ್ತು ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕಾಗಿ ಪ್ರತ್ಯೇಕಕಿರುಕೊಠಡಿ ಇದ್ದರೆ ಮಾತ್ರ ಅನುಮತಿ ನೀಡಬೇಕು.

ಚಿತ್ರಮಂದಿರಗಳ ಒಳಗಡೆ ಮತ್ತು ಆವರಣದಲ್ಲಿಸಾರ್ವಜನಿಕರು ಧೂಮಪಾನ ಮಾಡದಂತೆ ಪೊಲೀಸ್‌ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಮಟ್ಟದಲ್ಲಿ ಕಾರ್ಯಪಡೆ ಸಮಿತಿ ರಚನೆ ಮಾಡುವಂತೆಸಲಹೆ ನೀಡಿದರು, ಎಲ್ಲಾ ಶಾಲಾ-ಕಾಲೇಜುಗಳಲ್ಲಿದೈಹಿಕ ಶಿಕ್ಷಕರನ್ನು ತಂಬಾಕು ನಿಯಂತ್ರಣ ಉಸ್ತುವಾರಿಅ ಕಾರಿಯಾಗಿ ನೇಮಕ ಮಾಡಬೇಕು ಎಂದುಸೂಚಿಸಿದರು.

ದಾವಣಗೆರೆ ಉತ್ತರ ವಲಯದ ಬಿಇಒ ಅಂಬಣ್ಣಮಾತನಾಡಿ, ಗ್ರಾಮೀಣ ಮತ್ತು ನಗರ ವ್ಯಾಪ್ತಿಯತಂಬಾಕು ನಿಷೇಧದ ಪ್ರದೇಶದಲ್ಲಿ ದಾಳಿ ನಡೆಸುವವೇಳೆ ಮಾರಾಟಗಾರರ ಮೇಲೆ ಯಾವುದೇ ಪ್ರಕರಣದಾಖಲಿಸದೆ ತಂಬಾಕುಗಳನ್ನು ಸೀಜ್‌ ಮಾಡಿ ನಂತರದಂಡ ವಸೂಲಿ ಮಾಡಿಕೊಂಡು ಬರುತ್ತೀರಿ. ನಂತರಅವರು ಮತ್ತೆ ತಂಬಾಕು ಮಾರಾಟ ಕೈಗೊಳ್ಳುತ್ತಾರೆ.

Advertisement

ಈದಿಸೆಯಲ್ಲಿ ಕಠಿಣ ಕ್ರಮದ ಅಗತ್ಯವಿದೆ ಎಂದರು.ಇದಕ್ಕೆ ಅಪರ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಊರಿನಶಾಲೆಯ ಮುಖ್ಯ ಶಿಕ್ಷಕರಿಗೆ ತಂಬಾಕು ಮಾರಾಟಮಾಡುವವರರನ್ನು ತಡೆಯುವ ಅಧಿಕಾರವಿದೆ.ಒಂದು ವೇಳೆ ಅವರು ಪುನಃ ಮಾರಾಟ ಮಾಡಿದರೆತಕ್ಷಣ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕುಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next